ಕರ್ನಾಟಕ ಸಂಸದ ಜೈರಾಮ್ ರಮೇಶ್‌ಗೆ ಮಹತ್ವದ ಹುದ್ದೆ ನೀಡಿದ ಸೋನಿಯಾ ಗಾಂಧಿ

Published : Jun 16, 2022, 10:58 PM IST
ಕರ್ನಾಟಕ ಸಂಸದ ಜೈರಾಮ್ ರಮೇಶ್‌ಗೆ ಮಹತ್ವದ ಹುದ್ದೆ ನೀಡಿದ ಸೋನಿಯಾ ಗಾಂಧಿ

ಸಾರಾಂಶ

* ಕರ್ನಾಟಕ ಸಂಸದ ಜೈರಾಮ್ ರಮೇಶ್‌ಗೆ ಮಹತ್ವದ ಹುದ್ದೆ * ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಜೈರಾಮ್ ರಮೇಶ್ ನೇಮಕ * ನೇಮಕ ಮಾಡಿ ಆದೇಶ ಮಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

ಬೆಂಗಳೂರು, (ಜೂನ್.16): ಎರಡನೇ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಜೈರಾಮ್ ರಮೇಶ್ (Karnataka MP Jairam Ramesh)ಅವರಿಗೆ ಮಹತ್ವದ ಹುದ್ದೆ ಸಿಕ್ಕಿದೆ. 

ಕರ್ನಾಟಕ ಸಂಸದ ಜೈರಾಮ್ ರಮೇಶ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು(ಗುರುವಾರ) ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಎಐಸಿಸಿಯ ಮಾಹಿತಿ, ಸೋಷಿಯಲ್ , ಡಿಜಿಟಲ್ ಮಿಡಿಯಾ ವಿಭಾಗದ ಉಸ್ತುವಾರಿ ಸಹ ಜೈರಾಮ್ ರಮೇಶ್‌ಗೆ ವಹಿಸಲಾಗಿದೆ.

Rajya Sabha Poll ಡೈನಿಂಗ್ ಟೇಬಲ್ ಪಾಲಿಟಿಕ್ಸ್ ಸೋತಿದ್ದು ಎಲ್ಲಿ? ದಾರಿ ತಪ್ಪಿದರಾ ದಳಪತಿಗಳು?

 ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಐಸಿಸಿಯ ಮಾಹಿತಿ, ಸೋಷಿಯಲ್ , ಡಿಜಿಟಲ್ ಮಿಡಿಯಾ ವಿಭಾಗದ ಉಸ್ತುವಾರಿಯಾಗಿದ್ದರು. ಇದೀಗ ಅವರನ್ನು ಬದಲಿಸಿ ಜೈರಾಮ್ ರಮೇಶ್ ಅವರನ್ನ ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಕೇವಲ ಕರ್ನಾಟಕ ಉಸ್ತುವಾರಿಯಾಗಿ  ಮುಂದುವರಿಯಲಿದ್ದಾರೆ.

ಜೈರಾಮ್ ರಮೇಶ್ ಅವರು 2016ರಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಮತ್ತೊಮ್ಮೆ ಕರ್ನಾಟಕದಿಂದಲೇ ಎರಡನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