ಜೆಡಿಎಸ್​​ ಅಡ್ಜೆಸ್ಟ್​ ಆಗಲ್ಲ, ಕಾಂಗ್ರೆಸ್​ ಅಷ್ಟಕ್ಕಷ್ಟೇ, ಬಿಜೆಪಿಯತ್ತ ಇಬ್ಬರು ಮಾಜಿ ಶಾಸಕರು

By Suvarna News  |  First Published May 6, 2022, 5:33 PM IST

* ಜೆಡಿಎಸ್​​ ನನಗೆ ಅಡ್ಜೆಸ್ಟ್​ ಆಗಲ್ಲ, ಕಾಂಗ್ರೆಸ್​ ಅಷ್ಟಕ್ಕಷ್ಟೇ
* ಬಿಜೆಪಿ ಸೇರುವುದನ್ನು ಖಚಿತಪಡಿಸಿದ ಮಾಜಿ ಶಾಸಕ
* ಅಭಿಮಾನಿಗಳಿಗೆ ಭರ್ಜರಿ ಬಿರಿಯಾನಿ ತಯಾರಿ


ಕೋಲಾರ, (ಮೇ.06): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಪಕ್ಷಾಂತರ ಪರ್ವ ಶುರುವಾಗಿದ್ದು, ರಾಜಕೀಯ ಗರಿಗೆದರಿದೆ.

ಹೌದು..ಕಾಂಗ್ರೆಸ್, ಜೆಡಿಎಸ್‌ನ ಹಲವು ಮುಖಂಡರು ಹಾಗೂ ಪ್ರಮುಖ ಮಾಜಿ ಶಾಸಕರಿಗೆ ಬಿಜೆಪಿ ಗಾಳಹಾಕಿದೆ. ಅದರಕ್ಕೆ ಪೂರಕವೆಂಬಂತೆ ಕೋಲಾರ ಜಿಲ್ಲೆಯ ಇಬ್ಬರು ಮಾಜಿ ಶಾಸಕರು ನಾಳೆ(ಶನಿವಾರ) ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

Tap to resize

Latest Videos

ಯೆಸ್‌...ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಆಪ್ತರಾಗಿದ್ದ ವರ್ತೂರ್ ಪ್ರಕಾಶ್ ಬಿಜೆಪಿ ಸೇರುವುದು ಪಕ್ಕಾ ಆಗಿದೆ. ಇನ್ನೂ ಅದೇ ಕೋಲಾರ ಜಿಲ್ಲೆಯ ಮಾಜಿ ಶಾಸಕ ಮಾಲೂರು ಮಂಜುನಾಥ್ ಬಿಜೆಪಿ ಸೇರುತ್ತಿದ್ದಾರೆ.

ಮಂಡ್ಯದಲ್ಲಿ ಬಿಜೆಪಿ ಬಿಗ್ ಆಪರೇಷನ್, ಗರಿಗೆದರಿದ ರಾಜಕೀಯ!

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ವರ್ತೂರ್ ಪ್ರಕಾಶ್,  ಮುಂದಿನ ಚುನಾವಣೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ ಸೇರ್ಪಡೆ ಕುರಿತು ವರ್ತೂರು ಪ್ರಕಾಶ್​ ಖಚಿತಪಡಿಸಿದರು.

