* ನಾನು ಕೇಳಿದರೆ ನಾಲ್ಕು ಟಿಕೆಟ್ ಕೊಡ್ತಾರೆ
* ಮುಂಬರುವ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುವೆ
* ನಾನು ಮುಖ್ಯಮಂತ್ರಿ ಆಗುವ ಬಗ್ಗೆ ಏನು ಹೇಳುವುದಕ್ಕಾಗುವುದಿಲ್ಲ
ದಾವಣಗೆರೆ(ಜೂ.16): ಕಾಂಗ್ರೆಸ್ ಪಕ್ಷದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ನೀತಿ ನಮ್ಮ ಕುಟುಂಬಕ್ಕೆ ಅನ್ವಯ ಆಗುವುದಿಲ್ಲ. ನಾನು ಕೇಳಿದರೆ ನಾಲ್ಕು ಟಿಕೆಟ್ ಕೊಡುತ್ತಾರೆ. ಗೆಲ್ಲುವವರು ಬೇಕು ಅಷ್ಟೇ ಎನ್ನುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವುದಾಗಿ ಹಿರಿಯ ಕಾಂಗ್ರಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ತಿಳಿಸಿದ್ದಾರೆ.
ಇಂದು(ಗುರುವಾರ) ತಮ್ಮ ಮೊಮ್ಮಗಳ ಮದುವೆಯಲ್ಲಿ ಭಾಗಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರೊಂದಿಗೆ ತಮ್ಮ 92ನೇ ಜನ್ಮ ದಿನ ಆಚರಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ನನ್ನ ಮನೆ ಯಾಕೆ ರಾಜಕೀಯ ಶಕ್ತಿ ಕೇಂದ್ರ ಆಗಬಾರದು ಎಂದು ಪ್ರಶ್ನಿಸಿದರು.
DAVANAGERE: ಜನರೇ ಕಾಂಗ್ರೆಸನ್ನು ಮನೆಗೆ ಚಲೋ ಮಾಡಲಿದ್ದಾರೆ: ಸಿಎಂ ಬೊಮ್ಮಾಯಿ ವ್ಯಂಗ್ಯ
ಮುಂಬರುವ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುವೆ. ನಾನು ಮುಖ್ಯಮಂತ್ರಿ ಆಗುವ ಬಗ್ಗೆ ಏನು ಹೇಳುವುದಕ್ಕಾಗುವುದಿಲ್ಲ. ನಾನು ಮುಖ್ಯಮಂತ್ರಿ ಆಗುವ ವಿಚಾರದ ಬಗ್ಗೆ ಬೇಕಿದ್ದರೆ ಕೋಡಿಹಳ್ಳಿ ಮಠದ ಸ್ವಾಮೀಜಿಗಳನ್ನು ಕೇಳಿ ಎಂದು ತಿಳಿಸಿದ್ದಾರೆ.