ಹಿಂದಿನ ಯಾವ ಪಿಎಂ ಕೂಡ ದಿನ ಬೆಳಗಾದರೆ ಟಿವಿಯಲ್ಲಿ ಬೊಗಳುತ್ತಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ

Published : Jul 19, 2025, 02:59 PM ISTUpdated : Jul 19, 2025, 03:33 PM IST
mallikarjun kharge

ಸಾರಾಂಶ

ಮೈಸೂರಿನ ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ಯೋಜನೆಗಳಿಗೆ ಸಿದ್ದರಾಮಯ್ಯನವರು ಮೈಸೂರಿಗೆ ಮೊದಲ ಪ್ರಾಧಾನ್ಯತೆ ನೀಡುತ್ತಾರೆ ಎಂದು ಹೇಳಿದರು. 

(ಮೈಸೂರು (ಜು.19): ರಾಜ್ಯ ಸರ್ಕಾರದ ವತಿಯಿಂದ ಮೈಸೂರಿನಲ್ಲಿ (Mysuru) ನಡೆಯುತ್ತಿರುವ ಸಾಧನಾ ಸಮಾವೇಶದಲ್ಲಿ (Saadhana Samaavesha) ಎಐಸಿಸಿ ಅಧ್ಯಕ್ಷ (AICC)  ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನಿ ಮೋದಿ  (PM Narendra Modi)ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಹಿಂದಿನ ಯಾವ ಪಿಎಂ ಕೂಡ ದಿನ ಬೆಳಗಾದರೆ ಟಿವಿಯಲ್ಲಿ ಬೊಗಳುತ್ತಿರಲಿಲ್ಲ ಎಂದು ಟೀಕೆ ಮಾಡಿದ್ದಾರೆ.

ಯಾವುದೇ ಯೋಜನೆ ಇದ್ದರು ಸಿದ್ದರಾಮಯ್ಯ ಅವರು ಮೊದಲ ಪ್ರಾಧಾನ್ಯತೆ ಕೊಡುವುದು ಮೈಸೂರಿಗೆ. ಮೈಸೂರಿನ‌ ಮೇಲೆ ಸಿದ್ದರಾಮಯ್ಯ ಗೆ ಪ್ರೀತಿ ಜಾಸ್ತಿ. ಮೈಸೂರಿಗೆ ಯಾವಾಗಲೂ ಹಣದ ಹೊಳೆಯನ್ನು ಸಿದ್ದರಾಮಯ್ಯ ಹರಿಸುತ್ತಾರೆ. ಬಿಜೆಪಿ ಯವರು ಟೀಕಾಚಾರಿಗಳು ಅಷ್ಟೆ. ಅಭಿವೃದ್ಧಿ ಕೆಲಸ ಮಾಡುವುದೆ ಇಲ್ಲ. ಬಿಜೆಪಿ ಮಾಡುವುದು ಭ್ರಷ್ಟಾಚಾರ ಮಾತ್ರ. ಕಾಂಗ್ರೆಸ್ ಕ್ಯಾ‌‌ ಕಿಯಾ ಎಂದು ಮೋದಿ ಅವರು ಪದೇ ಪದೇ ಕೇಳುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಕೊಟ್ಟ ಕೊಡುಗೆ ಜನರ ಕಣ್ಮುಂದೆ ಇದೆ ಎಂದು ಹೇಳಿದ್ದಾರೆ.

ಮೋದಿ ಅವರು ದಿನ ಟಿವಿಯಲ್ಲಿ ಮಾತ್ರ ಕಾಣುತ್ತಾರೆ. ದಿನ ಪೂರ್ತಿ ಟಿವಿಯಲ್ಲಿ ಕಾಣಬೇಕು ಅಷ್ಟೆ ಅವರ ಉದ್ದೇಶ. ಹಿಂದೆ ಯಾವ ಪಿಎಂ‌ ಕೂಡ ಇವರ ರೀತಿ ದಿನ ಬೆಳಗಾದರೆ ಟಿವಿಯಲ್ಲಿ ಬೊಗಳುತ್ತಿರಲಿಲ್ಲ. ಅದಾನಿ, ಅಂಬಾನಿಗೆ ದೇಶದ ಆಸ್ತಿಯನ್ನು ಮೋದಿ ಮಾರುತ್ತಿದ್ದಾರೆ. ದೇಶದ ಜನ ಸಂಕಷ್ಟದಲ್ಲಿ ಇದ್ದಾಗ ಮೋದಿ ವಿದೇಶ ಪ್ರವಾಸ ಮಾಡುತ್ತಾರೆ. ಮಣಿಪುರಕ್ಕೆ ಹೋಗಿ ಅಲ್ಲಿನ ಜನರ ಸಾಂತ್ವನ ಹೇಳಲಿಲ್ಲ ಎಂದಿದ್ದಾರೆ.

