
ಚಿಕ್ಕಬಳ್ಳಾಪುರ (ಜೂ.27): ಕೇಂದ್ರ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ(HD Kumaraswamy) ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡುವ ನೀವು 2028ಕ್ಕೆ ಗೆದ್ದರೆ ನಾನು ನಿಮ್ಮ ಮನೆ ವಾಚ್‌ಮನ್ ಆಗುತ್ತೇನೆ, ನೀವು ಸೋತರೆ ಕುಮಾರಸ್ವಾಮಿ ಮನೆ ಮುಂದೆ ಸೆಕ್ಯೂರಿಟಿ ಆಗುತ್ತೀರಾ ಎಂದು ಎಂದು ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್(Shidlaghatta JDS MLA B.N. Ravikumar) ಅವರು ಶಾಸಕ ಪ್ರದೀಪ್ ಈಶ್ವರ್(Pradeep Eshwar)ಗೆ ಬಹಿರಂಗ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರದೀಪ್ ಅವರೇ ನೀವು ಶಾಸಕರಾಗಿದ್ದು ಕೇವಲ ಕಾಂಗ್ರೆಸ್ ಮತಗಳಿಂದ ಅಲ್ಲ. ಜೆಡಿಎಸ್ ಮತಗಳಿಂದ ಎಂಬುದನ್ನು ಮರೆಯಬೇಡಿ, ಶಾಸಕರಾಗುವ ಮೊದಲು ನಿಮ್ಮ ಆಸ್ತಿ ಎಷ್ಟಿತ್ತು. ಈಗ ಎಷ್ಟು ಇದೆ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರು ಕೋರ್ಟ್ ನೀಡಿದ ನೋಟಿಸ್ಸನ್ನಷ್ಟೇ ಜೆಡಿಎಸ್ ಪಕ್ಷದ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ ಹೊರತು ಅವರು ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರು ಉಲ್ಲೇಖ ಮಾಡಿಲ್ಲ. ಆದರೆ ಪ್ರದೀಪ್ ಈಶ್ವರ್ ಕುಮಾರಸ್ವಾಮಿ, ದೇವೇಗೌಡರ ಕುಟುಂಬದ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಹೆಚ್ಚಿನ ಸುದ್ದಿಗಳಿಗೆ ಕ್ಲಿಕ್ ಮಾಡಿ: Pradeep Eshwar: 'ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ..' ಕೇಂದ್ರ ಸಚಿವ ಹೆಚ್‌ಡಿಕೆಗೆ ಪ್ರದೀಪ್ ಈಶ್ವರ್ ಸವಾಲು!
Bidadi Township: ಇಂದು ಬೈರಮಂಗಲದಲ್ಲಿ ಮಧ್ಯಾಹ್ನತನಕ ಕಾಯ್ತೇನೆ, ಸಿಎಂ ಬರಲಿ: ಎಚ್‌ಡಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.