ಒಂದೇ ದಿನದಲ್ಲಿ ಹೊಸ ಸಚಿವರ ಖಾತೆ ಬದಲು, ರಾಜ್ಯಪಾಲರಿಗೆ ಪ್ರಸ್ತಾವನೆ!

By Kannadaprabha NewsFirst Published Feb 11, 2020, 12:28 PM IST
Highlights

ನೂತನ ಸಚಿವರಿಗೆ ಸಿಕ್ತು ಖಾತೆ| ಖಾತೆ ಹಂಚಿಕೆಯಾದ ಬೆನ್ನಲ್ಲೇ ಓರ್ವ ಸಚಿವನ ಖಾತೆ ಬದಲು?| ಖಾತೆ ಬದಲಾವಣೆ ಕುರಿತು ರಾಜ್ಯಪಾಲರಿಗೆ ಶಿಫಾರಸ್ಸು ಪತ್ರ ಬರೆದ ಸಿಎಂ ಯಡಿಯೂರಪ್ಪ

ಬೆಂಗಳೂರು[ಫೆ.11]: ಪ್ರಮಾಣವಚನ ಸ್ವೀಕರಿಸಿದ 10 ನೂತನ ಸಚಿವರಿಗೆ ಸೋಮವಾರದಂದು ಖಾತೆ ಹಂಚಿಕೆ ನಡೆದಿತ್ತು. ತಮ್ಮಿಷ್ಟದ ಖಾತೆ ಪಡೆಯಲು ರಮೇಶ್ ಜಾರಕಿಹೊಳಿ ಹಾಗೂ ಎಸ್. ಟಿ. ಸೋಮಶೇಖರ್ ಯಶಸ್ವಿಯಾಗಿದ್ದರು. ಉಳಿದರೆಲ್ಲರಿಗೂ ಅಳೆದು ತೂಗಿ ಎಂಬುವಂತೆ ಬಿ. ಎಸ್. ಯಡಿಯೂರಪ್ಪ ಖಾತೆ ಹಂಚಿದ್ದರು. ಆದರೀಗ ಈ 10 ನಾಯಕರಲ್ಲಿ ಒಬ್ಬ ಸಚಿವನ ಖಾತೆ ಬದಲಾಗುವ ಸಾಧ್ಯತೆಗಳಿವೆ. ಮಂತ್ರಿಗಿರಿ ನೀಡಿರುವ ಕೇವಲ ಒಂದೇ ದಿನದಲ್ಲಿ ರಾಜ್ಯಪಾಲರಿಗೆ ಖಾತೆ ಬದಲಾಯಿಸುವಂತೆ ಸಿಎಂ ಶಿಫಾರಸ್ಸು ಪತ್ರ ಬರೆದಿದ್ದಾರೆ. ಹಾಗಾಧ್ರೆ ಖಾತೆ ಬದಲಾದ ಸಚಿವ ಯಾರು? ಇಲ್ಲಿದೆ ನೋಡಿ ವಿವರ.

ಸೋಮವಾರದಂದು ಸಂಪುಟ ಸೇರಿದ್ದ 10 ಶಾಸಕರಿಗೆ ಖಾತೆ ಹಂಚಿಕೆ ನಡೆದಿದ್ದು, ಬಿ. ಸಿ. ಪಾಟೀಲ್‌ಗೆ ಅರಣ್ಯ ಖಾತೆ ನೀಡಲಾಗಿತ್ತು. ಆದರೆ ಇದು ಅವರಿಗೆ ಖುಷಿ ಕೊಟ್ಟಿರಲಿಲ್ಲ. ಖಾತೆ ಹಂಚಿಕೆಯಾದ ಬೆನ್ನಲ್ಲೇ ಈ ವಿಚಾರವಾಗಿ ಬಿ. ಸಿ. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಅವರನ್ನು ಸಮಾಧಾನಪಡಿಸಲು ಮತ್ತೆ ಖಾತೆ ಬದಲಾವಣೆ ಕಸರತ್ತು ಮುಂದುವರೆದಿದೆ. ಈ ಕುರಿತು ಸಿಎಂ ಯಡಿಯೂರಪ್ಪ ರಾಜ್ಯಪಾಲರಿಗೆ ಶಿಫಾರಸ್ಸು ಪತ್ರ ಬರೆದು ಬಿ. ಸಿ. ಪಾಟೀಲ್ ಖಾತೆ ಲಬದಲಾಯಿಸುವಂತೆ ಕೆಳಿಕೊಂಡಿದ್ದಾರೆ. ಯಾವ ಖಾತೆಗೆ ಶಿಫಾರಸ್ಸು ಮಾಡಿದ್ದಾರೆ? ಮುಂದಿದೆ ವಿವರ

ಅರಣ್ಯ ಖಾತೆ ಪಡೆದಿದ್ದ ಬಿ. ಸಿ. ಪಾಟೀಲ್ ಅಸಮಾಧಾನಗೊಂಡಿದ್ದರು. ಅದ್ಯ ಅವರನ್ನು ಸಮಾಧಾನಗೊಳಿಸುವ ನಿಟ್ಟಿನಲ್ಲಿ ಕೃಷಿ ಖಾತೆ ನೀಡಲು ಸಿಎಂ ಯಡಿಯೂರಪ್ಪ ಶಿಫಾರಸ್ಸು ಮಾಡಿದ್ದಾರೆ. ಈ ಶಿಫಾರಸ್ಸು ಪತ್ರಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದರೆ ಬಿ. ಸಿ ಪಾಟೀಲ್ ಕೃಷಿ ಸಚಿವರಾಗಲಿದ್ದಾರೆ

ಖಾತೆ ಮರುಬದಲಾವಣೆ

ಅನಂದ್ ಸಿಂಗ್ - ಅರಣ್ಯ ಮತ್ತು ಜೈವಿಕ ಪರಿಸರ.

ಗೋಪಾಲಯ್ಯ - ಅಹಾರ ಮತ್ತು ನಾಗರಿಕ ಸರಬರಾಜು

ಶಿವರಾಂ ಹೆಬ್ಬಾರ್ - ಕಾರ್ಮಿಕ ಮತ್ತು ಸಕ್ಕರೆ..

ಸಿ ಸಿ ಪಾಟೀಲ್ -   ವಾಣಿಜ್ಯ ಮತ್ತು ಸಣ್ಣ ಕೈಗಾರಿಗೆ ಹೆಚ್ಚುವರಿ ಖಾತೆ ಹಂಚಿಕೆ

click me!