ತುಮಕೂರು 2024 Elections ಜಿಲ್ಲೆಯಲ್ಲಿ ಸಂಜೆ 5 ಗಂಟೆ ವೇಳೆಗೆ 72.10% ಮತದಾನ

By Santosh NaikFirst Published Apr 26, 2024, 12:21 PM IST
Highlights

ತುಮಕೂರಿನಲ್ಲಿ ಮತದಾನದ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಸಂಜೆ 5 ಗಂಟೆ ವೇಳೆಗೆ 72.10% ಮತದಾನ  ಮಧ್ಯಾಹ್ನದ ವೇಳೆ ಶೇ. 50ರಷ್ಟು ಮತದಾನವಾಗಿತ್ತು.

ತುಮಕೂರು (ಏ.26): ಬೆಂಗಳೂರು ಸನಿಹದ ಜಿಲ್ಲೆ ತುಮಕೂರಿನಲ್ಲಿ ಸಂಜೆ 5 ಗಂಟೆ ವೇಳೆಗೆ 72.10% ಮತದಾನವಾಗಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 56.62ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ. 41.91ರಷ್ಟು ಮತದಾನವಾಗಿತ್ತು. ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯ ವೇಳೆಗೆ ಶೇ. 23.32ರಷ್ಟು ಮತದಾನವಾಗಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿಯ ವಿ.ಸೋಮಣ್ಣ ವಿರುದ್ಧ ಕಾಂಗ್ರೆಸ್‌ನ ಎಸ್‌ಪಿ ಮುದ್ದಹನುಮೇಗೌಡ ಸ್ಪರ್ಧೆಯಲ್ಲಿದ್ದಾರೆ. ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದರು, 16.61 ಲಕ್ಷ ಮತದಾರರು ತುಮಕೂರಿನಲ್ಲಿದ್ದಾರೆ. 8.19 ಲಕ್ಷ ಪುರುಷ ಹಾಗೂ 8.42 ಲಕ್ಷ ಮಹಿಳಾ ಮತದಾರರಿದ್ದಾರೆ. 40 ಸಾವಿರ ಮಂದಿ ಹೊಸ ಮತದಾರರು ಈ ಲೋಕಸಭಾ ಕ್ಷೇತ್ರದಲ್ಲಿದ್ದಾರೆ. ಲಿಂಗಾಯತ ಒಕ್ಕಲಿಗ ಪ್ರಾಬಲ್ಯ ಕ್ಷೇತ್ರವಾಗಿರುವ ತುಮಕೂರಿನಲ್ಲಿ ಬಿಜೆಪಿ ವೀರಶೈವ ಸಮುದಾಯದ ವಿ ಸೋಮಣ್ಣಗೆ ಮಣೆ ಹಾಕಿದ್ದರೆ, ಕಾಂಗ್ರೆಸ್‌ ಒಕ್ಕಲಿಗ ಸಮುದಾಯದ ಎಸ್‌ಪಿ ಮುದ್ದಹನುಮೇಗೌಡ ಅವರನ್ನು ಕಣಕ್ಕೆ ಇಳಿಸಿದೆ. ಕ್ಷೇತ್ರದ ಮೇಲೆ ಜಾತಿ ಆಧಾರಿತವಾಗಿ ಹಿಡಿತ ಸಾಧಿಸಲು ಉಭಯ ಪಕ್ಷಗಳು ಹವಣಿಸುತ್ತಿದೆ. ಅಹಿಂದ ಸ್ತ್ರೀ ಶಕ್ತಿ ಈ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ.

ಮತ ಚಲಾಯಿಸಿದ ಕುಣಿಗಲ್ ಶಾಸಕ ಡಾ ರಂಗನಾಥ್.: ಶಾಸಕ ಡಾ ರಂಗನಾಥ್ ಸ್ವಗ್ರಾಮ ಆಲ್ಕೆರೆ ಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪತ್ನಿ  ಜೊತೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಪತ್ನಿ ಡಾ ಸುಮಾ ರಂಗನಾಥ್ ಈ ವೇಳೆ ಜೊತೆಯಲ್ಲಿದ್ದರು. ಸರತಿ ಸಾಲಿನಲ್ಲಿ ನಿಂತು ಅವರು ಮತ ಚಲಾವಣೆ ಮಾಡಿದರು. ಮತಗಟ್ಟೆ ಸಂಖ್ಯೆ 102 ರಲ್ಲಿ ರಂಗನಾಥ್‌ ಮತ ಚಲಾಯಿಸಿದ್ದಾರೆ. ಕುಣಿಗಲ್ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಜೆಸಿ ಮಾಧುಸ್ವಾಮಿ ಮತ ಚಲಾವಣೆ: ಬಿಜೆಪಿಯ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಪತ್ನಿ ತ್ರಿವೇಣಿ ಜೊತೆಯಲ್ಲಿ ಬಂದು ಮತ ಚಲಾವಣೆ ಮಾಡಿದರು. ಸ್ವಗ್ರಾಮ ಜೆಸಿ ಪುರದ ಮತಗಟ್ಟೆಯಲ್ಲಿ ಅವರು ಮತದಾನ ಮಾಡಿದರು. ಮತಗಟ್ಟೆ ಸಂಖ್ಯೆ 252 ರಲ್ಲಿ ಮಾಧುಸ್ವಾಮಿ ತಮ್ಮ ಹಕ್ಕು ಚಲಾಯಿಸಿದರು. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಜೆಸಿ ಪುರ ಗ್ರಾಮವಿದೆ. 'ದೇಶದ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲರು ಮತ ಚಲಾಯಿಸಬೇಕು. ದೇಶದ ