ಲಕ್ಷ್ಮಣ ಸವದಿಗೆ ಸಾಲು-ಸಾಲು ಆಫರ್‌, ಹೈಕಮಾಂಡ್‌ ಲೆಕ್ಕಾಚಾರವೇ ಬೇರೆ..!

By Ramesh B  |  First Published May 24, 2022, 12:38 PM IST

* ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ
* ಅಚ್ಚರಿ ಎಂಬಂತೆ ಮತ್ತೆ ಲಕ್ಷ್ಮಣ ಸವದಿಗೆ ಪರಿಷತ್ ಟಿಕೆಟ್
* ಲಕ್ಷ್ಮಣ ಸವದಿ ಆಯ್ಕೆ ಹಿಂದೆ ಹೈಕಮಾಂಡ್‌ನ ನೂರೆಂಟು ಲೆಕ್ಕಾಚಾರ


ಬೆಂಗಳೂರು, (ಮೇ.24): ವಿಧಾನ ಪರಿಷತ್‌ಗೆ ಬಿಜೆಪಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.  ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ (Laxman Savadi) ಲಿಂಗಾಯತರ ಕೋಟದಡಿಯಲ್ಲಿ ಪರಿಷತ್‌ ಟಿಕೆಟ್‌ ದೊರೆತಿದೆ.

ಮಹಿಳಾ ಕೋಟದಡಿಯಲ್ಲಿ ಕೊಪ್ಪಳ ಮೂಲದ ಲಂಬಾಣಿ ಸಮುದಾಯದ ಹೇಮಲತಾ ನಾಯಕ, ಹಿಂದುಳಿದ ವರ್ಗ ಕೋಟದಲ್ಲಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್‌, ದಲಿತರ ಕೋಟದಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್‌ ನೀಡಲಾಗಿದೆ.

Latest Videos

undefined

ಸವದಿ ಆಯ್ಕೆ ಹಿಂದೆ ಹಲವು ಲೆಕ್ಕಾಚಾರ
ಹೌದು...ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಹಾಲಿ ವಿಧಾನ ಪರಿಷತ್‌ ಸದಸ್ಯರು ಆಗಿರುವ ಲಕ್ಷ್ಮಣ ಸವದಿಗೆ ಮತ್ತೊಂದು ಅವಕಾಶ ನೀಡಲಾಗಿದೆ.  ಹೈಕಮಾಂಡ್‌ ನೂರೆಂಟ್ ಲೆಕ್ಕಾಚಾರವನ್ನು ಹಾಕಿಯೇ ಸವದಿಗೆ ಟಿಕೆಟ್ ನೀಡಿದೆ ಎಂದು ತಿಳಿದುಬಂದಿದೆ. 

ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ, ಪಟ್ಟಿಯಲ್ಲಿ ಮತ್ತಷ್ಟು ಅಚ್ಚರಿ

ಯೆಸ್...ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಮಹೇಶ್ ಕುಮಟಳ್ಳಿ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ ನೀಡುವ ಸಂಬಂಧ ಅದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಲಕ್ಷ್ಮಣ ಸವದಿ ಅವರನ್ನ ವಿಧಾನಪರಿಷತ್ ಕಳುಹಿಸಲಾಗುತ್ತಿದೆ ಒಂದು ವೇಳೆ ಸವದಿಗೆ ಪರಿಷತ್ ಟಿಕೆಟ್ ನೀಡದಿದ್ದಲ್ಲಿ, ಅವರು 2023ರ ವಿಧಾನಸಭಾ ಚುನಾವಣೆಗೆ ಅಥಣಿ ಕ್ಷೇತ್ರದ ಟಿಕೆಟ್‌ ಮಹೇಶ್ ಕುಮಟಳ್ಳಿ ಬದಲಿಗೆ ತಮಗೆ ನೀಡುವಂತೆ ಬಿಗಿಪಟ್ಟು ಹಿಡಿಯುತ್ತಿದ್ದರು. 

