25 ವರ್ಷ ಅಭಿವೃದ್ಧಿ ಮಾಡದೆ ಅಪ್ಪಚ್ಚು ರಂಜನ್ ಪಿಕ್ನಿಕ್ ಹೋಗಿದ್ದರು
ಮನೆ ಮನೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಪ್ರಶ್ನೆ
ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಿಂದ ಸ್ಟಾರ್ ಪ್ರಚಾರಕರ ಆಗಮನ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.26): ನನ್ನನ್ನು ವೈಯಕ್ತಿಕವಾಗಿ ನಿಂದಿಸುತ್ತಿರುವ ಶಾಸಕ ಅಪ್ಪಚ್ಚು ರಂಜನ್ ಅವರು ಕಳೆದ 25 ವರ್ಷಗಳಿಂದ ಶಾಸಕರಾಗಿ ಎಲ್ಲಿ ಪಿಕ್ನಿಕ್ ಗೆ ಹೋಗಿದ್ದರು ಮೊದಲು ಹೇಳಲಿ ಎಂದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ಪ್ರಶ್ನಿಸಿದ್ದಾರೆ.
undefined
ಮಡಿಕೇರಿಯ ರಾಜೇಶ್ವರಿ ನಗರದಲ್ಲಿ ಬುಧವಾರ ಮನೆ ಮನೆ ಪ್ರಚಾರ ನಡೆಸಿದ ಡಾ. ಮಂತರ್ ಗೌಡ ಕಳೆದ 25 ವರ್ಷಗಳಿಂದ ಒಂದೇ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದೀರಾ. ಇದೊಂದು ಬಾರಿ ನಮಗೆ ಅವಕಾಶ ಮಾಡಿಕೊಡಿ ಎಂದು ಮತಯಾಚಿಸುತ್ತಿದ್ದಾರೆ. ಈ ವೇಳೆ ಮಾತನಾಡಿರುವ ಅವರು. ಅಪ್ಪಚ್ಚು ರಂಜನ್ ಅವರು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯ ಕೆಲಸಗಳನ್ನು ಮಾಡದೆ, ಕ್ಷೇತ್ರ ಮತದಾರರನ್ನು ಭೇಟಿಯಾಗಿಲ್ಲ. ಹಾಗಾದರೆ ಅವರೆಲ್ಲೆ ಪಿಕ್ನಿಕ್ ಹೋಗಿದ್ದರು ಎನ್ನುವುದನ್ನು ಹೇಳಲಿ ಎಂದಿದ್ದಾರೆ.
ಶೃಂಗೇರಿ ಆನೆಗೆ ಸೇಬು ತಿನ್ನಿಸಿದ ಪ್ರಿಯಾಂಕ ಗಾಂಧಿ: ಕೆಲವು ವಿಶೇಷ ಫೋಟೋಗಳು ಇಲ್ಲಿವೆ ನೋಡಿ.!
ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಶಾಸಕ ಅಪ್ಪಚ್ಚು ರಂಜನ್ ಅವರು ನನ್ನ ವಿರುದ್ಧ ಮಾತನಾಡದೆ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಹೇಳಿ ಮತ ಕೇಳುತ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಅವುಗಳನ್ನು ಜನರ ಮುಂದಿಟ್ಟು ಮತಗಳನ್ನು ಕೇಳುತ್ತಿದ್ದರು. ಆದರೆ ಅದನ್ನು ಮಾಡಲಾಗದೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಕರೆಸಿ ಅವರ ಮುಖ ನೋಡಿ ಮತ ನೀಡಿ ಎಂದು ಕೇಳುತ್ತಿದ್ದಾರೆ. ಮೋದಿ, ಅಮಿತ್ ಷಾ ಅಲ್ಲ ಯಾರೆ ಬಂದು ಮತ ಕೇಳಿದರು ಜನರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷದ ಪರವಾಗಿ ಪ್ರಚಾರ ಸಭೆಗಳನ್ನು ನಡೆಸಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಇನ್ನೊಮ್ಮೆ ಆಗಮಿಸಲಿದ್ದಾರೆ. ಜೊತೆಗೆ ಸ್ಟಾರ್ ಕ್ಯಾಂಪೇನರ್ಗಳು ಬರಲಿದ್ದಾರೆ. ಪ್ರತೀ ನಗರ, ಪಟ್ಟಣ, ಹಳ್ಳಿಗಳ ಬೂತ್ಗಳಿಗೆ ಹೋದರೂ ಮತದಾರರೇ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು 25 ವರ್ಷಗಳ ಅವಧಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ ಎಂದು ನಾವು ಹೇಳುತ್ತಿಲ್ಲ ಕ್ಷೇತ್ರದ ಜನರೇ ಹೇಳುತ್ತಿದ್ದಾರೆ. ಹೀಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದರು.
ಶಾಸಕರು ನನ್ನನ್ನು ವೈಯಕ್ತಿಕವಾಗಿ ಟೀಕೆ ಮಾಡುವ ಬದಲು ತಾವು ಎಷ್ಟು ಮತದಾರರನ್ನು ಭೇಟಿಯಾಗಿ ಅವರ ಸಮಸ್ಯೆಯನ್ನು ಆಲಿಸಿದ್ದಾರೆ ಎನ್ನುವುದು ಹೇಳಲಿ. ಜನರೇ ಈಗಾಗಲೇ ಶಾಸಕರನ್ನು ಬದಲಿಸಿ ಮಂತರ್ ಅವರನ್ನು ಗೆಲ್ಲಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಆದ್ದರಿಂದ ನಮ್ಮ ಪಕ್ಷದ ಕಾರ್ಯಕರ್ತರು ಕೂಡ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು ನಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಮಡಿಕೇರಿ ಹೊರವಲಯದಲ್ಲಿ ಇರುವ ಉಕ್ಕಡದ ರಾಜರಾಜೇಶ್ವರಿ ದೇವಾಲಯಕ್ಕೆ ತೆರಳಿದ ಡಾ. ಮಂತರ್ ಗೌಡ ರಾಜರಾಜೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
ಮಹೇಶ್ ಕುಮಟಳ್ಳಿ, ಯತ್ನಾಳ್ ಬಳಿ ಟ್ರೈನಿಂಗ್ ತಗೋಬೇಕು: ರಮೇಶ್ ಜಾರಕಿಹೊಳಿ ಸಲಹೆ
ನಂತರ ಅಪಾರ ಕಾರ್ಯಕರ್ತರ ಪಡೆಯೊಂದಿಗೆ ರಾಜರಾಜೇಶ್ವರಿ ದೇವಾಲಯದಿಂದಲೇ ಮತಯಾಚನೆ ಶುರುಮಾಡಿದ ಮಂತರ್ ಗೌಡ ರಾಜೇಶ್ವರಿ ನಗರ, ಅಜಾದ್ ನಗರ ಮತ್ತು ಮಲ್ಲಿಕಾರ್ಜುನ ನಗರಗಳಲ್ಲಿ ಮನೆ ಮನೆಗೆ ತೆರಳಿ ಮತ ನೀಡುವಂತೆ ಮನವಿ ಮಾಡಿದರು. ಇನ್ನು ಆಜಾದ್ ನಗರ ಮತ್ತು ಮಲ್ಲಿಕಾರ್ಜುನ ನಗರಗಳಲ್ಲಿ ರೋಡ್ ಷೋ ನಡೆಸಿ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದರು.