ನಟಿ ಜೊತೆಗಿನ ಫೋಟೋ ವೈರಲ್, ಸ್ಪಷ್ಟನೆ ಕೊಟ್ಟ ವಿಜಯಾನಂದ ಕಾಶಪ್ಪನವರ್

Published : Jul 23, 2022, 06:57 PM ISTUpdated : Jul 23, 2022, 07:36 PM IST
ನಟಿ ಜೊತೆಗಿನ ಫೋಟೋ ವೈರಲ್, ಸ್ಪಷ್ಟನೆ ಕೊಟ್ಟ ವಿಜಯಾನಂದ ಕಾಶಪ್ಪನವರ್

ಸಾರಾಂಶ

ಮಾಜಿ ಶಾಸಕ  ವಿಜಯಾನಂದ ಕಾಶಪ್ಪನವರ್ ಅವರು ಮಾಡೆಲ್ ಕಮ್ ನಟಿ ಜತೆಗಿನ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾವೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ

ಬೆಂಗಳೂರು, (ಜುಲೈ.23): ಬಾಗಲಕೋಟೆಯ ಹುನಗುಂದ ಕಾಂಗ್ರೆಸ್‌ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ನಟಿಯೊಬ್ಬರ ಜೊತೆಗಿರುವ ಫೋಟೋಗಳು ವೈರಲ್ ಆಗುತ್ತಿವೆ. ಈ ಬಗ್ಗೆ ಸ್ವತಃ ವಿಜಯಾನಂದ ಕಾಶಪ್ಪನವರ್ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಕೊಪ್ಪಳದ ಕುಷ್ಟಗಿಗೆ ಆಗಮಿಸಿದ್ದು, ವೇಳೆ ಆ ಫೋಟೋಗಳ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಕುಷ್ಟಗಿಯಲ್ಲಿ ಇಂದು(ಶನಿವಾರ) ಮಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯಾನಂದ  ಕಾಶಪ್ಪನವರ್,   ನನಗೆ ಆ ಸರ್ಟಿಫಿಕೇಟ್ ತಂದು ತೋರಿಸಿದ್ರೇ ಮಾತನಾಡುತ್ತೇನೆ. ನನಗೆ ಯಾವುದೇ ಮಾಹಿತಿ ಇಲ್ಲದೇ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯಿಸೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಘಟನೆಯ ಹಿಂದೆ ಎಸ್‌ಡಿಪಿಐ ಕೈವಾಡ: ಕಾಶಪ್ಪನವರ ಆರೋಪ

ಯಾರೂ ವಯಕ್ತಿಕ ಬದುಕಿಗೆ ಯಾರು ಹೋಗಬಾರದು. ವಯಕ್ತಿಕ ಜೀವನವೇ ಬೇರೆ,ರಾಜಕೀಯವೇ ಬೇರೆ. ವಿರೋಧಿಗಳು ಹೀಗೆ ಮಾಡೋದು ಸಹಜ ಎಂದು ಹೇಳಿದರು.

ನಟಿ ಜತೆಗಿನ ಕೆಲವು ಫೋಟೋ ವೈರಲ್

ಮಾಡೆಲ್ ಕಮ್ ನಟಿ ಜತೆಗಿನ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾವೆ. ಅಲ್ಲದೇ ಮಗುವೊಂದರ ಜನನ ಪ್ರಮಾಣ ಪತ್ರದಲ್ಲಿ ವಿಜಯಾನಂದ ಕಾಶಪ್ಪನವರ ಹೆಸರು ಇರುವುದು ಈ ಪ್ರಕರಣಕ್ಕೆ ಪುಷ್ಠಿ ನೀಡುವಂತಿದೆ.

ಹೌದು..  ಮಾಡೆಲ್‌ ಒಬ್ಬರ ಮಗುವಿನ ತಂದೆಯ ಕಾಲಂ ನಲ್ಲಿ ವಿಜಯಾನಂದ ಕಾಶಪ್ಪನವರ್ ಎಂಬುದಾಗಿ ಉಲ್ಲೇಖಿಸಿರುವ ಜನನ ಪ್ರಮಾಣ ಪತ್ರವೊಂದು ವೈರಲ್ ಆಗಿದೆ.  ಈ ಹಿನ್ನೆಲೆಯಲ್ಲಿ ಪೈಪೋಟಿ ಎಂಬ ಚಿತ್ರದಲ್ಲಿ ನಟಿಸಿದ ನಟಿಯೊಂದಿಗೆ ವಿಜಯಾನಂದ ಕಾಶಪ್ಪನವರ್ ಎರಡನೇ ವಿವಾಹವಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಬೇರೆ ರೀತಿಯಲ್ಲಿ ಗುಸು ಗುಸು ಪಿಸು ಪಿಸು ಶುರುವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್