ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪರ ಬಿಕೆ ಹರಿಪ್ರಸಾದ್ ಬ್ಯಾಟಿಂಗ್!

By Ravi Janekal  |  First Published Aug 18, 2024, 4:44 PM IST

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಗಂಭೀರ ಆರೋಪಗಳಿವೆ. ಚುನಾವಣೆ ಪೂರ್ವ ಸಮೀಕ್ಷೆ, ಸ್ಟಾಕ್ ಎಕ್ಸ್‌ಚೇಂಜ್ ಆರೋಪಗಳಿವೆ. ಹಿಂಡನ್ ಬರ್ಗ್ ಭ್ರಷ್ಟಾಚಾರ ಪ್ರಕರಣದ ಆರೋಪಗಳಿವೆ. ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿಯವರು ಮೊದಲು ಪ್ರಧಾನಿಯವರ ರಾಜೀನಾಮೆ ಕೊಡಿಸಲಿ ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಹರಿಹಾಯ್ದರು.


ಚಿತ್ರದುರ್ಗ (ಆ.18): ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಗಂಭೀರ ಆರೋಪಗಳಿವೆ. ಚುನಾವಣೆ ಪೂರ್ವ ಸಮೀಕ್ಷೆ, ಸ್ಟಾಕ್ ಎಕ್ಸ್‌ಚೇಂಜ್ ಆರೋಪಗಳಿವೆ. ಹಿಂಡನ್ ಬರ್ಗ್ ಭ್ರಷ್ಟಾಚಾರ ಪ್ರಕರಣದ ಆರೋಪಗಳಿವೆ. ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿಯವರು ಮೊದಲು ಪ್ರಧಾನಿಯವರ ರಾಜೀನಾಮೆ ಕೊಡಿಸಲಿ ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಹರಿಹಾಯ್ದರು.

ಮುಡಾ ಹಗರಣದಲ್ಲಿ ನೈತಿಕತೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂಬ ಬಿಜೆಪಿ ನಾಯಕರ ಆಗ್ರಹಿಸುತ್ತಿರುವ ವಿಚಾರ ಇಂದು ಪ್ರತಿಕ್ರಿಯಿಸಿ ಬಿಕೆ ಹರಿಪ್ರಸಾದ್ ಅವರು ಪ್ರಧಾನಿಯವರ ರಾಜೀನಾಮೆ ಕೊಡಿಸಲಿ ಎಂದು ತಿರುಗೇಟು ನೀಡಿದರು. 'ಸಿದ್ದರಾಮಯ್ಯ ಮತ್ತೊಬ್ಬ ಕೇಜ್ರಿವಾಲ್ ಆಗೋದು ಬೇಡ' ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಚಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಬಂಧನ ಆಗ್ತಾರೆಂದು ಛಲವಾದಿ ನಾರಾಯಣಸ್ವಾಮಿ ಕಾಯುತ್ತಿದ್ದಾರೆ. ಬಂಧನ ಹೊಸದೇನಲ್ಲ. ಬಿಜೆಪಿ ವಿರುದ್ಧ ಇದ್ದವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿದೆ ಎಂದರು.

Tap to resize

Latest Videos

ಮುಡಾ ಹಗರಣ ರಾಜಕಾರಣಕ್ಕಾಗಿ ಕತೆ ಕಟ್ಟಿದ್ದಲ್ಲ: ಸಿದ್ದರಾಮಯ್ಯ ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ: ಆರಗ ಜ್ಞಾನೇಂದ್ರ

ಮುಡಾ ಹಗರಣದಲ್ಲಿ ಒಂದು ವೇಳೆ ಸಿಎಂ ಸಿದ್ದರಾಮಯ್ಯ ಬಂಧನಕ್ಕೊಳಗಾದರೆ ಸಿಎಂ ಆಗಿ ಮುಂದುವರಿಯುತ್ತಾರಾ? ಅಥವಾ ಬೇರೆಯವರು ಸಿಎಂ ಆಗಲಿದ್ದಾರಾ ಎಂಬ ಪ್ರಶ್ನೆಗೆ, 'ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಮುಡಾ ಪ್ರಕರಣ ನಡೆದ ವೇಳೆ ಸಿದ್ದರಾಮಯ್ಯ ಸಿಎಂ ಆಗಿರಲಿಲ್ಲ. ಬಿಜೆಪಿ ಅಧಿಕಾರಾವಧಿಯಲ್ಲಿ ಮುಡಾ ಹಗರಣ ನಡೆದಿರುವುದು. ಬಿಎಸ್‌ವೈ ಸಿಎಂ ಆಗಿದ್ದಾಗ ಲಂಚ ಪಡೆದು ಕೇಸ್‌ನಲ್ಲಿ ಬಂಧನ ಆಗಿತ್ತು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಬರೊಲ್ಲ ಎಂದರು.

click me!