'ಒಳ್ಳೆಯದನ್ನು ಹೊರಗೆ ಹೇಳಬೇಕು, ಕೆಟ್ಟದ್ದು ಒಳಗೆ ಚರ್ಚೆಯಾಗಬೇಕು'

By Suvarna News  |  First Published Apr 2, 2021, 9:26 PM IST

ಸಿಎಂ ಹಸ್ತಕ್ಷೇಪ ವಿಚಾರ: ಈಶ್ವರಪ್ಪ ಪತ್ರ ಬರೆದಿದ್ದಕ್ಕೆ ಸಚಿವ ಸುರೇಶ್ ಕುಮಾರ್ ಅಸಮಾಧಾನ/ ಒಳ್ಳೆಯದನ್ನು ಹೊರಗೆ ಹೇಳಿ ಕೆಟ್ಟದನ್ನು ಒಳಗೆ ಚರ್ಚೆ ಮಾಡಬೇಕು/ ಚಾಮರಾಜನಗರ ಪ್ರವಾಸದಲ್ಲಿ ಸಚಿವ ಸುರೇಶ್ ಕುಮಾರ್


ಚಾಮರಾಜನಗರ(ಏ. 02) ಒಳ್ಳೆಯದನ್ನು ಜನರಿಗೆ ಹೇಳಬೇಕು, ಕೆಟ್ಟದನ್ನು ನಮ್ಮ ವೇದಿಕೆಯಲ್ಲಿ ಚರ್ಚಿಸಬೇಕು ಎಂಬುದು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಸಚಿವ ಈಶ್ವರಪ್ಪ ಬರೆದ ಪತ್ರಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ,  ಸರ್ಕಾರದ ವಿಚಾರದ ಬಗ್ಗೆ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ. ಪತ್ರ ಬಹಿರಂಗ ಆಗುವ ಅವಶ್ಯಕತೆ ಇರಲಿಲ್ಲ. ಒಳ್ಳೆಯದನ್ನು ನಾವು ಹೊರಗಡೆ ಹೇಳಬೇಕು. ಕೆಟ್ಟದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ ಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

Tap to resize

Latest Videos

undefined

'ನೀವು ಸಿಎಂ ಆಗಿರಿ ಉಳಿದ ಎಲ್ಲ ಖಾತೆಯ ಜವಾಬ್ದಾರಿ ವಿಜಯೇಂದ್ರಗೆ ಕೊಡಿ'

ಬೆಂಗಳೂರಿನ  6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ 15 ದಿನಗಳವರೆಗೆ ಮಾತ್ರ ಶಾಲೆ ಇರಲ್ಲ, ಈ ಸಂಬಂಧ ಸಿಎಂ ಜೊತೆ ಮಾತುಕತೆ ಮಾಡಲಾಗಿದೆ.
10ನೇ ತರಗತಿ ಶಾಲೆಗೆ ಹಾಜರಾತಿ ಕಡ್ಡಾಯ ಅಲ್ಲ, ಪೋಷಕರ ಅನುಮತಿ ಪಡೆದು, ಒಪ್ಪಿಗೆ ಪತ್ರವನ್ನ ವಿದ್ಯಾರ್ಥಿಗಳು ತರಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡಿದೆ. ಹೊಸ ಮಾರ್ಗಸೂಚಿ ಹೊರಡಿಸಲಾಗಿದ್ದು ಜಿಮ್ ಮತ್ತು ಈಜುಕೋಳಕ್ಕೆ ನಿರ್ಬಂಧ ಹೇರಲಾಗಿದೆ. ಸಿನಿಮಾ ಮಂದಿರದಲ್ಲಿ ಸೀಟು ಭರ್ತಿ ಸಂಖ್ಯೆ ಅರ್ಧಕ್ಕೆ ಇಳಿಸಲಾಗಿದ್ದು ಸಾರ್ವಜನಿಕ ಸಾರಿಗೆ ಮತ್ತು ಧಾರ್ಮಿಕ ಸಭೆ ಸಮಾರಂಭಗಳ ಮೇಲೆಯೂ  ಕ್ರಮ ತೆಗೆದುಕೊಳ್ಳಲಾಗಿದೆ.

 

 

click me!