ಸಿಎಂ ರಾಜೀನಾಮೆ ಕೇಳಿದ ಕಾಂಗ್ರೆಸ್ ಹಿರಿಯ ನಾಯಕನ ವಿರುದ್ಧ ಎಂಬಿ ಪಾಟೀಲ್ ಗರಂ!

By Ravi Janekal  |  First Published Sep 27, 2024, 3:51 PM IST

ಮುಡಾ ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಏನಾದರೂ ಸಾಕ್ಷಿ ಇದೆಯಾ? ಬಿಜೆಪಿ, ಮೋದಿ ವಿರುದ್ಧ ಸಚಿವ ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದರು.


ಬೆಂಗಳೂರು (ಸೆ.27): ಮುಡಾ ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಏನಾದರೂ ಸಾಕ್ಷಿ ಇದೆಯಾ? ಬಿಜೆಪಿ, ಮೋದಿ ವಿರುದ್ಧ ಸಚಿವ ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದರು.

ಮುಡಾ ಹಗರಣ ವಿಚಾರ ಸಂಬಂಧ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಪ್ರಧಾನಿ ಮೋದಿ ಸಿಎಂ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರದು ಏನು ತಪ್ಪಿದೆ. ಪ್ರಾಥಮಿಕ ತನಿಖೆ ಕೂಡ ಆಗಿಲ್ಲ. ಮೋದಿ ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಮಾತನಾಡಲಿ.  ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಸುಪ್ರೀಂ ಮುಂದಿಟ್ಟಿದೆ. ಸುಪ್ರೀಂ ಅಭಿಪ್ರಾಯದ ಬಗ್ಗೆ ಅವರು ಮಾತನಾಡಲಿ. ಸಿದ್ದರಾಮಯ್ಯರ ರಾಜೀನಾಮೆ ಕೇಳುವ ತಾವು ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ತಿರುಗೇಟು ನೀಡಿದರು.

Tap to resize

Latest Videos

undefined

ಸಿಎಂ ಸಿದ್ದರಾಮಯ್ಯ ಜನ ತಿಳ್ಕೊಂಡಷ್ಟು ಪರಿಶುದ್ಧರೇನಲ್ಲ: ಸಿಟಿ ರವಿ ವಾಗ್ದಾಳಿ

ಇನ್ನು ರಾಜ್ಯಪಾಲರು ಅಧಿಕಾರಿಗಳಿಗೆ ಪತ್ರ ಬರೆದು ವಿವರಣೆ ಕೇಳಿರುವ ಸಂಬಂಧ ಗರಂ ಆದ ಸಚಿವರು, ರಾಜ್ಯಪಾಲರು ಪದೇಪದೆ ಅಧಿಕಾರಿಗಳಿಗೆ ಪತ್ರ ಬರೆಯುವಂತಿಲ್ಲ. ಅವರು ಮುಖ್ಯಮಂತ್ರಿಗಳಿಗೆ ಬರೆಯಬೇಕು. ಅದಕ್ಕೊಂದು ಪ್ರೋಸಿಜರ್ ಇದೆ. ಅದುಬಿಟ್ಟು ಪ್ರತಿದಿನ ಅಧಿಕಾರಿಗಳಿಗೆ ಪತ್ರ ಬರೆಯುವುದು ಸರಿಯಲ್ಲ ಎಂದರು.

ಇನ್ನು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಸಚಿವರು, ಕುಮಾರಸ್ವಾಮಿಯವರ ಮೇಲೆ ಪ್ರಾಥಮಿಕ ತನಿಖೆ ಆಗಿದೆ. ಅವರು ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಅದನ್ನ ಮೊದಲು ಹೆಚ್‌ಡಿಕೆಗೆ ಕೇಳಿನೋಡಿ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದರು.

ಗೋಧ್ರಾ ಪ್ರಕರಣದಲ್ಲಿ ನೀವು ರಾಜೀನಾಮೆ ಕೊಟ್ರಾ? ಪ್ರಧಾನಿ ಮೋದಿಗೆ ಸಿಎಂ ತಿರುಗೇಟು

ಸಿಬಿಐ ಮುಕ್ತ ತನಿಖೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಹಿಂದೆ ಇದೇ ಬಿಜೆಪಿಯವರು ಸಿಬಿಐಗೆ ಬಗ್ಗೆ ಟೀಕೆ ಮಾಡ್ತಾ ಇದ್ರು. ಈಗ ಸಿಬಿಐ ಪರ ಮಾತಾಡ್ತಿದ್ದಾರೆ. ಸಿಬಿಐ ಹಿಂದೆ ಕೇಂದ್ರದ ಅಧಿಕಾರಿಗಳ ಮೇಲೆ ಮಾತ್ರ ಮಾಡ್ತಾ ಇದ್ರು. ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಬೇಕಿರಲಿಲ್ಲ. ಆದರೀಗ ಅವರ ಮೇಲೆ ತನಿಖೆಗೂ ನಮ್ಮ ಅನುಮತಿ ಬೇಕು. ಸಿದ್ದರಾಮಯ್ಯ ರಕ್ಷಣೆಗೆ ಇದನ್ನ ಮಾಡಿದ್ದಲ್ಲ. ಸಿದ್ದರಾಮಯ್ಯ ಏನು ಕೇಂದ್ರದ ನೌಕರರೇ? ಸಿಬಿಐ ಮುಕ್ತ ತನಿಖೆ ವಾಪಸ್ ವಿಚಾರವನ್ನ ಕೇಂದ್ರದ ಅಧಿಕಾರಿಗಳ ಕಡೆ ತಿರುಗಿಸಿದ ಸಚಿವರು. ಇದೇ ವೇಳೆ ಕೋಳಿವಾಡ ಸಿಎಂ ರಾಜೀನಾಮೆಗೆ ಆಗ್ರಹಿಸಿದ ವಿಚಾರಕ್ಕೆ ಕಿಡಿಕಾರಿದ ಸಚಿವರು, ಕೋಳಿವಾಡ ಅವರಿಗೆ ವಯಸ್ಸಾಗಿದೆ, ಅರಳು ಮರಳು ಏನೋ ಹೇಳಿದ್ದಾರೆಂದ ಸಚಿವ ಎಂಬಿ ಪಾಟೀಲ್

click me!