ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಆಕಾಂಕ್ಷಿಗಳು ಇನಿಲ್ಲದ ಕಸರತ್ತು ಮಾಡ್ತಿದ್ದಾರೆ. ಮತದಾರರನ್ನು ಸೆಳೆಯಲು,ಕೈ ಕಮಾಂಡ್‌ಗೆ ಹತ್ತಿರವಾಗಲು ಹೊಸ ಮುಖಗಳು ತಮ್ಮದೇ ಆದ ರಣತಂತ್ರ ರೂಪಿಸುತ್ತಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಸೆ.12): ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಆಕಾಂಕ್ಷಿಗಳು ಇನಿಲ್ಲದ ಕಸರತ್ತು ಮಾಡ್ತಿದ್ದಾರೆ. ಮತದಾರರನ್ನು ಸೆಳೆಯಲು,ಕೈ ಕಮಾಂಡ್‌ಗೆ ಹತ್ತಿರವಾಗಲು ಹೊಸ ಮುಖಗಳು ತಮ್ಮದೇ ಆದ ರಣತಂತ್ರ ರೂಪಿಸುತ್ತಿದ್ದಾರೆ. ಇದು ಕೋಲಾರ ಜಿಲ್ಲೆಗೂ ಹೊರತಾಗಿಲ್ಲ. ಹೌದು! ಕೋಲಾರ ಜಿಲ್ಲೆಯಲ್ಲಿ ಒಬ್ಬೇ ಒಬ್ಬ ಬಿಜೆಪಿ ಪಕ್ಷದ ಶಾಸಕ ಇಲ್ಲದ ಕಾರಣ ಈ ಬಾರಿ ಇಲ್ಲಿ ಕನಿಷ್ಠ ಮೂರ್ನಾಲ್ಕು ಅಭ್ಯರ್ಥಿಗಳಾದ್ರೂ ಗೆಲ್ಲಲೇಬೇಕು ಅಂತ ರಾಜ್ಯದ ನಾಯಕರು ತೀರ್ಮಾನ ಮಾಡಿದ್ದಾರೆ.
ಇನ್ನು ಇದಕ್ಕೆ ಪೂರಕವಾಗಿ ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಸಹ ಹೆಚ್ಚಾಗಿದ್ದು, ಶತಾಯಗತಾಯ ಟಿಕೆಟ್ ಪಡೆದು ಗೆಲ್ಲಲೇ ಬೇಕು ಎಂದು ಪ್ರತಿದಿನ ಕ್ಷೇತ್ರದಲ್ಲಿ ಒಂದಿಲ್ಲೊಂದು ವಿಚಾರ ಇಡ್ಕೊಂಡು ತಿರುಗಾಡ್ತಿದ್ದಾರೆ. ಇನ್ನು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮಾಲೂರು ಕ್ಷೇತ್ರವನ್ನು ತೊರೆದು ಹೋದ ಬಳಿಕ ಬಿಜೆಪಿ ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳು ಪಟ್ಟಿ ಹೆಚ್ಚಾಗಿದೆ. ಮಾಜಿ ಶಾಸಕ ಮಂಜುನಾಥ ಗೌಡ, ಹೂಡಿ ವಿಜಯಕುಮಾರ್,ಪುರ ನಾರಾಯಣಸ್ವಾಮಿ ಸೇರಿದಂತೆ ಇನ್ನು ಕೆಲವರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
Kolar: ಯೋಗಾಭ್ಯಾಸ ದಿನನಿತ್ಯ ಬದುಕಿನ ಭಾಗವಾಗಲಿ: ಸಂಸದ ಮುನಿಸ್ವಾಮಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಮಾಜಿ ಶಾಸಕ ಮಂಜುನಾಥ್ ಗೌಡ ಬಿಜೆಪಿ ಸೇರಿದ ಬಳಿಕ ಒಮ್ಮೆ ಸಮಾವೇಶ ಮಾಡಿದ್ದು ಬಿಟ್ಟರೇ ಎಲ್ಲೂ ಹೆಚ್ಚಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ತಿಲ್ಲ ಅನ್ನೋ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರ್ತಿದೆ. ಮೂಲ ಬಿಜೆಪಿಯ ಕೆಲ ಮುಖಂಡರು ಸಹ ಮಂಜುನಾಥ್ ಗೌಡ ಬಿಜೆಪಿ ಸೇರ್ಪಡೆಗೆ ಅಡ್ಡಗಾಲು ಹಾಕಿದ್ರು ಸಹ ಅದು ವಿಫಲವಾಗಿದೆ. ಚುನಾವಣೆ ಸಮೀಪವಿದೆ, ಹೂಡಿ ವಿಜಯಕುಮಾರ್ ಕ್ಷೇತ್ರದಲ್ಲಿ ಬಿರುಸಿನಲ್ಲಿ ಕೆಲಸ ಮಾಡ್ತಿದ್ದಾರೆ, ಆದ್ರೂ ನಮ್ಮ ನಾಯಕರು ಬರ್ತಿಲ್ವಲ್ಲ ಎಂದು ಜೆಡಿಎಸ್ ತೊರೆದು ಮಂಜುನಾಥ್ ಗೌಡ ಜೊತೆ ಬಿಜೆಪಿ ಸೇರ್ಪಡೆ ಆಗಿರುವ ಬೆಂಬಲಿಗರು ಆತಂಕ ಹೊರ ಹಾಕಿದ್ದಾರೆ.
ಇನ್ನು ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿರುವ ಹೂಡಿ ವಿಜಯಕುಮಾರ್ ಬೆಂಬಲವಾಗಿ ಎಂಟಿಬಿ ನಾಗರಾಜ್ ಇದ್ದು, ಮೂಲ ಬಿಜೆಪಿಗರು ಸಹ ಜೊತೆಗಿದ್ದಾರೆ. ಇದರ ನಡುವೆ ಹಾಲಿ ಕಾಂಗ್ರೆಸ್ ಶಾಸಕರಾದ ಕೆ.ವೈ ನಂಜೇಗೌಡರ ವಿರುದ್ಧ ಪ್ರತಿದಿನ ಒಂದಿಲ್ಲೊಂದು ವಿಚರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ವಾಗ್ದಾಳಿ ಮಾಡ್ತಿದ್ದು ಸದ್ದಿಲ್ಲದೆ ಕೆಲಸ ಮಾಡ್ತಿದ್ದಾರೆ. ಕೊರೊನಾ ಸಮಯದಲ್ಲಿ ಫುಡ್ ಕಿಟ್, ರಕ್ತದಾನ ಶಿಬಿರ, ಹಾಳಾಗಿರೋ ರಸ್ತೆಗಳಿಗೆ ಜಲ್ಲಿ ಹೊಡೆಸಿ ಗುಂಡಿ ಮುಚ್ಚೋದು, ಸರ್ಕಾರಿ ಕಟ್ಟಡಗಳಿಗೆ ಮೂಲಭೂತ ಸೌಕರ್ಯ ನೀಡೋದು ಮಾಡ್ತಿದ್ದು ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ಹೂಡಿ ವಿಜಯ್ ಕುಮಾರ್ ಮಾಡ್ತಿದ್ದಾರೆ.
ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಅವಾಂತರ: ಸಂಕಷ್ಟದಲ್ಲಿ ಅನ್ನದಾತ..!
ಅದೇನೆ ಇರಲಿ ಟಿಕೆಟ್ ಕೊಡ್ತೀವಿ ಆದ್ರೂ ಬೇಡ ಎಂದು ದೂರ ಹೋಗ್ತಿದ್ದ ಕೋಲಾರ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ಇದೀಗ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಹೋಲಿಕೆ ಮಾಡಿದ್ರು ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳು ಇದ್ದು, ಯಾರು ಸಮಾಧಾನ ಆಗುವ ಲಕ್ಷಣಗಳು ಸಧ್ಯದ ಮಟ್ಟಿಗೆ ಕಾಣ್ತಿಲ್ಲ. ಬಿಜೆಪಿಯವರ ಟಿಕೆಟ್ ಕಿತ್ತಾಟದ ಲಾಭವನ್ನು ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಕೆ.ವೈ ನಂಜೇಗೌಡ ಅಥವಾ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಮೇಗೌಡ ಪಡೆದುಕೊಂಡರೇ ಆಶ್ಚರ್ಯ ಪಡಬೇಕಾಗಿಲ್ಲ.