ಕುಮಾರಸ್ವಾಮಿ ಸರ್ಕಾರ ಬೀಳಿಸಲೇಬೇಕೆಂದು ಡ್ರಗ್ಸ್ ಅಡಿಕ್ಟ್ ತರ ಮಾತಾಡ್ತಿದ್ದಾರೆ. ಹೀಗೆ ಟೀಕೆ ಮಾಡಿಯೇ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಕಳ್ಕೊಂಡ್ರು ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.
ಕೋಲಾರ (ಏ.20) ಕುಮಾರಸ್ವಾಮಿ ಸರ್ಕಾರ ಬೀಳಿಸಲೇಬೇಕೆಂದು ಡ್ರಗ್ಸ್ ಅಡಿಕ್ಟ್ ತರ ಮಾತಾಡ್ತಿದ್ದಾರೆ. ಹೀಗೆ ಟೀಕೆ ಮಾಡಿಯೇ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಕಳ್ಕೊಂಡ್ರು ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.
ಇಂದು ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಪ್ರಚಾರದ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ಮೊದಲು ಮಂಡ್ಯದಲ್ಲಿ ಗೆಲ್ಲಲಿ. ಆಮೇಲೆ ಕೇಂದ್ರ ಸಚಿವರಾಗೋ ಮಾತಾಡಲಿ. ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಬರಲ್ಲ, ಕುಮಾರಸ್ವಾಮಿ ಅತೀ ವಿಶ್ವಾಸದಿಂದಲೇ ಸಿಎಂ ಆಗಿದ್ದಾಗ, ನಿಖಿಲ್ ಸೋತಿದ್ದು. ನಮ್ಮ ಸರ್ಕಾರ ಅಧಿಕಾರ ಬಂದ ಬಳಿಕ ರಾಜ್ಯದ ಗ್ಯಾರೆಂಟಿ ಯೋಜನೆಗಳಿಂದ ಜನರಿಗೆ ಸಹಕಾರ ಆಯ್ತು ಎಂದರು.
undefined
ಮೋದಿಗೆ ಚೊಂಬು ತೋರಿಸಲು ಹೋಗಿ ಜೈಲು ಸೇರಿದ್ದ ನಲಪಾಡ್ ಬೇಲ್ ಪಡೆದು ಹೊರಬಂದು ಹೇಳಿದ್ದೇನು?
ಇನ್ನು ತೆರಿಗೆ ಹೆಚ್ಚಿಸಿ ಕಾಂಗ್ರೆಸ್ ಸರ್ಕಾರ ಜನರ ಪಿಕ್ ಪಾಕೆಟ್ ಮಾಡ್ತಿದೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ, ಕುಮಾರಸ್ವಾಮಿಗೆ ಸ್ವಲ್ಪನಾದ್ರೂ ಬುದ್ಧಿ ಬೇಡ್ವಾ? ಬಾಯಿಗೆ ಬಂದಹಾಗೆ ಹೇಳೋದಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ. ಬೆಲೆ ಏರಿಕೆಯಿಂದ ಜನರು ರೋಸಿಹೋಗಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಮೋದಿ ಇಂದು ಚಿಕ್ಕಬಳ್ಳಾಪುರದಲ್ಲಿ ಸುಳ್ಳು ಹೇಳಿದ್ದಾರೆ. ಕೋಲಾರ ಜಿಲ್ಲೆಗೆ 20 ಸಾವಿರ ಮನೆ ಕೊಟ್ಟಿದ್ದೇವೆಂದು ಸುಳ್ಳು ಹೇಳಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಕೋಲಾರಕ್ಕೆ ಸ್ಲಂ ಬೋರ್ಡ್ ನಿಂದ ಒಂದೇ ಒಂದು ಮನೆ ಕೊಟ್ಟಿಲ್ಲ. ಕೊಟ್ಟಿದ್ದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು, ನಾನು ರಾಜಕೀಯದಿಂದ ನಾಳೆಯೇ ನಿವೃತ್ತಿ ತೆಗೆದುಕೊಳ್ಳುವೆ ಎಂದು ಸವಾಲು ಹಾಕಿದರು.
ಅಚ್ಚೇ ದಿನ್ ಬೇಡ, ಹಳೇ ದಿನಗಳೇ ಸಾಕು ಸ್ವಾಮಿ: ಸಚಿವ ಜಮೀರ್ ಅಹ್ಮದ್ ಖಾನ್
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1.5 ಲಕ್ಷ ಹಣ ಕೊಡ್ತಾರೆ. ಅದೇ ಯೋಜನೆಯಡಿ ಮತ್ತೆ GST ವಿಧಿಸಿ 1.38 ಲಕ್ಷ ವಾಪಾಸ್ ತೆಗೆದುಕೊಳ್ತಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಈಗ ಸರ್ಕಾರ 5 ವರ್ಷ ಇದ್ದೇ ಇರುತ್ತೆ, ನಮ್ಮಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಈಗ ಯಾರು ಸಿಎಂ ಇದ್ದಾರೋ ಅವರೇ ಸಿಎಂ ಆಗಿರ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರಗೆ ಸ್ಥಾನ ಇಲ್ಲ ಎಂಬ ಸುಳಿವು ನೀಡಿದರು.