ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ: ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ

By Ravi JanekalFirst Published Aug 18, 2024, 6:17 PM IST
Highlights

ಸಿಎಂ ಸಿದ್ದರಾಮಯ್ಯನವರು ಯಾವ ತಪ್ಪು ಮಾಡಿಲ್ಲ. ಯಾಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಹೇಳಿದರು.

ಶಿವಮೊಗ್ಗ (ಆ.18): ಸಿಎಂ ಸಿದ್ದರಾಮಯ್ಯನವರು ಯಾವ ತಪ್ಪು ಮಾಡಿಲ್ಲ. ಯಾಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಹೇಳಿದರು.

ಇಂದು  ಶಿವಮೊಗ್ಗ ಜಿಲ್ಲೆಯ ಬಿಆರ್‌ಪಿಯಲ್ಲಿರುವ ಭದ್ರಾ ಜಲಾಶಯಕ್ಕೆ ತೆರಳಿ ಪತ್ನಿ ಸಂಸದೆ ಸಂಸದ ಪ್ರಭಾ ಮಲ್ಲಿಕಾರ್ಜುನ್  ಅವರೊಂದಿಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದರ ಹಿಂದೆ ವಿರೋಧ ಪಕ್ಷದವರ ಷಡ್ಯಂತ್ರವಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನರ ಆಶೀರ್ವಾದ ಸಿಕ್ಕಿ ಸಿಎಂ ಆಗಿದ್ದಾರೆ.  ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ರಾಜ್ಯಪಾಲರು ಹಾಗೂ ವಿರೋಧ ಪಕ್ಷದವರು ಮಾಡಿರುವ ಷಡ್ಯಂತ್ರ ಎಂದು ಆರೋಪಿಸಿದರು.

Latest Videos

ಪ್ರಾಸಿಕ್ಯೂಷನ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ; 'ಇದೇನಾ ನಿಮ್ಮ ಸಂವಿಧಾನ ರಕ್ಷಣೆ?' ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ!

ಈ ಬಾರಿ ಎರಡು ಬೆಳೆಗೆ ನೀರು:

ಮಧ್ಯ ಕರ್ನಾಟಕದ ಜೀವನದಿ ಭದ್ರಾ ಜಲಾಶಯ ಈ ಬಾರಿ ಭರ್ತಿಯಾಗಿದೆ. ಕಳೆದ ಬಾರಿ ಭರ್ತಿಯಾಗದೆ  ಒಂದು ಬೆಳೆಗೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು. ಈ ಬಾರಿ ಭರ್ತಿಯಾದ ಹಿನ್ನೆಲೆ ಎರಡು ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ರೈತರು ಒಳ್ಳೆಯ ಬೆಳೆ ಬೆಳೆಯಲಿ, ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದೇ ವೇಳೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಭದ್ರ ಜಲಾಶಯ ಭರ್ತಿಯಾಗಿದ್ದು, ಬಾಗಿನ ಅರ್ಪಣೆ ಮಾಡಿದ್ದೇವೆ. ಇದೇ ರೀತಿ ಭದ್ರಾ ಜಲಾಶಯ ತುಂಬಿರಲಿ. ರೈತರಿಗೆ ಮಳೆ ಬೆಳೆ ಚೆನ್ನಾಗಿ ಬರಲಿ, ರೈತರು ಸುಖವಾಗಿರಲಿ ಎಂದು ಹಾರೈಸಿದರು. 

click me!