ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂದುಕೊಂಡಿದ್ದೇನೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಎಂದು ಹೇಳಿದ್ದಾರೆ.
ರಾಮನಗರ (ಜೂ.23): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತೊರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂದುಕೊಂಡಿದ್ದೇನೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಎಂದು ಹೇಳಿದ್ದಾರೆ.
ಈ ಕುರಿತು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರನ್ನ ಗೆಲ್ಲಿಸಬೇಕು. ಅಭ್ಯರ್ಥಿ ಆಯ್ಕೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದಾಗಿದೆ. ಹೈಕಮಾಂಡ್ ಸ್ಪರ್ಧೆ ಮಾಡು ಅಂದ್ರೆ ಮಾಡ್ತೀನಿ. ಒಂದಷ್ಟು ರಾಜಕೀಯ ಬದಲಾವಣೆ ಆಗಬೇಕು. ಮುಂದೆ ಒಂದಷ್ಟು ಬದಲಾವಣೆ ಜೊತೆಗೆ ಚುನಾವಣೆ ಎದುರಿಸುತ್ತೇವೆ. ಜೆಡಿಎಸ್ ಜೊತೆಗೆ ಮೈತ್ರಿ ಆಗಬಹುದು ಅಂತ ಅನ್ಕೊಂಡಿದ್ದೀನಿ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ರಾಜ್ಯದಲ್ಲಿ ಈಗಾಗಲೇ ಎಲ್ಲಾ ಕಡೆ, ಮಾಧ್ಯಮಗಳಲ್ಲೂ ಈ ಬಗ್ಗೆ ಚರ್ಚೆ ಆಗ್ತಿದೆ. ಹಾಗಾಗಿ ಹೊಂದಾಣಿಕೆ ಆಗಬಹುದು ಅಂತ ಅನ್ನಿಸುತ್ತಿದೆ ಎಂದು ಹೇಳಿದರು.
ನನಗೆ ರಾಜ್ಯಾಧ್ಯಕ್ಷ ಪಟ್ಟ ಬೇಕೇ ಬೇಕು: ಬಿಜೆಪಿ ಹೈಕಮಾಂಡ್ ಮುಂದೆ ವಿ. ಸೋಮಣ್ಣ ಪಟ್ಟು
ಮೈತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ: ಸಂಸದ ಸದಾನಂದಗೌಡ ಮಾತನಾಡಿ, ಲೋಕಸಭಾ ಚುನಾವಣಾ ಸಂಬಂದ ಜಿಲ್ಲಾ ಪ್ರಮುಖರ ಸಭೆ ನಡೆಸುತ್ತಿದ್ದೇವೆ. ಈ ಚುನಾವಣೆಯಲ್ಲಿ ಆದ ಹಿನ್ನಡೆ, ಸಣ್ಣಪುಟ್ಟ ವ್ಯತ್ಯಾಸಗಳ ಅವಲೋಕನ ಮಾಡಿದ್ದೇವೆ. ಎಲ್ಲವನ್ನೂ ಸರಿಪಡಿಸಿ ನಾವು ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಒಂದು ಬಾರಿ ಫೇಲ್ ಆಗಿದ್ದೇವೆ, ಈಗ ಸಪ್ಲಿಮೆಂಟ್ರಿಗೆ ಫುಲ್ ಪ್ರಿಪೇರ್ ಆಗ್ತಿದ್ದೇವೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರದ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡ್ತಾರೆ. ಕೇವಲ ರಾಜ್ಯ ನಾಯಕರ ಒಂದಷ್ಟು ಅಭಿಪ್ರಾಯ, ಸಲಹೆ ಪಡೆಯುತ್ತಾರೆ. ಬಳಿಕ ಸೂಕ್ತ ತೀರ್ಮಾನ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತದೆ. ಕಳೆದ ಬಾರಿ ನಾವು ಲೋಕಸಭಾ ಚುನಾವಣೆಯಲ್ಲಿ 25ಸ್ಥಾನ ಗೆದ್ದಿದ್ದೇವೆ. ನರೇಂದ್ರ ಮೋದಿಯವರೇ ನಮ್ಮ ಶಕ್ತಿ. ಮೋದಿ ನಾಯಕತ್ವ ಈ ಬಾರಿಯೂ ನಮಗೆ ಹೆಚ್ಚು ಸ್ಥಾನ ತಂದುಕೊಡುತ್ತದೆ ಎಂದರು.
