ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಇಂಚರಾ ಗೋವಿಂದರಾಜು ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಹಾಗೂ ಶ್ರೀನಿವಾಸಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ, (ಜುಲೈ.23): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಏನಾದ್ರು ಬಂದ್ರೆ ಸೋಲಿನ ವಿದಾಯ ಖಚಿತವಾಗುತ್ತೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಇಂಚರಾ ಗೋವಿಂದರಾಜು ಹೇಳಿದ್ದಾರೆ.
ಕೋಲಾರದಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಏನಾದ್ರು ಬಂದ್ರೆ ಸೋಲಿನ ವಿದಾಯ ಖಚಿತವಾಗುತ್ತೆ, ಹೇಗಿದ್ರೂ ಕೋಲಾರ ಜಿಲ್ಲೆಯ ತಿರುಪತಿ ಸಮೀಪ ಇರೋದ್ರಿಂದ ಮೂರು ನಾಮ ಹಾಕಿ ತಿರುಪತಿಗೆ ಕಳುಹಿಸುತ್ತೇವೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಮುಂದಿನ ಎಲೆಕ್ಷನ್‌ಗೆ ಆಯ್ದುಕೊಳ್ಳುವ ಕ್ಷೇತ್ರ ಯಾವುದು..?
ಕೋಲಾರದ ಜನರು ಸೋಲಿಸಿ ಸೆಂಡ್ ಅಪ್ ಮಾಡಿ ಕಳುಹಿಸುತ್ತಾರೆ.ಇಲ್ಲಿನ ಜನರು ಸ್ವಾಭಿಮಾನಿಗಳು ಇದ್ದಾರೆ ಸ್ಥಳೀಯರು ಯಾರು ಶಾಸಕರಾಗುವಂತಹ ಆರ್ಹತೆಗಳು ಇಲ್ವಾ? ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೊಟ್ಟಿದ್ದು ಕೋಲಾರ ಜಿಲ್ಲೆ. ಕೋಲಾರದಿಂದ ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪ, ಭೈರೇಗೌಡ ಅಂತಹವರನ್ನು ಗೆಲ್ಲಿಸಿದ್ದು ಕೋಲಾರ ಜಿಲ್ಲೆ.ನಿಷ್ಠಾವಂತ ನಾಯಕರನ್ನ ನಾವು ಕೊಟ್ಟಿದ್ದೇವೆ.ಈಗ ಸಿದ್ದರಾಮಯ್ಯ ಬಂದ್ರೆ ಸೋಲಿಸಿ ವಿದಾಯ ಹೇಳುತ್ತೇವೆ ಎಂದು ಹೇಳಿದರು.
ಇನ್ನು ಸ್ಥಳೀಯ ಜೆಡಿಎಸ್ ಪಕ್ಷದ ನಾಯಕರು ಟೊಮ್ಯಾಟೊ ಮತ್ತು ಕೋಳಿಮೊಟ್ಟೆ ಮಾರುವವರು ಎಂದು ಹೇಳಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಗೆ ಮಾತಿಗೆ ತಿರುಗೇಟು ನೀಡಿದ ಗೋವಿಂದರಾಜು, ಸಂಸ್ಕಾರ ಇಲ್ಲದ ನಾಲಿಗೆ ಚಪ್ಪಲಿಗೆ ಸಮ,ಕಳೆದ ನಾಲ್ಕು ವರ್ಷಗಳಿಂದ ಸಾಲ ಮಾಡಿ ವರ್ತೂರು ಪ್ರಕಾಶ್ ಕ್ಷೇತ್ರ ಬಿಟ್ಟಿದ್ದ. ಆತ ಮೈ ಮೇಲೆ ಬಟ್ಟೆ ಇಲ್ಲದೆ ಕೀಲೋ ಮೀಟರ್ ಗಟ್ಟಲೆ ಓಡಿಹೋಗಿದ್ದ ವ್ಯಕ್ತಿ. ಜನರ ನಂಬಿಕೆ ಕಳೆದುಕೊಂಡು ಕ್ಷೇತ್ರ ಬಿಟ್ಟಿದ್ದವನು ಈಗ ಮತ್ತೆ ಬಂದಿದ್ದಾನೆ. ಅವರಿಗೆ ಟೊಮ್ಯಾಟೊ ಹಾಗೂ ಕೋಳಿ ಮೊಟ್ಟೆ ಮಾರುವ ರೈತರೆ ಉತ್ತರ ಕೊಡುತ್ತಾರೆ. ಹಿಂದೇ ಮುಂದೇ ಯಾರೂ ಇಲ್ಲದ ಅವರು ಸಜ್ಜನಿಕೆ ಗೊತ್ತಿಲ್ಲದ ವ್ಯಕ್ತಿ ಎಂದು ತಿರುಗೇಟು ನೀಡಿದ್ರು.
ರಮೇಶ್- ಮುನಿಯಪ್ಪ ಮಧ್ಯೆ ಪ್ರತಿಷ್ಠಗಾಗಿ ಬಣ ರಾಜಕೀಯ: ಕೋಲಾರದಲ್ಲಿ ಕಾಂಗ್ರೆಸ್ ನಾಯಕರ ಹೈಡ್ರಾಮಾ..!
ಇನ್ನು ತಮ್ಮದೇ ಪಕ್ಷದ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ ವಿರುದ್ಧ ಗೋವಿಂದರಾಜು ಆಕ್ರೋಶ ಹೊರಹಾಕಿದ್ದು, ಜೆಡಿಎಸ್ ತೊರೆದು ಕಾಂಗ್ರೆಸ್ ಜೊತೆ ಸೇರಿಕೊಂಡಿರುವ ಶ್ರೀನಿವಾಸಗೌಡ 2023ಕ್ಕೆ ಅಭ್ಯರ್ಥಿಯಾದ್ರೆ ಅವರನ್ನ ಸೋಲಿಸೋದೆ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಕಳೆದ ಬಾರಿ ಚುನಾವಣೆಯಲ್ಲಿ ಎಲ್ಲರ ಸೇರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ವಿ. ಅದನ್ನೆಲ್ಲಾ ಒದ್ದುಕೊಂಡು ಪಕ್ಷ ತೊರೆದು ಕಾಂಗ್ರೇಸ್ ಗೆ ಸೆರ್ಪಡೆಯಾಗಿದ್ದಾರೆ. ಶ್ರೀನಿವಾಸಗೌಡ್ರು ಗಂಡಸೇ ಆಗಿದ್ರೆ ಕಾಂಗ್ರಸ್ ನಿಂದ ಟಿಕೇಟ್ ಪಡೆದುಕೊಂಡು ಬಂದು ಸ್ಪರ್ದಿಸಲಿ. ಅವರಿಗೆ 50 ವರ್ಷಗಳ ರಾಜಕೀಯ ಅನುಭವ ಇದ್ದರೆ, 2023ಕ್ಕೆ ಶಾಸಕಾಗಿ ಆಯ್ಕೆ ಹಾಗಿದ್ದೇ ಆದರೆ. ಶ್ರೀನಿವಾಸಗೌಡರ ಮನೆ ಮುಂದೆ ವಾಚ್ ಮೆನ್ ಹಾಗಿ ಕೆಲಸ ಮಾಡ್ತೇನೆ ಎಂದು ಸವಾಲು ಹಾಕಿದ್ರು.