
ಬೆಂಗಳೂರು (ಜು.24): ರಾಹುಲ್ ಗಾಂಧಿಯವರು ಇಡೀ ರಾಜ್ಯಕ್ಕೆ ಅಲ್ಲ ರಾಷ್ಟ್ರದಲ್ಲೆ ಚುನಾವಣೆ ಸರಿಯಾಗಿ ನಡೆಯುತ್ತಿಲ್ಲಾ ಎಂದಿದ್ದಾರೆ ಅದಕ್ಕೆ ಎಲೆಕ್ಷನ್ ಕಮಿಷನ್‌ಗೆ ದೂರು ನೀಡಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವುದೇ ಆಕ್ಷನ್ ತೆಗೆದುಕೊಳ್ತಿಲ್ಲಾ ಎಂದಿದ್ದಾರೆ. ನಮ್ಮದು ಅದೇ ಆರೋಪ ಇದೆ. ಇದೀಗ ಅದು ಬಿಹಾರದಲ್ಲೂ ಶುರುವಾಗಿದೆ. ನ್ಯಾಯಯುತವಾಗಿ ಚುನಾವಣೆ ನಡೆಯುತ್ತಿಲ್ಲಾ ಅನ್ನೊದೆ ನಮ್ಮ ಆಕ್ಷೇಪ ಎಂದರು.
ಕರ್ನಾಟಕದಲ್ಲಿ ಗ್ಯಾರಂಟಿಗಳಿಂದ ತಲಾದಾಯ ಹೆಚ್ಚಳ ವಿಚಾರವಾಗಿ, ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನ ಸಿಎಂ ನಿಭಾಯಿಸ್ತಿದ್ದಾರೆ. ಆರ್ಥಿಕ ಶಿಸ್ತನ್ನ ಜಾರಿಗೆ ತಂದಿದ್ದಾರೆ. ಕೋವಿಡ್ ಸಂಧರ್ಭದಲ್ಲಿ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಅವರ ತಲಾದಾಯ ಕಡಿಮೆ ಆಗಿತ್ತು. ತಲಾದಾಯ ಹೆಚ್ಚಿಸೋದಕ್ಕೆ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಪ್ರತಿ ಮನೆಯಲ್ಲು ಐದು ಸಾವಿರ ಉಳಿತಾಯ ಆಗ್ತಿದೆ. ಕೇಂದ್ರ ಸರ್ಕಾರ ಕೊಡುವ ಪಾಲಿನಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದು ಜಾರ್ಜ್ ತಿಳಿಸಿದರು.
ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರದಲ್ಲಿ ಜನಪ್ರತಿನಿಧಿ ಕೋರ್ಟ್‌ನಿಂದ ಎಫ್ಐಆರ್ ದಾಖಲು ವಿಚಾರವಾಗಿ, ಅಂತಹ ಯಾವುದೆ ದಾಖಲೆ ಇದ್ರೆ ಕೊಡಿ. ಆ ಆರ್ಡರ್ ನಾನು ನೋಡಿಲ್ಲಾ, ದಾಖಲೆ ಇದ್ರೆ ಕೊಡಿ ಪರಿಶೀಲನೆ ಮಾಡ್ತಿನಿ. ಅಶ್ವಥ್ ನಾರಾಯಣ್ ಅವರ ತಂಡ ಎಲ್ಲೆಲ್ಲಿ ಹೋಗಿದ್ದಾರೆ ಗೊತ್ತಿದೆ. ಹೈಕೋರ್ಟ್, ಜನಪ್ರತಿನಿಧಿ ನ್ಯಾಯಾಲಯ, ಗೌರ್ನರ್ ಬಳಿ ಹೋಗಿದ್ದಾರೆ. ವಿವರಣೆ ಕೇಳಿದ್ರೆ ಕೊಡೊಕೆ ತಯಾರಿದ್ದೇನೆ. ಕಾನೂನು ಪ್ರಕಾರವೇ ಎಲ್ಲಾ ಎದುರಿಸುತ್ತೇನೆ. ಸುಮ್ಮನೆ ಹಿಟ್ ಅಂಡ್ ರನ್ ಯಾಕೆ ಮಾಡೋದು. ಅವರು ದಾಖಲೆಯನ್ನ ಕೋರ್ಟ್‌ಗೆ ಕೊಡಲಿ. ನಮ್ಮ ವಕೀಲರು ನಮ್ಮ ಪರವಾಗಿ ವಾದ ಮಾಡ್ತಾರೆ. ಕೋರ್ಟ್‌ನ ಅಂತಿಮ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದು ಜಾರ್ಜ್ ಹೇಳಿದರು.
ರಾಣಾ ಜಾರ್ಜ್ ಜಮೀನು ವಿವಾದ ವಿಚಾರವಾಗಿ, ಏನೇ ಆದ್ರು ಸಹ ನಾನು ಹಾಗೂ ನನ್ನ ಮಗ ಅಂತಾರೆ. ಅದ್ರಲ್ಲಿ ಏನಾದ್ರು ಸತ್ಯ ಇದ್ಯಾ..? ನಿಮಗೆಲ್ಲಾ ಗೊತ್ತಿದೆ, ನಮ್ಮ ಮಗನದ್ದು ಬಂಡೀಪುರದಲ್ಲಿ ಜಮೀನು ಇದೆ. ಅದು ಫಾರೆಸ್ಟ್‌ನ ಒಳಗಡೆ ಇದೆ. ಯಾರಿಗಾದ್ರು ಜಾಗ ಒಳಗಡೆ ಇದ್ರೆ ಅವರಿಗೆ ರೈಟ್ ಆಫ್ ವೇ ಕೊಡಬೇಕಂತ ರೂಲ್ ಇದೆ. ಅವರೇನು ಮಾಡಿದ್ದಾರೆ, ಕೋರ್ಟ್‌ಗೆ ಹೋಗಿದ್ದಾರೆ. ಹಾಗಾಗಿ ಕೋರ್ಟ್ ಆದೇಶದ ಪ್ರಕಾರ ನಾವು ನಡೆದುಕೊಳ್ತಿವಿ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.