ಕಾಂಗ್ರೆಸ್ ಸೇರ್ಪಡೆ ಕುರಿತು ಆ ಪಕ್ಷದ ಮುಖಂಡರನ್ನು ಭೇಟಿ ಮಾಡಿದರೂ ಪ್ರಯೋಜನ ಆಗಲಿಲ್ಲ, ಜೆಡಿಎಸ್ ನನಗೆ ಅಡ್ಜೆಸ್ಟ್ ಆಗೋಲ್ಲ.ಬಿಜೆಪಿಯವರು ಪಕ್ಷ ಸೇರಲು ಆಹ್ವಾನ ಕೊಟ್ಟಿದ್ದಾರೆ.ನಮ್ಮ ಕಾರ್ಯಕರ್ತರು ಸಹ ಒಪ್ಪಿದ್ದಾರೆ. ನಾಳೆ(ಮೇ.07) 10 ಗಂಟೆಗೆ ಮಲ್ಲೇಶ್ವರಂ ನ ಕಛೇರಿಯಲ್ಲಿ ಬಿಜೆಪಿ  ಸೇರಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮಾಲೂರಿನ ಮಾಜಿ ಶಾಸಕ ಮಂಜುನಾಥ್ ಗೌಡ ಮತ್ತು ನಾನು ಒಟ್ಟಿಗೆ ಪಕ್ಷ ಸೇರ್ಪಡೆ ಆಗಲಿದ್ದೇವೆ. ಮುಖ್ಯಮಂತ್ರಿ ಗಳ ಉಪಸ್ಥಿತಿಯಲ್ಲಿ ಪಕ್ಷ ಸೇರ್ಪಡೆ ಆಗಲಿದ್ದೇನೆ. ನಾಳೆಯಿಂದ ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಲಿದ್ದು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆ ನನ್ನ ಕೆಲಸ. ನಾನೂ ಕೂಡ ಮೊದಲಿನಿಂದಲೂ ಹಿಂದುತ್ವ ಪಾಲಿಸಿಕೊಂಡು ಬಂದಿದ್ದೇನೆ.ಹಾಗಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಅಭಿಮಾನಿಗಳಿಗೆ ಭರ್ಜರಿ ಬಿರಿಯಾನಿ ವ್ಯವಸ್ಥೆ
ಯೆಸ್‌..ವರ್ತೂರ್ ಪ್ರಕಾಶ್ ಅವರು ಬಿಜೆಪಿ ಸೇರ್ಪಡೆಯಾಗುತ್ತಿರುವುದಕ್ಕೆ ತಮ್ಮ ಅಭಿಮಾನಿಗಳಿಗೆ ಭರ್ಜರಿ ಬಿರಿಯಾನಿ ವ್ಯವಸ್ಥೆ ಮಾಡಿಸಿದ್ದಾರೆ.

ನಾಳೆ (ಶನಿವಾರ) ಬೆಳಿಗ್ಗೆ ಚಿಕ್ಕ ತಿರುಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಮೂಲಕ ಬಿಜೆಪಿ  ಕಚೇರಿಗೆ ತೆರಳಲಿದ್ದಾರೆ. ಬೆಂಗಳೂರಿನಲ್ಲಿ ಬೆಳಗ್ಗೆ ಬಿಜೆಪಿ ಸೇರ್ಪಡೆಯಾದ ಬಳಿಕ ಕೋಲಾರ ಹೊರಹೊಲಯದ ಕೋಗಿಲೆಹಳ್ಳಿಯಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಅದಕ್ಕಾಗಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಿ ಬಿರಿಯಾನಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮಾಲೂರು ಮಂಜುನಾಥ್ ಸೇರ್ಪಡೆಗೆ ವಿರೋಧ
ಇನ್ನು ಮಾಲೂರು ಮಂಜುನಾಥ್ ಸೇರ್ಪಡೆಗೆ ಬಿಜೆಪಿ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ ಎಂದು ಆಗ್ರಹಿಸಿದ್ದಾರೆ.

ಆದ್ರೆ, ಇದಕ್ಕೆ ಸಚಿವ ಅಶೋಕ್ ಪ್ರತಿಕ್ರಿಯಿಸಿದ್ದು,    ಮಾಜಿ ಶಾಸಕ ಮಾಲೂರು ಮಂಜುನಾಥ್ ಬಿಜೆಪಿ ಸೇರ್ಪಡೆಗೆ ಯಾವುದೇ ವಿರೋಧ ಇಲ್ಲ. ಮಂಜುನಾಥ್ ಸೇರ್ಪಡೆಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ. ಹೈಕಮಾಂಡ್‌ನಿಂದ ಒಪ್ಪಿಗೆ ಬಂದಿದ್ದರಿಂದ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

click me!