ವಿಜಯಪುರ: ಗೆಲುವಿನ ಸರದಾರನಿಗೆ ಮತ್ತೆ ಒಲಿದ ವಿಜಯಲಕ್ಷ್ಮಿ..!

By Girish Goudar  |  First Published Jun 5, 2024, 9:50 AM IST

ಹಿರಿಯ ಸಂಸದ ರಮೇಶ ಜಿಗಜಿಣಗಿಯವರಿಗೆ ಬಹುಶಃ ಇದೆ ಕಾರಣಕ್ಕೆ ಸೋಲಿಲ್ಲದ ಸರದಾರ ಎಂದು ಕರೆಯುತ್ತಾರೆ ಅಂತಾ ಕಾಣುತ್ತೆ. ಈ ಬಾರಿ ಸೇರಿ ಸತತ 7 ಬಾರಿ ಸಂಸತ್ ಪ್ರವೇಶ ಮಾಡುವ ಮೂಲಕ ಸೈ ಎಣಿಸಿಕೊಂಡಿದ್ದಾರೆ‌. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತತ 3 ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಮಾಡಿದ್ರು. ಬಳಿಕ ವಿಜಯಪುರ ಲೋಕಸಭಾ ಕ್ಷೇತ್ರ ಎಸ್.ಸಿ ಮೀಸಲಾತಿ ಬಳಿಕ ಸ್ವಂತ ಜಿಲ್ಲೆಗೆ ಆಗಮಿಸಿ ಸತತ 4 ಬಾರಿ ಲೋಕಸಭಾ ಎಲೆಕ್ಷನ್‌ನಲ್ಲಿ ಗೆದ್ದಿದ್ದಾರೆ. ಹೀಗಾಗಿಯೇ ಜಿಗಜಿಣಗಿ ಸೋಲಿಲ್ಲದ ಸರದಾರ ಅಂತಾ ಕರೆಯಿಸಿಕೊಳ್ತಿದ್ದಾರೆ.


ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಜೂ.05):  ಸೋಲಿಲಲ್ಲದ ಸರದಾರ ಎಂದು ಕರೆಯಿಸಿಕೊಳ್ಳುವ ಹಿರಿಯ ಸಂಸದ ರಮೇಶ ಜಿಗಜಿಣಗಿ ಮತ್ತೆ ಗೆಲುವಿನ ರುವಾರಿ ಎನಿಸಿಕೊಂಡಿದ್ದಾರೆ. ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಜಿಗಜಿಣಗಿ ಸತತ 7 ಬಾರಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರೆಕಾರ್ಡ್ ಬರೆದಿದ್ದಾರೆ.

Tap to resize

Latest Videos

undefined

ಸತತ ಏಳನೇ ಬಾರಿ ಜಿಗಜಿಣಗಿ ಸಂಸತ್ ಪ್ರವೇಶ..

ಹಿರಿಯ ಸಂಸದ ರಮೇಶ ಜಿಗಜಿಣಗಿಯವರಿಗೆ ಬಹುಶಃ ಇದೆ ಕಾರಣಕ್ಕೆ ಸೋಲಿಲ್ಲದ ಸರದಾರ ಎಂದು ಕರೆಯುತ್ತಾರೆ ಅಂತಾ ಕಾಣುತ್ತೆ. ಈ ಬಾರಿ ಸೇರಿ ಸತತ 7 ಬಾರಿ ಸಂಸತ್ ಪ್ರವೇಶ ಮಾಡುವ ಮೂಲಕ ಸೈ ಎಣಿಸಿಕೊಂಡಿದ್ದಾರೆ‌. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತತ 3 ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಮಾಡಿದ್ರು. ಬಳಿಕ ವಿಜಯಪುರ ಲೋಕಸಭಾ ಕ್ಷೇತ್ರ ಎಸ್.ಸಿ ಮೀಸಲಾತಿ ಬಳಿಕ ಸ್ವಂತ ಜಿಲ್ಲೆಗೆ ಆಗಮಿಸಿ ಸತತ 4 ಬಾರಿ ಲೋಕಸಭಾ ಎಲೆಕ್ಷನ್‌ನಲ್ಲಿ ಗೆದ್ದಿದ್ದಾರೆ. ಹೀಗಾಗಿಯೇ ಜಿಗಜಿಣಗಿ ಸೋಲಿಲ್ಲದ ಸರದಾರ ಅಂತಾ ಕರೆಯಿಸಿಕೊಳ್ತಿದ್ದಾರೆ.

ರಾಯಚೂರು: ಕಾಂಗ್ರೆಸ್ ಸೇರಿದ 2 ತಿಂಗಳಲ್ಲೇ ಸಂಸದರಾದ ನಿವೃತ್ತ ಐಎಎಸ್ ಅಧಿಕಾರಿ..!

