ಬೆಂಗಳೂರು (ಮೇ.24): ಪರಿಷತ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಆರ್.ಪಾಟೀಲ್ (SR patil)ರನ್ನು ಮನವೊಲಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಹೀಗಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ (Randeep Singh Surjewala) ಅವರು ಪಾಟೀಲ್ ಮನವೊಲಿಕೆಯ ಜವಾಬ್ದಾರಿಯನ್ನು ಈಶ್ವರ್ ಖಂಡ್ರೆ (Eshwara Khandre ) ಅವರಿಗೆ ವಹಿಸಿದ್ದು, ಸುರ್ಜೇವಾಲಾ ಸೂಚನೆ ಮೇರೆಗೆ ಎಸ್ ಆರ್ ಪಾಟೀಲ್ ಗೆ ಈಶ್ವರ್ ಖಂಡ್ರೆ ಕರೆ ಮಾಡಿ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ನಿರ್ಧಾರ ಬೇಸರ ಮಾಡಿಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಹೈಕಮಾಂಡ್ ನಿಮ್ಮನ್ನ ಪರಿಗಣಿಸುತ್ತೆ. ಹೈಕಮಾಂಡ್ ಈ ಸಂದೇಶ ನಿಮಗೆ ತಿಳಿಸಲು ಹೇಳಿತ್ತು ಹೀಗಾಗಿ ಕರೆ ಮಾಡಿದೆ. ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದು ಈಶ್ವರ್ ಖಂಡ್ರೆ ದೂರವಾಣಿಯಲ್ಲಿ ಪಾಟೀಲ್ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆನ್ನಲಾಗಿದೆ
ಈಶ್ವರ್ ಖಂಡ್ರೆ ಮಾತಿಗೆ ಪ್ರತಿಕ್ರಯಿಸಿರುವ ಎಸ್.ಆರ್ ಪಾಟೀಲ್, ನನಗೆ ಯಾವುದೇ ಬೇಸರವಿಲ್ಲ ಸುರ್ಜೇವಾಲಾ ರಾಜ್ಯಕ್ಕೆ ಬಂದಾಗ ನನಗೆ ಮಾತು ಕೊಟ್ಟು ಹೋಗಿದ್ರು, ದೆಹಲಿಗೆ ಹೋದ ಬಳಿಕ ಮಾತು ತಪ್ಪಿದ್ದಾರೆ. ನಾನು ನಮ್ಮ ಬೆಂಬಲಿಗರ ಜತೆ ಚರ್ಚೆ ಮಾಡಿ ಮುಂದುವರೆಯುತ್ತೇನೆ. ಬೆಂಬಲಿಗರು ಹೇಗೆ ಹೇಳ್ತಾರೋ ಹಾಗೇ ಕೇಳ್ತೀನಿ ಎಂದಿದ್ದಾರೆ.
ಬೆಳಗಾವಿಯಲ್ಲಿ ಆವಾಜ್ ಆದ್ರೆ ರಾಜ್ಯದಲ್ಲೇ ಹೆಚ್ಚು ಆವಾಜ್ Satish jarkiholi
ಸದ್ಯ ಬೆಂಗಳೂರಿನಲ್ಲಿಯೇ ಉಳಿದುಕೊಂಡಿರುವ ಎಸ್ ಆರ್ ಪಾಟೀಲ್ ಮಾಧ್ಯಮಗಳ ಮುಂದೆ ಬರಲು ಹಿಂದೇಟು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಆರ್.ಪಾಟೀಲಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಆಗ್ರಹಿಸಿದ್ದರು. ಆದರೆ ಲೆಕ್ಕಾಚಾರವೀಗ ತಲೆಕೆಳಗಾಗಿದೆ. ಕಾಂಗ್ರೆಸ್ ಎರಡು ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಎಂ ನಾಗರಾಜು ಯಾದವ್ ಹಾಗೂ ಕೆ ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿ ಪ್ರಕಟಿಸಿದೆ. ಹಲವು ನಾಯಕರ ಲಾಬಿ ನಡುವೆ ಎಂ ನಾಗರಾಜು ಯಾದವ್ ಹಾಗೂ ಕೆ ಅಬ್ದುಲ್ ಜಬ್ಬಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಹೀಗಾಗಿ ಉತ್ತರ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಎಸ್.ಆರ್.ಪಾಟೀಲ ಅವರಿಗೆ ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂಬ ಕೂಗಿಗೆ ಮನ್ನಣೆ ಸಿಕ್ಕಿಲ್ಲ. ಉತ್ತರ ಕರ್ನಾಟಕದ ಬಾಗಲಕೋಟೆ ವಿಜಯಪುರ ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಎಸ್ ಆರ್ ಪಾಟೀಲ್ ಅವರ ಅಭಿಮಾನಿಗಳು ಶತಾಯಗತಾಯ ಎಸ್ಆರ್ ಪಾಟೀಲ್ ಅವರಿಗೆ ಈ ಬಾರಿ ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದ್ದರು. ಈಗ ಟಿಕೆಟ್ ಕೈ ತಪ್ಪಿದ್ದು ಮುಂದೆ ಬೆಂಬಲಿಗರ ನಡೆ ಏನು ಎಂಬುದು ಕಾದು ನೋಡಬೇಕಿದೆ.
ಮಾಜಿ ಸಚಿವ ಎಸ್.ಆರ್.ಪಾಟೀಲ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದು, 25 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ, ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದು, ಇವುಗಳ ಮಧ್ಯೆ ಪಕ್ಷ ಕೆಲವೊಮ್ಮೆ ಅಧಿಕಾರ ನೀಡದೇ ಹೋದಾಗಲೂ ಸಹ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡಿದಂತವರು. ಅವರನ್ನು ಪರಿಷತ್ ಗೆ ಆಯ್ಕೆ ಮಾಡಬೇಕೆಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿತ್ತು.
Textbook controversy ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷ
ಕಳೆದ ಬಾರಿ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆದಾಗಲೂ ಎಸ್.ಆರ್.ಪಾಟೀಲ ಸೇರಿ ಇಬ್ಬರು ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಇಳಿಸಲು ಚಿಂತನೆ ನಡೆಸಿದಾಗ ಪಾಟೀಲರು ಏಕೈಕ ಅಭ್ಯರ್ಥಿಯಾದರೆ ಮಾತ್ರ ಸ್ಪರ್ಧೆ ಮಾಡೋದಾಗಿ ಹೇಳಿ ಹಿಂದೆ ಸರಿದಿದ್ದರು. ಇನ್ನು ಇತ್ತೀಚೆಗೆ ಪಕ್ಷಾತೀತವಾಗಿ ಎಸ್.ಆರ್.ಪಾಟೀಲರು ಪಾದಯಾತ್ರೆ ನಡೆಸಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದ್ರೆ ಅದ್ಯಾವುದೂ ವರ್ಕ್ ಆಗಿಲ್ಲ. ಈ ಬಾರಿ ಕೂಡ ಪಾಟೀಲರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಕಳಿಸುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮನಸ್ಸು ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿ.