ಇನ್ನು ಎರಡು ಮೂರು ದಿನಗಳಲ್ಲಿ ಸಿಎಂ ಮತ್ತು ಡಿಸಿಎಂ ಅವರು ದೆಹಲಿಗೆ ಹೋಗಲಿದ್ದು, ಲೋಕಸಭೆ ಅಭ್ಯರ್ಥಿ ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಿವಲಿಂಗೇಗೌಡ ಸಚಿವಾರಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಭವಿಷ್ಯ ನುಡಿದರು.
ಹಾಸನ (ಜ.03): ಇನ್ನು ಎರಡು ಮೂರು ದಿನಗಳಲ್ಲಿ ಸಿಎಂ ಮತ್ತು ಡಿಸಿಎಂ ಅವರು ದೆಹಲಿಗೆ ಹೋಗಲಿದ್ದು, ಲೋಕಸಭೆ ಅಭ್ಯರ್ಥಿ ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಿವಲಿಂಗೇಗೌಡ ಸಚಿವಾರಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಭವಿಷ್ಯ ನುಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ, ನಿಗಮ ಮಂಡಳಿ ಅಧಕ್ಷ ಸ್ಥಾನ ಹಂಚಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಇದೇ ತಿಂಗಳು ೪,೫ ನೇ ತಾರೀಖು ಸಿಎಂ, ಡಿ.ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಲೋಕಸಭಾ ಅಭ್ಯರ್ಥಿ, ನಿಗಮ ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಕೆ.ಎಂ.ಶಿವಲಿಂಗೇಗೌಡರು ನಿಗಮ ಮಂಡಳಿ ಅಧ್ಯಕ್ಷರಾಗುತ್ತಾರೆ’ ಎಂದು ಹೇಳಿದರು. ಪಟ್ಟಿ ಬಿಡುಗಡೆಗೂ ಮುನ್ನ ರಾಜಣ್ಣ ಅವರು ಹೀಗೆ ಹೇಳಿದ್ದಾರೆ.
ಮುಂದಿನ ಸಚಿವರ ಬದಲಾವಣೆ ಸಂದರ್ಭ ಶಿವಲಿಂಗೇಗೌಡ ಸಚಿವಾರಾಗುತ್ತಾರೆ ಎಂದು ರಾಜಣ್ಣ ಅವರು ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು. ‘ಕಾರ್ಯಕರ್ತರಿಗೂ ನಿಗಮ ಮಂಡಳಿ ಸ್ಥಾನ ಕೊಡಬೇಕು. ಅವರಿಂದಲೇ ನಾವೆಲ್ಲಾ ಗೆದ್ದಿರೋದು. ಕಾರ್ಯಕರ್ತರು ಇರುವುದರಿಂದಲೇ ನಾವೆಲ್ಲಾ ಶಾಸಕರಾಗಿರೋದು. ಕಾರ್ಯಕರ್ತರು, ಶಾಸಕರು ಇಬ್ಬರಿಗೂ ಸ್ಥಾನ ಕೊಟ್ಟು ಸಮತೋಲನ ಕಾಪಾಡುವ ಬಗ್ಗೆ ಪಕ್ಷ ಮತ್ತು ಅಧ್ಯಕ್ಷರ ನಿರ್ಣಯ ಇದೆ’ ಎಂದು ಹೇಳಿದರು.
ನಂದಗೋಡನಹಳ್ಳಿ ಮರಗಳ ಮಾರಣಹೋಮ ಪ್ರಕರಣದ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿ, ಘಟನೆ ಬಗ್ಗೆ ಈಗಾಗಲೇ ಕಾನೂನು ರೀತಿ ಕ್ರಮ ಆಗಿದೆ. ಕಾಡುಗಳ್ಳರಿಗೆ ಪ್ರೋತ್ಸಾಹ ಕೊಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಿದೆ. ಪ್ರತಾಪ್ ಸಿಂಹ ಸಹೋದರ ಕೂಡ ಸಿಕ್ಕಿಹಾಕಿಕೊಂಡಿದ್ದಾರೆ. ಅವರೇ ಮರಗಳನ್ನು ಕತ್ತರಿಸಿದ್ದಾರೆ. ಇದನ್ನು ರಾಜಕೀಯ ಪ್ರೇರಿತ ಅಂದರೆ ನೀವು ಒಪ್ಪುತ್ತೀರಾ? ಕಾಂಗ್ರೆಸ್ಸಿನವರೇ ಮಾಡಿರಲಿ, ಇನ್ನೊಂದು ಪಕ್ಷದವರು ಮಾಡಿರಲಿ ಕಾನೂನು ಎಲ್ಲರಿಗೂ ಒಂದೇ ನ್ಯಾಯ ಎಂದರು. ಕಾಂಗ್ರೆಸ್ ಮುಖಂಡರಾದ ಬಿ. ಶಿವರಾಂ, ಶ್ರೇಯಸ್ ಪಟೇಲ್ ಉಪಸ್ಥಿತರಿದ್ದರು.
ಬಿಜೆಪಿ ರಾಮ ಎನ್ನೋರಿಗೆ ಕೇಂದ್ರ ನಾಯಕರು ಆಹ್ವಾನ ಕೊಟ್ಟಿಲ್ಲ: ಕೆ.ಎಸ್.ಈಶ್ವರಪ್ಪ
ಅಯೋಧ್ಯೆಯಲ್ಲಿ ಮಾತ್ರ ರಾಮ ದರ್ಶನವೇ?: ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸದ ಕುರಿತು ಮಾತನಾಡಿ, ‘ಬಿಜೆಪಿಯವರಿಗೆ ಯಾರನ್ನು ಕರೆಯಬೇಕು, ಬೇಡ ಎಂಬ ಅಜೆಂಡಾ ಇರುತ್ತೆ. ಬಿಜೆಪಿ ಅಜೆಂಡಾನಾ ನಾವ್ಯಾಕೆ ಪ್ರಶ್ನೆ ಮಾಡಬೇಕು? ಅಲ್ಲಿಗೆ ಹೋಗಿ ಮಾಡಿದರೆ ಮಾತ್ರ ರಾಮನ ದರ್ಶನ, ಆಶೀರ್ವಾದಾನಾ? ನಮ್ಮೂರಲ್ಲಿ ಇರೋ ರಾಮನ ದರ್ಶನ ಮಾಡಿದ್ರೆ ನಮಗೆ ಆಶೀರ್ವಾದ ಮಾಡೋದಿಲ್ವಾ. ದೇವರು ಸರ್ವಾಂತರ್ಯಾಮಿ. ನಮ್ಮಲ್ಲೂ ಇದ್ದಾನೆ ನಿಮ್ಮಲ್ಲೂ ಇದ್ದಾನೆ’ ಎಂದು ಸಚಿವ ರಾಜಣ್ಣ ಹೇಳಿದರು.