ಒಂದು ವೇಳೆ ಕಮಟಳ್ಳಿ  ಬದಲಿಗೆ ಸವದಿಗೆ ಟಿಕೆಟ್ ನೀಡಿದ್ರೆ ರಮೇಶ್ ಜಾರಕಿಹೊಳಿ ಎದ್ದು ನಿಲ್ಲುತ್ತಾರೆ. ಇದಿರಂದ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಈಗಲೇ ಎಚ್ಚೆತ್ತುಕೊಂಡು ಮುಂದೆ ಆಗುವ ಎಲ್ಲಾ ಸಾಧಕ-ಬಾಧಕಗಳನ್ನ ನೋಡಿಯೇ ಲಕ್ಷ್ಮಣ ಸವದಿ ಅವರಿಗೆ ಹೈಕಮಾಂಡ್‌ ಪರಿಷತ್ ಟಿಕೆಟ್ ನೀಡಿದೆ ಎನ್ನುವುದು ರಾಜಕೀಯ ತಜ್ಞರ ವಿಶ್ಲೇಷಣೆಯಾಗಿದೆ. 

ಸವದಿಗೆ ಅಥಣಿ ಕ್ಷೇತ್ರ ಕೈತಪ್ಪುತ್ತಾ?
ಈಗಾಗಲೇ ಅಥಣಿ ಕ್ಷೇತ್ರದಿಂದ ಸೋಲು ಕಂಡಿರುವ ಲಕ್ಷ್ಮಣ ಸವದಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮಹೇಶ್ ಕುಮಟಳ್ಳಿ ಬಂದಿದ್ದು, ಅವರು ಅಥಣಿ ಕ್ಷೇತ್ರನ್ನು ಬಲವಾಗಿ ಹಿಡಿದುಟ್ಟುಕೊಳ್ಳುವ ಚಿಂತನೆಯಲ್ಲಿದ್ದಾರೆ. ಮತ್ತೊಂದೆಡೆ  ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದಲ್ಲಿ ತಲೆ ಹಾಕಬಾರದು ಎನ್ನುವ ದೃಷ್ಟಿಯಿಂದ ಮೇಲಿಂದ ಮೇಲೆ ಉತಮ್ಮ ಅವಕಾಶಗಳನ್ನ ನೀಡಲಾಗುತ್ತಿದೆ.

ಸೋತರೂ ಸಹ ಅಚ್ಚರಿ ಎಂಬಂತೆ ಉಪಮುಖ್ಯಮಂತ್ರಿ ಹುದ್ದೆ ಹರಿಸಿ ಬಂದಿತ್ತು. ಅಲ್ಲದೇ ವಿಧಾನಪರಿಷತ್‌ಗೆ ಕಳುಹಿಸಲಾಗಿತ್ತು. ಸಾಲದಕ್ಕೆ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈಗ ಮತ್ತೆ ಎರಡನೇ ಬಾರಿಗೆ ವಿಧಾನಪರಿಷತ್‌ ಟಿಕೆಟ್ ನೀಡಲಾಗಿದೆ. ಹೀಗೆ ಸೋತರೂ ಸಹ  ಸವದಿಗೆ ಸಾಲು-ಸಾಲು ಆಫರ್‌ಗಳು ಒದಗಿಬಂದಿವೆ. ಈ ಸಾಲು-ಸಾಲು ಆಫರ್‌ಗಳ ಹಿಂದೆ ಸವದಿ ಅವರನ್ನ ಅಥಣಿ ಕ್ಷೇತ್ರದತ್ತ ಹೋಗದಂತೆ ನೋಡಿಕೊಳ್ಳುವ ಲೆಕ್ಕಾಚಾರ ಹೈಕಮಾಂಡ್ ಹಾಕಿದೆ ಎಂದು ಮೂಲಗಳು ತಿಳಿಸಿವೆ. 

click me!