ನಾನು 10 ವರ್ಷದ ಹಿಂದೆಯೇ ಡಿಸಿಎಂ ಆಗಿದ್ದೆ; ಡಿಕೆಶಿ ಜ್ಯೂನಿಯರ್ ಈಗ ಡಿಸಿಎಂ ಆಗಿದ್ದಾರೆ: ಆರ್. ಅಶೋಕ್ ಟಾಂಗ್

By Sathish Kumar KH  |  First Published Apr 15, 2024, 3:16 PM IST

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ಲೀಡರ್ರೇ ಅಲ್ಲ. ನಾನು 10 ವರ್ಷಗಳ ಹಿಂದೆಯೇ ಡಿಸಿಎಂ ಆಗಿದ್ದೆನು. ಆದರೆ, ಡಿಕೆಶಿ ನಿನ್ನೆ ಮೊನ್ನೆ ಡಿಸಿಎಂ ಆಗಿದ್ದಾರೆ. ಅವರಿನ್ನೂ ಜ್ಯೂನಿಯರ್ ಎಂದು ಆರ್. ಅಶೋಕ್ ಟೀಕೆ ಮಾಡಿದರು.


ಬೆಂಗಳೂರು (ಏ.15): ಬಿಜೆಪಿ- ಜೆಡಿಎಸ್‌ನಲ್ಲಿ ಒಕ್ಕಲಿಗ ಲೀಡರ್ ಇಲ್ಲವೆನ್ನುತ್ತಾರೆ. ಆದರೆ, ನಾನು ವಿರೋಧ ಪಕ್ಷದ ನಾಯಕ. ಅಶ್ವತ್ಥ್ ನಾರಾಯಣ್ ಡಿಸಿಎಂ ಆಗಿದ್ದರು. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ದೇವೇಗೌಡರು ‌ಈ ದೇಶದ ಪ್ರಧಾನಿ ‌ಮತ್ತು ಸಿಎಂ ಆಗಿದ್ದರು. ಆದ್ರೆ ಕಾಂಗ್ರೆಸ್ ನಲ್ಲಿ ಯಾರಿದ್ದಾರೆ ತೋರಿಸಿ‌ ನೋಡೋಣ, ಯಾರೂ ಇಲ್ಲ. ಡಿ.ಕೆ.ಶಿವಕುಮಾರ್ ನಿನ್ನೆ ಮೊನ್ನೆ ಡಿಸಿಎಂ ಆಗಿದ್ದಾರೆ. ಆದ್ರೆ ನಾನು 10 ವರ್ಷದ‌ ಹಿಂದೆಯೇ ಡಿಸಿಎಂ ಅಗಿದ್ದೆ. ನಾವೆಲ್ಲ ಸೀನಿಯರ್, ನೀನು ಜ್ಯೂನಿಯರ್ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟಾಂಗ್ ನೀಡಿದ್ದಾರೆ. 

