ಮೇಲಿಂದ ಬಂತು ಆದೇಶ: ಕೊನೆಗೂ ಬಗೆಹರಿದ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ

By Suvarna NewsFirst Published Jul 5, 2021, 9:54 PM IST
Highlights

* ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗೊಂದಲ 
* ಕೊನೆಗೂ ಬಗೆಹರಿದ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ
* ಈ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಯುವ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ರಿಂದ ಅಧಿಕೃತ ಆದೇಶ

ಬೆಂಗಳೂರು, (ಜುಲೈ.05): ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗೊಂದಲ ಕೊನೆಗೂ ನಿವಾರಣೆಯಾಗಿದೆ. ಮೊಹಮ್ಮದ್​ ನಲಪಾಡ್​ ಹಾಗೂ ರಕ್ಷಾ ರಾಮಯ್ಯ ನಡುವಿನ ಕಾದಾಟವನ್ನು ಹೈಕಮಾಂಡ್ ಸುಖ್ಯಾಂತಗೊಳಿಸಿದೆ. 

ಈ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಯುವ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ರಿಂದ ಅಧಿಕೃತ ಆದೇಶ ಹೊರಡಿಸಿದ್ದು,  2022ರ ಜನವರಿ 31ರವರೆಗೆ ರಕ್ಷಾ ರಾಮಯ್ಯ ಅವರೇ ಕೆಪಿವೈಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ವಿವಾದಕ್ಕೆ ಬಿಗ್ ಟ್ವಿಸ್ಟ್

ಇನ್ನು ಮೊಹಮ್ಮದ್ ನಲಪಾಡ್ ಅವರಿಗೆ ಫೆಬ್ರವರಿ 2022ರಿಂದ ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಸೂಚನೆ ನೀಡಿದೆ. ಈ ಮೂಲಕ ರಕ್ಷಾ ರಾಮಯ್ಯ ಹಾಗೂ ನಲಪಾಡ್ ಮಧ್ಯೆ ಪಟ್ಟಕ್ಕಾಗಿ ಫೈಟ್‌ಗೆ ಬ್ರೇಕ್ ಹಾಕಿದ್ದಾರೆ.

ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡಿ ಸಂಧಾನ ಮಾಡಿದ್ದರು. ಹೈಕಮಾಂಡ್‌ನಿಂದ ಯಾವುದೇ ಆದೇಶವಿಲ್ಲದೇ ಗೊಂದಲಮಯವಾಗಿತ್ತು. ಇದರಿಂದ ಡಿಕೆಶಿ ಸಂಧಾನಕ್ಕೆ ಟ್ವಿಸ್ಟ್ ಸಿಕ್ಕಿತ್ತು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ವಿವಾದ ಕೊನೆಗೂ ಸುಖಾಂತ್ಯ

ಆದ್ರೆ, ಇದೀಗ ರಾಷ್ಟ್ರೀಯ ಕಾಂಗ್ರೆಸ್ ಯುವ ಅಧ್ಯಕ್ಷರಿಂದ ಆದೇಶ ಹೊರಬಿದ್ದಿದ್ದು, ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗೊಂದಲ ಕೊನೆಗೂ ಬಗೆಹರಿದಿದೆ.

click me!