ಮೊಳಗಿತು ಒಗ್ಗಟ್ಟಿನ ಮಂತ್ರ..!

ಇನ್ನೂ ಚುನಾವಣೆ ಆರಂಭದಲ್ಲಿ ಜಿಗಜಿಣಗಿ ಸ್ಪರ್ಧೆಗೆ ವಿರೋಧ, ಸಮುದಾಯಗಳ ವಿರೋಧ ಎಂದೆಲ್ಲ ವಿವಾದಗಳು ಹರಡಿದ್ದವು. ಬಳಿಕ ಎಲ್ಲವೂ ತಣ್ಣಗಾಗಿ ಜಿಲ್ಲಾ ಬಿಜೆಪಿ ನಾಯಕರು ಬಣ ರಾಜಕೀಯ, ಸ್ವ ಪ್ರತಿಷ್ಠೆ ಬದಿಗಿರಿಸಿ ಈ ಚುನಾವಣೆಯಲ್ಲಿ  ಒಗ್ಗಟ್ಟಿನ ಮಂತ್ರದ ಪಠಿಸಿದರು. ಇದರ ಪ್ರತಿಫಲವಾಗಿ ವಿಜಯಪುರ ಬಿಜೆಪಿ ಭದ್ರಕೋಟೆ ಎಂಬುದು ಮತ್ತೆ ಸಾಬೀತಾದಂತಾಗಿದೆ. ಎಂದಿನಂತೆ ಜಿಗಜಿಣಗಿ ಭಾರೀ ಅಂತರದಲ್ಲಿ ಮತ್ತೆ ಗೆದ್ದು ಸಂಸತ್ ನತ್ತ ದಾಪುಗಾಲಿಟ್ಟಿದ್ದಾರೆ‌.

ಇಬ್ಬರು ಪ್ರಭಾವಿ, 4 ಜನ ಕಾಂಗ್ರೆಸ್ ಶಾಸಕರು..!

ಇನ್ನೂ ಜಿಲ್ಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಇಬ್ಬರು ಪ್ರಭಾವಿ ಸಚಿವರು ಹಾಗೂ ನಾಲ್ವರು ಹಿರಿಯ ಕಾಂಗ್ರೆಸ್ ಶಾಸಕರಿದ್ದಾರೆ‌.‌ ಇದೆ ಕಾರಣಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿ ಜಿಗಜಿಣಗಿಗೆ ಕಲೆಕ್ಷನ್‌ ಟಫ್ ಎನ್ನುವ ಮಾತುಗಳು ಕೇಳಿ ಬಂದಿದ್ದದ್ವೂ.. ಆದ್ರೆ ಜಿಗಜಿಣಗಿ ಮಾತ್ರ ನಾ ಸೋಲೊದಿಲ್ಲ... ನಾ ಸೋಲೋದಿಲ್ಲ.. ಎಂದು ಕಾನ್ಪಿಡೆಂಟ್ ಆಗಿಯೆ ಹೇಳಿದ್ರು. ಈಗ ಅದು ಸತ್ಯವಾಗಿದೆ‌.‌ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಹೆಚ್ಚು ಲೀಡ್ ಪಡೆದಿದ್ದಾರೆ. ಇನ್ನು ಪ್ರಭಾವಿ ಸಚಿವರ ಮತಕ್ಷೇತ್ರಗಳಲ್ಲೇ ಬಿಜೆಪಿ ಹೆಚ್ಚು ಪಡೆದಿರುವುದು ಗಮನಾರ್ಹ ಸಂಗತಿ.

ಯಾವ ವಿಧಾನ ಸಭಾಕ್ಷೇತ್ರದಲ್ಲಿ ಎಷ್ಟೆಷ್ಟೂ ಲೀಡ್

ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭೆ ಕ್ಷೇತ್ರಗಳಲ್ಲಿ 6 ರಲ್ಲಿ ಕಾಂಗ್ರೆಸ್, ತಲಾ ಒಂದೊಂದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿದ್ದಾರೆ.  ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ, ನಾಗಠಾಣ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.  ಈ ಮತಕ್ಷೇತ್ರಗಳಲ್ಲಿ ರಮೇಶ ಜಿಗಜಿಣಗಿ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತಲೂ ಅತೀ ಹೆಚ್ಚು ಮತ ಪಡೆದಿದ್ದಾರೆ.  ಮತ್ತೋಂದೆಡೆ ದೇವರ ಹಿಪ್ಪರಗಿಯಲ್ಲಿ ಜೆಡಿಎಸ್ ಶಾಸಕರಿರುವ ಕಡೆಯೂ ಕಾಂಗ್ರೆಸ್ ಅಭ್ಯರ್ಥಿಗಿಂತ ಹೆಚ್ಚು ಮತಗಳಿಸಿ ಗಮನ ಸೆಳೆದಿದ್ದಾರೆ.

