* ಖಾತೆ ಹಂಚಿಕೆ ಬೆನ್ನಲ್ಲೇ ರಾಜೀನಾಮೆ ಬಗ್ಗೆ ಮಾತನಾಡಿದ ಸಚಿವ ಆನಂದ ಸಿಂಗ್
* ನಾನು ಕೇಳಿರೋದೇ ಒಂದು ಕೊಟ್ಟಿರೋದೇ ಒಂದು
* ಕೇಳಿದ ಖಾತೆ ಕೊಡದೇ ಇದ್ರೇ ಶಾಸಕನಾಗಿ ಉಳಿಯೋದೇ ಒಳಿತು
ಬಳ್ಳಾರಿ(ಆ.07): ಭಾರೀ ನಿರೀಕ್ಷೆ ಮೂಡಿಸಿದ್ದ ಕರ್ನಾಟಕ ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ನಡೆದಿದೆ. ಬೊಮ್ಮಾಯಿ ಸಂಪುಟದ 29 ಸಚಿವರಿಗೆ ಖಾತೆ ಹಂಣಚಿಕೆ ನಡೆದಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ. ಮೊದಲ ಬಾರಿ ಸಚಿವರಾದವರಿಗೆ ಪ್ರಭಾವಿ ಖಾತೆ ನೀಡಿರುವುದು ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಆದರೆ ಈ ಖಾತೆ ಹಂಚಿಕೆ ಕೆಲ ಸಚಿವರನ್ನು ಅಸಮಾಧಾನಗೊಳಿಸಿದ್ದು, ರಾಜೀನಾಮೆ ಬಗ್ಗೆ ಮಾತುಗಳು ಆರಂಭವಾಗಿವೆ.
ಅಳೆದು ತೂಗಿ ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಪಟ್ಟಿ
ಹೌದು ಕರ್ನಾಟಕ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಆನಂದ್ ಸಿಂಗ್‌ಗೆ ಪರಿಸರ, ಪ್ರವಾಸೋದ್ಯಮ ಖಾತೆ ವಹಿಸಲಾಗಿದೆ. ಆದರೆ ಇದರಿಂದ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ಈ ಖಾತೆ ವಹಿಸುವ ಬದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಮುಂದುವರೆಯುವುದೇ ಉತ್ತಮ ಎಂದಿದ್ದಾರೆ.
ಹೌದು ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿರುವ ಸಚಿವ ಆನಂದ್ ಸಿಂಗ್ ಬಿಜೆಪಿ ಸರ್ಕಾರ ಬರಲು ಮೊದಲು ರಾಜೀನಾಮೆ ನೀಡಿದ್ದು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಮೇ 1ರ ಮೊದಲೇ ನಾನು ರಾಜೀನಾಮೆ ನೀಡಿದ್ದೆ, ಹೀಗಂತ ನನ್ನಿಂದಲೇ ಸರ್ಕಾರ ಬಂದಿದೆ ಅನ್ನೋದಲ್ಲ. ಆದರೆ ನನ್ನಂತೆ ಹಲವು ಜನರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಯಾಗಿದೆ. ಹೀಗಿರುವಾಗ ಕೇಳಿದ ಖಾತೆ ಕೊಡದೇ ಇದ್ರೇ ಶಾಸಕನಾಗಿ ಉಳಿಯೋದೇ ಒಳಿತು ಎನ್ನುವದು ನನ್ನ ನಿಲುವು ಎಂದಿದ್ದಾರೆ.
ಅಲ್ಲದೇ ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದ್ರು. ಇದು ಅವಮಾನ ಅಲ್ಲ ಆದ್ರೇ ನಿರಾಶೆ ಮಾಡಿರೋದಕ್ಕೆ ಸಾಕಷ್ಟು ಬೇಸರವಾಗಿದೆ. ಈ ಬಾರಿಯೂ ನಾನು ಕೇಳಿರೋದೇ ಒಂದು ಕೊಟ್ಟಿರೋದೇ ಒಂದು, ಮತ್ತೊಮ್ಮೆ ಸಿಎಂಗೆ ಮನವಿ ಮಾಡುವೆ ಕೊಡದಿದ್ರೇ ನನ್ನ ದಾರಿ ನಾನು ನೋಡಿಕೊಳ್ಳುವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.