ಇಡೀ ಚುನಾವಣೆ ತುಂಬ ಕರ್ನಾಟಕ ಮುಸ್ಲಿಂ ಮೀಸಲು ಸದ್ದು..!

By Kannadaprabha News  |  First Published Jun 5, 2024, 9:59 AM IST

ಕಾಂಗ್ರೆಸ್‌ ಪಕ್ಷವು ಮುಸ್ಲಿಮರಿಗೆ ಅನ್ಯ ಧರ್ಮೀಯರ ಆಸ್ತಿ ಹಂಚಲು ಸಂಚು ರೂಪಿಸಿದೆ. ನಿಮ್ಮ ಆಸ್ತಿ, ಮಂಗಳಸೂತ್ರ, ಪಿತ್ರಾರ್ಜಿತ ಆಸ್ತಿ ಮೇಲೆ ಕಾಂಗ್ರೆಸ್‌ ಕಣ್ಣು ಬಿದ್ದಿದೆ. ಕಾಂಗ್ರೆಸ್‌ ಪಕ್ಷ ಗೆದ್ದರೆ ನಿಮ್ಮ ಮನೆಯ ಅರ್ಧ ಪಾಲು ಅಲ್ಪಸಂಖ್ಯಾತರ ಪಾಲಾಗಲಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದ್ದು ಭಾರಿ ಸದ್ದು ಮಾಡಿತು.


ನವದೆಹಲಿ(ಜೂ.05):  ಈ ಲೋಕಸಭೆ ಚುನಾವಣೆಯಾದ್ಯಂತ ಅತ್ಯಂತ ಅನಿರೀಕ್ಷಿತವಾಗಿ ಕರ್ನಾಟಕ ಸದ್ದು ಮಾಡಿತ್ತು. ಅದೇನೆಂದರೆ ‘ಕರ್ನಾಟಕವು ಒಬಿಸಿ, ಎಸ್ಸಿ ಎಸ್ಟಿ ಮೀಸಲು ಕಸಿದು ಮುಸ್ಲಿಮರಿಗೆ ಹಂಚಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಸತತ ಆರೋಪ.

ಮೋದಿ ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ - ಹೀಗೆ 2ನೇ ಹಂತದ ಚುನಾವಣೆ ಮುಗಿದ ನಂತರ ಅನೇಕ ರಾಜ್ಯಗಳನ್ನು ಸುತ್ತಿ ಕರ್ನಾಟಕದ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Latest Videos

undefined

ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರ ಜಸ್ಟ್‌ ಮಿಸ್‌ ಆಗಲು ಏನು ಕಾರಣ?

ಒಬಿಸಿ ಮೀಸಲು ಕಸಿಯಲು ಬಿಡಲ್ಲ, ಇದು ಮೋದಿ ಗ್ಯಾರಂಟಿ. ಕರ್ನಾಟಕದ ಮೀಸಲು ಮಾದರಿಯನ್ನು ದೇಶದೆಲ್ಲೆಡೆ ವಿಸ್ತರಣೆಗೆ ಕಾಂಗ್ರೆಸ್ ಸಂಚು ರೂಪಿಸಿದೆ. ಅಂಬೇಡ್ಕರ್‌ ಆಶಯಕ್ಕೆ ವಿರುದ್ಧವಾಗಿ ಧರ್ಮ ಆಧರಿತ ಕಾಂಗ್ರೆಸ್‌ ಒಬಿಸಿ, ಎಸ್ಟಿ-ಎಸ್ಟಿಗಳ ಮೀಸಲು ಕಸಿದು ದೇಶಾದ್ಯಂತ ಮುಸ್ಲಿಮರಿಗೆ ನೀಡಲು ಸಂಚು ರೂಪಿಸಿದೆ’ ಎಂದು ಮೋದಿ ಹರಿತ ಭಾಷಣ ಮಾಡಿದರು.

ಲೋಕಸಭೆ ಚುನಾವಣೆ ಫಲಿತಾಂಶ 2024: ಫೀನಿಕ್ಸ್‌ ಹಕ್ಕಿಯಂತೆ ಎದ್ದು ಬಂದ ಕಾಂಗ್ರೆಸ್‌..!

ಇದು ತಾವು ಮಾಡಿದ್ದಲ್ಲ, ಹಿಂದಿನ ಬಿಜೆಪಿ ಸರ್ಕಾರವೇ ಮುಸ್ಲಿಮರಿಗೆ ಮೀಸಲು ನೀಡಿತ್ತು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರಾದರೂ ಮೋದಿ ಅವರು 7ನೇ ಹಂತದ ಮತದಾನ ಮುಗಿಯುವವರೆಗೆ ತಮ್ಮ ಆರೋಪ ನಿಲ್ಲಿಸಲಿಲ್ಲ.

ಸದ್ದು ಮಾಡಿದ ಮಂಗಳಸೂತ್ರ

‘ಕಾಂಗ್ರೆಸ್‌ ಪಕ್ಷವು ಮುಸ್ಲಿಮರಿಗೆ ಅನ್ಯ ಧರ್ಮೀಯರ ಆಸ್ತಿ ಹಂಚಲು ಸಂಚು ರೂಪಿಸಿದೆ. ನಿಮ್ಮ ಆಸ್ತಿ, ಮಂಗಳಸೂತ್ರ, ಪಿತ್ರಾರ್ಜಿತ ಆಸ್ತಿ ಮೇಲೆ ಕಾಂಗ್ರೆಸ್‌ ಕಣ್ಣು ಬಿದ್ದಿದೆ. ಕಾಂಗ್ರೆಸ್‌ ಪಕ್ಷ ಗೆದ್ದರೆ ನಿಮ್ಮ ಮನೆಯ ಅರ್ಧ ಪಾಲು ಅಲ್ಪಸಂಖ್ಯಾತರ ಪಾಲಾಗಲಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದ್ದು ಭಾರಿ ಸದ್ದು ಮಾಡಿತು.

click me!