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಯಾವ ಸೀಮೆ ಒಕ್ಕಲಿಗ ಲೀಡರ್? ಅವರಿಗೆ ಏನಾದ್ರೂ ಬ್ರ್ಯಾಂಡ್ ‌ಇದ್ಯಾ? ಆತರದ್ದು ಏನೂ ಇಲ್ವಲ್ಲ. ಅವರು ಒಕ್ಕಲಿಗ ಸಮುದಾಯಕ್ಕೆ ಏನ್ ಮಾಡಿದ್ದಾರೆ? ಜಾತಿ ಗಣತಿಯಲ್ಲಿ ‌ಒಕ್ಕಲಿಗ ಸಮುದಾಯವನ್ನ 6ನೇ ಸ್ಥಾನಕ್ಕೆ ಕರೆದೊಯ್ದಿದ್ದಾರೆ ಅಂತ‌ ಮೂವರು ಸ್ವಾಮೀಜಿಗಳು ಹೇಳಿದ್ದಾರೆ. ಆದಿಚುಂಚನಗಿರಿ ‌ಮತ್ತು ಕುಂಚಟಗೇರಿ ಸ್ವಾಮೀಜಿ ನಮಗೆ ಅನ್ಯಾಯವಾಗಿದೆ ಅಂತ ಹೇಳಿದ್ದಾರೆ. ನೀವು ಏನ್ ಮಾಡಿದ್ದೀರಪ್ಪ, ನಿಮ್ಮ ಸ್ಥಾನಕ್ಕೆ ರಿಸೈನ್ ಮಾಡಿದ್ರಾ? ನೀವು ನಿಜವಾಗಿಯೂ ಒಕ್ಕಲಿಗ ಲೀಡರ್ ಆಗಿದ್ರೆ ನೀವು ರಿಸೈನ್ ಮಾಡಬೇಕಿತ್ತು. ಸಂಪುಟದಲ್ಲಿ ರಾಜೀನಾಮೆ ಕೊಡಬೇಕಿತ್ತು. ಆದರೆ, ಅದೆಲ್ಲವನ್ನು ಬಿಟ್ಟು ಸುಮ್ಮನೆ ಕುಳಿತ್ತಿದ್ರಿ. ಆಗ ಬಾಯಿ‌ಮುಚ್ಚಿಕೊಂಡು, ಈಗ ನಾನು ಒಕ್ಕಲಿಗ ಲೀಡರ್ ಅಂದ್ರೆ ಯಾರು ನಂಬುತ್ತಾರೆ ಎಂದು ತಿರುಗೇಟು ನೀಡಿದರು.

Latest Videos

undefined

ರಾಜ್ಯದಲ್ಲಿ ಈಗ ಜಾಸ್ತಿ ಒಕ್ಕಲಿಗ ಲೀಡರ್ ಇರೋದು ಬಿಜೆಪಿ ಮತ್ತು ಜೆಡಿಎಸ್ ನಲ್ಲಿ‌ ಮಾತ್ರ. ಹಳೆ ಮೈಸೂರು ‌ಸೇರಿ ರಾಜ್ಯದ ಎಲ್ಲಾ ಭಾಗದಲ್ಲಿ ಈ‌ ಎರಡೂ‌ ಪಕ್ಷದಲ್ಲಿ ಒಕ್ಕಲಿಗ ಲೀಡರ್ ಹೆಚ್ಚಾಗಿದ್ದಾರೆ. ನಾನು ವಿರೋಧ ಪಕ್ಷದ ನಾಯಕನಾಗಿದ್ದೇನೆ. ಅಶ್ವತ್ಥ್ ನಾರಾಯಣ್ ಡಿಸಿಎಂ ಆಗಿದ್ದರು. ಹೆಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಹೆಚ್.ಡಿ.ದೇವೇಗೌಡರು ‌ಈ ದೇಶದ ಪ್ರಧಾನಿ ‌ಮತ್ತು ಸಿಎಂ ಆಗಿದ್ದಾರೆ. ಆದ್ರೆ ಕಾಂಗ್ರೆಸ್ ನಲ್ಲಿ ಯಾರಿದ್ದಾರೆ ತೋರಿಸಿ‌ ನೋಡೋಣ ಯಾರೂ ಇಲ್ಲ. ಡಿ.ಕೆ. ಶಿವಕುಮಾರ್ ನಿನ್ನೆ ಮೊನ್ನೆ ಡಿಸಿಎಂ ಆಗಿದ್ದಾರೆ. ಆದ್ರೆ ನಾನು ಹತ್ತು ವರ್ಷದ‌ ಹಿಂದೆಯೇ ಡಿಸಿಎಂ ಅಗಿದ್ದೆ. ನಾವೆಲ್ಲ ಸೀನಿಯರ್. ನೀನಿನ್ನೂ ಜ್ಯೂನಿಯರ್ ಎಂದು ಹೇಳಿದರು.

