ಡಿಸೆಂಬರ್ 22, 27ಕ್ಕೆ ಗ್ರಾಮ ಸಮರ: ಸೋಂಕಿತರಿಗೆ ಕೊನೆಯ 1 ತಾಸು ಮತದಾನಕ್ಕೆ ಅವಕಾಶ!

By Kannadaprabha News  |  First Published Dec 1, 2020, 7:21 AM IST

ಡಿ.22, 27ಕ್ಕೆ ಗ್ರಾಮ ಸಮರ| ಬೀದರ್‌ನಲ್ಲಿ ಮಾತ್ರ ಇವಿಎಂ, ಇತರೆಡೆ ಮತಪತ್ರ ಬಳಕೆ| ಚುನಾವಣಾ ಆಯೋಗದಿಂದ ವೇಳಾಪಟ್ಟಿ ಘೋಷಣೆ| ನಿನ್ನೆಯಿಂದಲೇ ನೀತಿ ಸಂಹಿತೆ ಜಾರಿ| ಕೊರೋನಾ ಕಾರಣ ಮುಂಜಾಗ್ರತಾ ಕ್ರಮ| ಒಂದು ಮತಗಟ್ಟೆಯಲ್ಲಿ 1000ಕ್ಕಿಂತ ಹೆಚ್ಚು ಮತದಾರರಿಲ್ಲ| ಸೋಂಕಿತರಿಗೆ ಕೊನೆಯ 1 ತಾಸು ಮತದಾನಕ್ಕೆ ಅವಕಾಶ| ಮತದಾರರಿಗೆ ಮಾಸ್ಕ್‌, ಸ್ಯಾನಿಟೈಸರ್‌ ಕಡ್ಡಾಯ


ಬೆಂಗಳೂರು(ಡಿ.01): ಅವಧಿ ಮುಗಿದಿರುವ ರಾಜ್ಯದ 30 ಜಿಲ್ಲೆಗಳ 5672 ಗ್ರಾಮಪಂಚಾಯಿತಿಗಳಿಗೆ ಬರುವ ಡಿಸೆಂಬರ್‌ 22 ಹಾಗೂ 27ರಂದು ಎರಡು ಹಂತದಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಅಯೋಗ ವೇಳಾಪಟ್ಟಿಪ್ರಕಟಿಸಿದ್ದು, ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.

30 ಜಿಲ್ಲೆಗಳ 6004 ಗ್ರಾಮ ಪಂಚಾಯಿತಿಗಳ ಪೈಕಿ ಅವಧಿ ಮುಕ್ತಾಯವಾಗದ 162 ಗ್ರಾಮ ಪಂಚಾಯಿತಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಆರು ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಪೂರ್ಣವಾಗಿ ಸೇರ್ಪಡೆಯಾಗಿರುವ 33 ಮತ್ತು ಭಾಗಶಃ ಸೇರ್ಪಡೆಯಾಗಿರುವ 41 ಗ್ರಾಮ ಪಂಚಾಯಿತಿ ಸೇರಿದಂತೆ 242 ಗ್ರಾಮ ಪಂಚಾಯಿತಿಗಳನ್ನು ಹೊರತು ಪಡಿಸಿ 5672 ಗ್ರಾಮ ಪಂಚಾಯಿತಿಗಳ 35,884 ವಾರ್ಡ್‌ಗಳ 92,121 ಸದಸ್ಯ ಸ್ಥಾನಗಳಿಗೆ (ಒಂದು ವಾರ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯ ಸ್ಥಾನಗಳಿಗೆ ಅವಕಾಶವಿದೆ) ಚುನಾವಣೆ ನಡೆಯಲಿದೆ. ಈ ತಿಂಗಳ 30ರಂದು ಮತ ಎಣಿಕೆ ನಡೆಯಲಿದೆ.

Tap to resize

Latest Videos

ಗ್ರಾ.ಪಂ. ಎಲೆಕ್ಷನ್‌ಗೂ ಸಂಪುಟ ವಿಸ್ತರಣೆಗೂ ಸಂಬಂಧ ಇಲ್ಲ!

ಈ ಚುನಾವಣೆ ಪಕ್ಷಾತೀತವಾಗಿ ನಡೆಯಲಿದ್ದು, ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಅಥವಾ ಪಕ್ಷದ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಚುನಾವಣಾ ವೇಳಾ ಪಟ್ಟಿಪ್ರಕಟಿಸಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ. ಬಿ. ಬಸವರಾಜು, ಎಲ್ಲ ಜಿಲ್ಲೆಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ, ಪ್ರತಿ ತಾಲ್ಲೂಕಿನ ಅರ್ಧ ತಾಲ್ಲೂಕುಗಳು ಮೊದಲ ಹಂತದಲ್ಲಿ ಉಳಿದರ್ಧ ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ, ಬೀದರ್‌ ಜಿಲ್ಲೆಯಲ್ಲಿ ಮಾತ್ರ ಮತದಾನಕ್ಕೆ ವಿದ್ಯುನ್ಮಾನ ಮತ ಯಂತ್ರ ಬಳಸಲಾಗುವುದು, ಉಳಿದ ಕಡೆ ಮತಪತ್ರಗಳ ಮೂಲಕ ಮತದಾನ ನಡೆಯಲಿದೆ.