ಸಂವಿಧಾನ‌ ಬದಲಾವಣೆ ಮಾಡಲು ಜನ ಅವಕಾಶ ಕೊಟ್ಟರೆ ಜನ ಸತ್ತಂತೆ. ಬಿಜೆಪಿ ಎಷ್ಟೇ ತಿಪ್ಪಾರಲಾಗ ಹಾಕಿದರು ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಂಬೇಡ್ಕರ್ ಒಬ್ಬರೆ ಸಂವಿಧಾನ ಮಾಡಿದ್ದಾ ಅಂತಾ ಬಿಜೆಪಿ ಕೇಳುತ್ತೆ? ಅಂಬೇಡ್ಕರ್ ಅಲ್ಲದೆ ಏನೂ ಅವರ ತಾತಾಂದಿರು ಮಾಡಿದ್ರಾ? RSS ಅವರು ಮಾಡಿದ್ರಾ? ಸಂವಿಧಾನದ ಕೊಲೆಯನ್ನು ಮೋದಿ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಭಾಷಣದಲ್ಲಿ ಹೇಳಿದ್ದಾರೆ.

ಸಿದ್ದು ಹಣಕಾಸು ಸಚಿವರಾದಾಗ ಲಕ್ಷ್ಮೀ ಕುಂಟಾಗಿ ಖಜಾನೆಯಲ್ಲಿ ಕೂರ್ತಾಳೆ

ಐದು ಗ್ಯಾರಂಟಿ ಬರೀ ಸಿದ್ದರಾಮಯ್ಯ ಮನೆಗೆ, ಡಿಕೆ ಶಿವಕುಮಾರ್ ಮನೆಗಾ, ಪರಮೇಶ್ವರ್ ಮನೆಗೆ ಕೊಟ್ಟಿದ್ದಿವಾ? ಇಷ್ಟು ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಕೊಟ್ಟ ಮೇಲೂ ನಮ್ಮವರೆ ಕೆಲವರು ಅಭಿವೃದ್ಧಿ ಆಗ್ತಿಲ್ಲ ಅಂತಾರೆ? ಯಾಕೆ ಅಂತಾನೆ ಗೊತ್ತಾಗಲ್ಲ. ಈ ಸರಕಾರ ದಿವಾಳಿ ಆಗಿದೆ ಎಂದು ಸುಳ್ಳು ಹಬ್ಬಿಸಿದ್ದಾರೆ ಎಂದು ಮಲ್ಲುಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ಸರ್ಕಾರ ದಿವಾಳಿ ಆಗಿಲ್ಲ. ದಿವಾಳಿ ಆಗಿದ್ದರೆ ಶಾಸಕರಿಗೆ 50 ಕೋಟಿ ರು. ಅನುದಾನ ಕೊಡುತ್ತಿದ್ದರಾ? ಸಿದ್ದರಾಮಯ್ಯ ಯಾವಾಗ ಯಾವಾಗ ಹಣಕಾಸು ಸಚಿವರಾಗುತ್ತಾರೋ ಆಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿ ಕೂರುತ್ತಾಳೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಲಕ್ಷ್ಮಿ ಓಡುತ್ತಾಳೆ. ಮೋದಿ ಅವರೆ ಕರ್ನಾಟಕಕ್ಕೆ ಬಂದು ನೋಡಿ. ಈ ನಾಡು ಎಷ್ಟು ಸುಭಿಕ್ಷವಾಗಿದೆ ಅಂತಾ. ಕರ್ನಾಟಕಕ್ಕೆ ಬಂಡವಾಳ ಹೂಡಿಕೆ ಮಾಡಲು ಹುಡುಕಿ ಹುಡುಕಿ ಜನ‌ ಬರುತ್ತಿದ್ದಾರೆ. ಹೊಟ್ಟೆ ಕಿಚ್ಚಿಗೆ ಆರೋಪ ಮಾಡುತ್ತಾರೆ. ಹೊಟ್ಟೆ ಕಿಚ್ಚಿಗೆ ಮದ್ದು ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿಯನ್ನು ಮೋದಿ 1% ಕೂಡ ಮಾಡಿಲ್ಲ ಎಂದು ಟೀಕಿಸಿದ್ದಾರೆ.

ಮೋದಿ ಅಹಂಕಾರ ಇರುವ ವ್ಯಕ್ತಿ

ಕಾಂಗ್ರೆಸ್ ಕೆಲ ಕಡೆ ಸೋತಿರಬಹುದು. ಆದರೆ ಕೋಟ್ಯಾಂತರ ಜನ ನಮ್ಮ ಪರ ಇದ್ದಾರೆ. ನಮಗೂ ಬಿಜೆಪಿ ಗೂ ಇರೋದು 2%. ಮತದ ವ್ಯತ್ಯಾಸ ಅಷ್ಟೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಲೋಕಸಭಾ ಚುನಾವಣೆಯಲ್ಲಿ ಇನ್ನೂ 10 ಸ್ಥಾನ ಕೊಟ್ಟಿದ್ದರೆ, ಬೇರೆ ಬೇರೆ ರಾಜ್ಯದಲ್ಲೂ ಎರಡು ಮೂರು ಸ್ಥಾನ ಹೆಚ್ಚು ಬಂದಿದ್ದರೆ ಮೋದಿ ಎಲ್ಲಿ ಅಧಿಕಾರಕ್ಕೆ ಬರುತ್ತಿದ್ದರು. ಮೋದಿ ಅಹಂಕಾರ, ದುರಹಂಕಾರ ಇರೋ ಮನುಷ್ಯ. ಒಂದಲ್ಲ ದಿನ ಕೆಳಗೆ ಬೀಳಬೇಕು. ಬೀಳುತ್ತಾರೆ ನೋಡಿ ಎಂದು ಭವಿಷ್ಯ ನುಡಿದಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