ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ರಾಯಚೂರು (ಅ.4) : ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ನಡೆಯುತ್ತಿರುವ ಕಾಂಗ್ರೆಸ್ ರಾಜಕೀಯ ಬೆಳವಣಿಗೆಯಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ. ಅದರಲ್ಲೂ ಬಿಸಿಲುನಾಡು ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಚರ್ಚೆ ಸಿಂಧನೂರು ಭಾರೀ ಸದ್ದು ಮಾಡುತ್ತಿದೆ.
undefined
ಪ್ರತಾಪಗೌಡ ಗೆದಿದ್ದರೆ ಕೋಟ್ಯಂತರ ಅನುದಾನದಿಂದ ಅಭಿವೃದ್ಧಿ: ಶ್ರೀರಾಮುಲು
ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಆಪ್ತರಾದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ(Hampanagowda Badarli)ಗೆ ಸಿಗಬಹುದಾ ಅಥವಾ ಡಿಕೆ ಶಿವಕುಮಾರ್(D.K.Shivakumar) ಆಪ್ತ ಎನ್ನಿಸಿಕೊಂಡ ಬಸನಗೌಡ ಬಾದರ್ಲಿ(Basanagowda Badarli) ಅವರಿಗೆ ಟಿಕೆಟ್ ಸಿಗುತ್ತೆ ಎಂಬ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಇದರ ಮಧ್ಯೆಯೇ ಈಗ ರಾಹುಲ್ ಗಾಂಧಿ(Rahul Gandhi) ಭಾರತ್ ಜೋಡೋ ಪಾದಯಾತ್ರೆ(Bharat Jodo Yatra) ರಾಜ್ಯದಲ್ಲಿ ನಡೆದಿದ್ದು, ಇಬ್ಬರು ಕಾಂಗ್ರೆಸ್(Congress) ನಾಯಕರು ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.
2023ರ ವಿಧಾನಸಭಾ ಚುನಾವಣೆಗೆ ಇನ್ನೇನು 6-7 ತಿಂಗಳು ಬಾಕಿ ಇದ್ದು, ಈ ಬಾರಿ ಸಿಂಧನೂರು(Sindhanuru) ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕೆಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರ ಜೊತೆಗೆ ಓಡಾಟ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಲುವೆ ನೀರಿನ ಬಗ್ಗೆ ನಿರ್ಲಕ್ಷ್ಯ ತೋರಿದಕ್ಕೆ ತನಗೆ ಸೋಲಾಯ್ತು. ಈ ಬಾರಿ ರೈತರ ಮತ್ತು ಕ್ಷೇತ್ರದ ಜನರ ಮನಸೆಳೆಯುತ್ತಾ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಒಂದೇ ಟಿಕೆಟ್ ಗಾಗಿ ತಾತಾ-ಮೊಮ್ಮನ ಫೈಟ್:
ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಮೊಮ್ಮಗ ಬಸನಗೌಡ ಬಾದರ್ಲಿ ನಡುವೆ ಬಿಗ್ ಪೈಟ್ ಶುರುವಾಗಿದೆ. ಹಿರಿಯ ಕಾಂಗ್ರೆಸ್ ಮುಖಂಡರಿಂದ ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವಿದೆ. ಆದ್ರೂ ಸಹ ಬಸನಗೌಡ ಬಾದರ್ಲಿ ನಾನು ಈ ಬಾರಿ ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ ಎಂದು ಕ್ಷೇತ್ರದಲ್ಲಿ ಹತ್ತಾರು ಸಾಮಾಜಿಕ ಕಾರ್ಯಗಳು ಮಾಡುತ್ತಾ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ ಎಂಬುವುದೇ ಕುತೂಹಲದಿಂದ ಕಾಯುವಂತೆ ಮಾಡಿದೆ.
ನವ ಸಂಕಲ್ಪ ಮತ್ತು ನವ ಸಿಂಧನೂರು ಪಾದಯಾತ್ರೆ :
ರಾಯಚೂರಿ(Raichur)ನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ(Eshwar Khandre) ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಚಿಕ್ಕ ವಿಚಾರಕ್ಕೆ ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆ ವೇಳೆಯಲ್ಲಿ ಕಾಂಗ್ರೆಸ್ ನ ಮಾಜಿ ಯುತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿಗೆ ಅವಮಾನ ಜರುಗಿತ್ತು. ಹೀಗಾಗಿ ತನ್ನ ಶಕ್ತಿ ಪ್ರದರ್ಶನ ಮಾಡಬೇಕೆಂಬ ಉದ್ದೇಶದಿಂದ ಬಸನಗೌಡ ಬಾದರ್ಲಿ ಸಿಂಧನೂರು ಕ್ಷೇತ್ರದಲ್ಲಿ ಈಗ "ನವ ಸಂಕಲ್ಪ ನವ ಸಿಂಧನೂರು" ಘೋಷ ವಾಕ್ಯದೊಂದಿಗೆ ಪಾದಯಾತ್ರೆ ಶುರು ಮಾಡಿದ್ದಾರೆ.
ಸಿಂಧನೂರು ಪಟ್ಟಣದಿಂದ ಅಂಬಾಮಠವರೆಗೆ ಪಾದಯಾತ್ರೆ ಮಾಡಿ, ಆ ಬಳಿಕ ಮತದಾರರೊಂದಿಗೆ ಮನೆ ಮಗನ ಮಾತು ಅಭಿಯಾನ ಶುರು ಮಾಡಲಿದ್ದಾರೆ. ಈ ಅಭಿಯಾನದಲ್ಲಿ ಸಿಂಧನೂರು ಜಿಲ್ಲಾ ಕೇಂದ್ರ ಮಾಡುವ ಬಗ್ಗೆ ಚರ್ಚೆ ನಡೆಸುವುದು. ರೈತರ ಸಮಗ್ರ ಅಭಿವೃದ್ಧಿ ಹಾಗೂ ಸಿಂಧನೂರು ಕ್ಷೇತ್ರದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಕಾನೂನು ಕಾಲೇಜುಗಳ ಸ್ಥಾಪನೆಗಾಗಿ ಅಭಿಯಾನದಲ್ಲಿ ಚರ್ಚೆ ನಡೆಯಲಿದೆ.
ಬಿಜೆಪಿ ನಡೆಸುತ್ತಿರುವ ದುರಾಡಳಿತದ ವಿರುದ್ಧ ರಾಹುಲ್ ಹೋರಾಟ: ಈಶ್ವರ ಖಂಡ್ರೆ
ಇನ್ನೂ ಮುಖ್ಯವಾಗಿ ಇದೇ ತಿಂಗಳು ಅಂದ್ರೆ ಅ. 22-23ರಂದು ರಾಯಚೂರು ಜಿಲ್ಲೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಬರುತ್ತೆ. ಈ ವೇಳೆ ಬಸನಗೌಡ ಬಾದರ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಲು ಕ್ಷೇತ್ರದಲ್ಲಿ ತಯಾರಿ ನಡೆಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ನ ಟಿಕೆಟ್ ಪಡೆಯಲು ಒಂದೇ ಕುಟುಂಬದ ಇಬ್ಬರು ನಾಯಕರು ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಓಡಾಟ ನಡೆಸಿದ್ದಾರೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುವುದೇ ಕ್ಷೇತ್ರದ ಜನತೆಗೆ ಯಕ್ಷಪ್ರಶ್ನೆಯಾಗಿದೆ.