ನೀತಿ ಸಂಹಿತೆ ತಕ್ಷಣದಿಂದ ಜಾರಿ:

ಚುನಾವಣಾ ವೇಳಾಪಟ್ಟಿಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಡಿಸೆಂಬರ್‌ 31ರವರೆಗೆ ಸಂಜೆ 5 ಗಂಟೆವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆದರೆ ನೀತಿ ಸಂಹಿತೆ ಪಟ್ಟಣ ಪಂಚಾಯಿತಿ. ಪುರಸಭೆ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಿವೆ ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದರು.

ಮಹಿಳಾ ದೌರ್ಜನ್ಯ : ಬಿಜೆಪಿ ಶಾಸಕರೋರ್ವರ ರಾಜೀನಾಮೆಗೆ ಒತ್ತಡ

ಒಟ್ಟು 2,97,15,048 ಪಂಚಾಯಿತಿ ಮತದಾರರಿದ್ದು, ಈ ಪೈಕಿ 1,49,71,676 ಪುರುಷರು, 1,47,41,964 ಮಹಿಳೆಯರು ಹಾಗೂ 1408 ಇತರ ಮತದಾರರಾಗಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಗರಿಷ್ಠ ಒಂದು ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಹೀಗಾಗಿ ಒಟ್ಟು 42,128 ಮತಗಟ್ಟೆಸ್ಥಾಪಿಸಲಾಗಿದೆ. ಚುನಾವಣೆ ಪ್ರಕ್ರಿಯೆಗೆ 5847 ಚುನಾವಣಾಧಿಕಾರಿಗಳು ಹಾಗೂ 6085 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಒಟ್ಟಾರೆ 2,70,768 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೇಮಕ

ಕೋವಿಡ್‌ ಹಿನ್ನೆಲೆಯಲ್ಲಿ ಚುನಾವಣೆಗಾಗಿ ಮೊದಲ ಬಾರಿಗೆ 45 ಸಾವಿರ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸೇವೆಯನ್ನು ಪಡೆದುಕೊಳ್ಳಲಾಗುವುದು

ಮುಖ್ಯಮಂತ್ರಿ ಫೇಸ್‌ಬುಕ್ ಖಾತೆಯಲ್ಲಾಯ್ತು ಮಿಸ್ಟೇಕ್ : ನೆಟ್ಟಿಗರಿಂದ ತರಾಟೆ.

ಸೋಂಕಿತರಿಗೆ ಪ್ರತ್ಯೇಕ ಅವಕಾಶ:

ಕೋವಿಡ್‌ ಸೋಂಕಿತರು ಹಾಗೂ ಶಂಕಿತರಿಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಂಬಂಧಪಟ್ಟಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನಕ್ಕೆ ಅವಕಾಶ ಮಾಡಲು ಅವಕಾಶ ನೀಡಲಾಗುವುದು. ಕೋವಿಡ್‌ ಹಿನ್ನೆಲೆಯಲ್ಲಿ ಆಯೋಗ ಚುನಾವಣಾ ನಡೆಸಲು ತಯಾರಿಸಿರುವ ಮಾರ್ಗಸೂಚಿ ಪ್ರಕಾರ ಚುನಾವಣೆ ನಡೆಸಲು ಆದೇಶಿಸಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಮತಗಟ್ಟೆಪ್ರವೇಶಿಸುವ ಮೊದಲು ಸ್ಯಾನಿಟೈಸ್‌ ಮಾಡಿಕೊಂಡು ಮತಚಲಾಯಿಸಬೇಕಾಗುತ್ತದೆ ಎಂದು ಚುನಾವಣಾ ಆಯುಕ್ತ ಬಿ. ಬಸವರಾಜು ತಿಳಿಸಿದರು.

ಚುನಾವಣಾ ವೇಳಾಪಟ್ಟಿ

ಅಧಿಸೂಚನೆ ಹೊರಡಿಸುವ ದಿನ ಮೊದಲ ಹಂತ ಎರಡನೇ ಹಂತ

ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟ ಡಿ.7 ಡಿ.11

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಡಿ.11 ಡಿ.16

ನಾಮಪತ್ರಗಳ ಪರಿಶೀಲನೆ ಡಿ.12 ಡಿ.17

ನಾಮಪತ್ರ ವಾಪಸ್‌ಗೆ ಕೊನೇ ದಿನ ಡಿ.14 ಡಿ.19

ಮತದಾನದ ದಿನಾಂಕ ಡಿ.22 ಡಿ.27

ಮರುಮತದಾನ (ಅವಶ್ಯವಿದ್ದಲ್ಲಿ) ಡಿ.24 ಡಿ.29

ಮತ ಎಣಿಕೆ ಡಿ.30 ಡಿ.30

ಪ್ರಕ್ರಿಯೆ ಅಂತ್ಯ ಡಿ.31 ಡಿ.31

click me!