ವಿಜಯಪುರ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್..!

ಮತ್ತೋಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಬಿಜೆಪಿ ಶಾಸಕರಿರುವ ವಿಜಯಪುರ ನಗರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾರೆ.
ಈ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು 77229 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ರಮೇಶ ಜಿಗಜಿಣಗಿ ಪಡೆದ ಮತಗಳು- 672781
ಪ್ರೊ. ರಾಜು ಆಲಗೂರ ಪಡೆದ ಮತಗಳು- 595552
ರಮೇಶ ಜಿಗಜಿಣಗಿ ಗೆಲುವಿನ ಅಂತರ- 77229.
ಬಿಜೆಪಿ ಪಡೆದ ಮತಗಳ ಅಂತರ- 11785

ವಿಜಯಪುರ ಜಿಲ್ಲೆಯ ಒಟ್ಟು ಎಂಟು ವಿಧಾನ ಸಭೆ ಮತಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಗಳಿಸಿರುವ ಮತಗಳು ಮತ್ತು ಅಂತರದ ಮಾಹಿತಿ ಇಲ್ಲಿದೆ.

ಮುದ್ದೇಬಿಹಾಳ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 72650
ಪ್ರೊ. ರಾಜು ಆಲಗೂರ ಪಡೆದ ಮತಗಳು- 68688
ಬಿಜೆಪಿ ಪಡೆದ ಮತಗಳ ಅಂತರ- 3962

ದೇವರ ಹಿಪ್ಪರಗಿ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 72569
ಪ್ರೊ. ರಾಜು ಆಲಗೂರ ಪಡೆದ ಮತಗಳು- 63543

ಬಿಜೆಪಿ ಪಡೆದ ಮತಗಳ ಅಂತರ- 9026

ಬಸವನ ಬಾಗೇವಾಡಿ ವಿಧಾನಸಭೆ ಮತಕ್ಷೇತ್ರ (ಸಚಿವ ಶಿವಾನಂದ ಪಾಟೀಲ್‌ ಕ್ಷೇತ್ರ)

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 83916
ಪ್ರೊ. ರಾಜು ಆಲಗೂರ ಪಡೆದ ಮತಗಳು- 66363
ಬಿಜೆಪಿ ಪಡೆದ ಮತಗಳ ಅಂತರ- 17553

ಬಬಲೇಶ್ವರ ವಿಧಾನಸಭೆ ಮತಕ್ಷೇತ್ರ (ಸಚಿವ ಎಂ ಬಿ ಪಾಟೀಲ್ ಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 79002
ಪ್ರೊ. ರಾಜು ಆಲಗೂರ ಪಡೆದ ಮತಗಳು- 75651
ಬಿಜೆಪಿ ಪಡೆದ ಮತಗಳ ಅಂತರ- 3351

ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರ ಜಸ್ಟ್‌ ಮಿಸ್‌ ಆಗಲು ಏನು ಕಾರಣ?

ವಿಜಯಪುರ ನಗರ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 83714
ಪ್ರೊ. ರಾಜು ಆಲಗೂರ ಪಡೆದ ಮತಗಳು- 92984
ಕಾಂಗ್ರೆಸ್ ಪಡೆದ ಮತಗಳ ಅಂತರ- 9270

ನಾಗಠಾಣ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 96158
ಪ್ರೊ. ರಾಜು ಆಲಗೂರ ಪಡೆದ ಮತಗಳು- 84373
ಬಿಜೆಪಿ ಪಡೆದ ಮತಗಳ ಅಂತರ- 11785

ಇಂಡಿ ವಿಧಾನಸಭೆ ಮತಕ್ಷೇತ್

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 95064
ಪ್ರೊ. ರಾಜು ಆಲಗೂರ ಪಡೆದ ಮತಗಳು- 69340
ಬಿಜೆಪಿ ಪಡೆದ ಮತಗಳ ಅಂತರ- 25724

ಸಿಂದಗಿ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 85982
ಪ್ರೊ. ರಾಜು ಆಲಗೂರ ಪಡೆದ ಮತಗಳು- 72335
ಬಿಜೆಪಿ ಪಡೆದ ಮತಗಳ ಅಂತರ- 13647.
ಅಂಚೆ ಮತಗಳ ಮಾಹಿತಿ
ರಮೇಶ ಜಿಗಜಿಣಗಿ- 3726
ಪ್ರೊ. ರಾಜು ಆಲಗೂರ- 2275.

click me!