ಫಲಿತಾಂಶ ಬದಲಾವಣೆಯೇ ಫಲಿತಾಂಶವಲ್ಲ: ವಿಪಕ್ಷ ನಾಯಕರ ನೇಮಕ ಹಾಗೂ ರಾಜ್ಯಾಧ್ಯಕ್ಷರ ನೇಮಕದ ವಿಚಾರದಲ್ಲಿ ಕೇವಲ ನಾಯಕತ್ವ ಬದಲಾವಣೆಯೇ ಚುನಾವಣೆಯ ಫಲಿತಾಂಶ ಅಲ್ಲ. ಅಧಿವೇಶನ ಪ್ರಾರಂಭವಾಗುವ ಮುಂಚೆ ವಿಪಕ್ಷ ನಾಯಕ ಬೇಕು. ಹಾಗಾಗಿ ಇನ್ನೆರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕರ ನೇಮಕ ಆಗುತ್ತದೆ. ಸಿದ್ದರಾಮಯ್ಯ, ಡಿಕೆಶಿಯನ್ನ ಎದುರಿಸುವ ಸಮರ್ಥ ವ್ಯಕ್ತ ವಿಪಕ್ಷ ನಾಯಕರಾಗ್ತಾರೆ.
ನಮಗೆ ಒಂದೇ ಹೆಂಡ್ತಿ, ಮುಸ್ಲಿಂರಿಗೆ 25 ಹೆಂಡ್ರು: ಇಲ್ಲಿ ಅನ್ನ ತಿಂದೋರು ನಮ್ಮಂಗಿಬೇಕು - ಕೆ.ಎಸ್. ಈಶ್ವರಪ್ಪ
13 ಬಾರಿ ಬಜೆಟ್ ಮಂಡಿಸಿದ ಸಿದ್ರಾಮಯ್ಯಗೆ ಆಲೋಚನೆ ಇರಲಿಲ್ವಾ?: ಇನ್ನು ಅಕ್ಕಿ ಕೊಡುವ ವಿಚಾರದಲ್ಲಿ "ಕುಣಿಯಲಾಗದವರು, ನೆಲ ಡೊಂಕು ಅಂತಾರೆ" ಹಾಗೆ ಕಾಂಗ್ರೆಸ್ ನವರು ಯೋಜನೆ ಘೋಷಣೆಗೂ ಮೊದಲು ಮುಂದಾಲೋಚನೆ ಮಾಡಿಲ್ಲ. 13 ಬಜೆಟ್ ಕೊಟ್ಟ ಸಿದ್ದರಾಮಯ್ಯ ಈ ಬಗ್ಗೆ ಆಲೋಚನೆ ಇರಲಿಲ್ವಾ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಅನ್ವಯ ಆಗುವ ರೀತಿ ನಿಯಮರೂಪಿಸಿದೆ. ಆ ನಿಯಮವನ್ನ ಎಲ್ಲರೂ ಅನುಸರಿಸಬೇಕು. ಪಿಯುಷ್ ಗೋಯಲ್ ಅವರನ್ನ ಭೇಟಿ ಮಾಡಿದ್ರೆ ಅವರು ಮನೆಯಿಂದ ಅಕ್ಕಿ ತಂದುಕೊಡ್ತಾರಾ.? ಫುಡ್ ಸೆಕ್ಯುರಿಟಿ ಆ್ಯಕ್ಟ್ ಪ್ರಕಾರ ಅಕ್ಕಿ ಪಡೆದುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.