ನೀವು ಒಕ್ಕಲಿಗ ನಾಯಕ ಅಂತ ಯಾರು ಹೇಳಿದ್ದಾರೆ? ಕನಕಪುರದ ತಾಲೂಕು ಬಿಟ್ಟರೆ ಆಚೆ ನೀವು ಲೀಡರ್ ಅಲ್ಲ. ಒಕ್ಕಲಿಗ ಸಮುದಾಯದವರು ನನ್ನ ಸಹೋದರು ಅಂತ ಎಲ್ಲಾದರೂ ಹೇಳಿದ್ದಾರಾ? ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಮಾಡಿದ್ದವನಿಗೆ ಬ್ರದರ್ಸ್ ಅಂದಿದ್ದಾರೆ. ಒಂದು ಒಕ್ಕಲಿಗರನ್ನ ಬ್ರದರ್ಸ್ ಎನ್ನಬೇಕು, ಇಲ್ಲ ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನ ಬ್ರದರ್ಸ್ ಅನ್ನಬೇಕು. ಒಕ್ಕಲಿಗ ಫೈಟ್ ಮಾಡೋದಕ್ಕೆ‌ ಕಾಂಗ್ರೆಸ್ ನಲ್ಲಿ ಲೀಡರ್ ಇಲ್ಲ. ನಮ್ಮಲ್ಲಿ ಸದಾನಂದಗೌಡ ‌ಇದ್ದಾರೆ, ಅವರ ಬಳಿ‌ ಯಾರೂ ಇಲ್ಲ. ಡಿಕೆ.ಶಿವಕುಮಾರ್ ತಿರುಕನ‌ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಅಂತ ಹೇಳಿದ್ದಾರೆ. ಅವರ ಮಗ ಕೂಡ ಹೇಳಿದ್ದಾರೆ ಎಂದು ಟೀಕೆ ಮಾಡಿದರು.

ಕುಮಾರಸ್ವಾಮಿ ಅವರಿಗೆ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ. ಅವರ ಭಾವನೆ ಆ ರೀತಿ ಇರಲಿಲ್ಲ. ನನ್ನ ಮುಂದೆಯೂ ಹೇಳಿದ್ದಾರೆ, ಹೆಣ್ಮಕ್ಕಳ‌ ಬಗ್ಗೆ ಅವರಿಗೆ ಅಪಾರ ನಂಬಿಕೆ, ಗೌರವ ಇದೆ. ಆದ್ರೆ ಅವರ ವಿರುದ್ಧ ಹೋರಾಟ ‌ಮಾಡುತ್ತಿದ್ದಾರೆ. ಚುನಾವಣೆ ದೃಷ್ಟಿಯಿಂದ ‌ವಿಷಾ‌ದ ವ್ಯಕ್ತಪಡಿಸಿದ್ದಾರೆ. ದಾರಿಯಲ್ಲಿ ‌ಹೋಗೋರೆಲ್ಲ ಗೋ ಬ್ಯಾಕ್ ಹೇಳುತ್ತಿದ್ದಾರೆ. ಚುನಾವಣೆ ಇದೆ ಅಂತ ಅಪಪ್ರಚಾರ ಮಾಡ್ತಿದ್ದಾರೆ. ಮಂಡ್ಯದಲ್ಲಿ ದೊಡ್ಡ ಅಂತರದಲ್ಲಿ ಕುಮಾರಸ್ವಾಮಿ ಗೆಲ್ತಾರೆ. ದೇಶಕ್ಕೆ ಮೋದಿ, ಮಂಡ್ಯಕ್ಕೆ ಕುಮಾರಣ್ಣ. ಬೆಂಗಳೂರು ಗ್ರಾಮಾಂತರದಲ್ಲಿ ಹೃದಯವಂತ ಡಾಕ್ಟರ್ ಗೆಲ್ತಾರೆ. ಹೃದಯ ಇಲ್ಲದ ಬಂಡೆ ಸೋಲುತ್ತದೆ. ಹೃದಯವಂತ ಡಾಕ್ಟರ್ ಬೇಕಾ? ಬಂಡೆ ಬೇಕಾ? ಕುಮಾರಸ್ವಾಮಿ ಹೇಳಿಕೆ ನಮ್ಮ ಪಕ್ಷಕ್ಕೆ ‌ಎಫೆಕ್ಟ್ ಆಗಲ್ಲ ಎಂದು ಹೇಳಿದರು.

click me!