ಹೊಸಕೋಟೆಯಲ್ಲಿ ಕೊನೆಗೂ ಸೇಡು ತೀರಿಸಿಕೊಂಡ ಎಂಟಿಬಿ

By Suvarna NewsFirst Published Feb 11, 2020, 10:34 AM IST
Highlights

ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು| ಕಾಂಗ್ರೆಸ್‌ಗೆ ಶೂನ್ಯ| 7 ವಾರ್ಡ್‌ಗಳಲ್ಲಿ ಸೀಟಿ ಹೊಡೆದ ಕುಕ್ಕರ್

ಹೊಸಕೋಟೆ[ಫೆ.11]: ಭಾನುವಾರ ನಡೆದ ಹೊಸಕೋಟೆ ನಗರಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಕಮಲ ಪಾಳಯ ಜಯಭೇರಿ ಬಾರಿಸಿದೆ. ಒಟ್ಟು 31 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ, 22 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ. ಇನ್ನು 7 ಕ್ಷೇತ್ರಗಳಲ್ಲಿ ಶರತ್ ಬಚ್ಚೇಗೌಡ ಸ್ಥಾಪಿತ ಕುಕ್ಕರ್ ಪಕ್ಷ ಸೀಟಿ ಹೊಡೆದಿದ್ದರೆ, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ 1 ವಾರ್ಡ್‌ನಲ್ಲಿ ಗೆಲುವು ಸಾಧಿಸಿದೆ. ಈ ನಡುವೆ ಕಾಂಗ್ರೆಸ್‌ ಒಂದೂ ವಾರ್ಡ್‌ನಲ್ಲೂ ಗೆಲುವು ಸಾಧಿಸದೆ ತೀವ್ರ ಮುಖಭಂಗ ಎದುರಿಸಿದೆ.

"

ಭಾನುವಾರ ನಡೆದಿದ್ದ ಹೊಸಕೋಟೆ ನಗರಸಭಾ ಚುನಾವಣೆಯಲ್ಲಿ ಶೇ. 75ಮತದಾನ ನಡೆದಿತ್ತು ಹಾಗೂ 47364ರಲ್ಲಿ 35885 ಮತದಾರರು ಮತ ಚಲಾಯಿಸಿದ್ದರು. ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌, ಸ್ವಾಭಿಮಾನಿ ಪಕ್ಷ, ಸ್ವತಂತ್ರತ್ರ್ಯ ಅಭ್ಯರ್ಥಿಗಳನ್ನೊಳಗೊಂಡು ಒಟ್ಟು 114ಅಭ್ಯರ್ಥಿಗಳು ಕಣದಲ್ಲಿದ್ದರು.

ಒಂದೇ ಕುಟುಂಬದ 106 ಮಂದಿ ಮತದಾನ!

ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು, ಕೊನೆಗೂ ಬಿಜೆಪಿ ಗೆದ್ದು ಬೀಗಿದೆ.

click me!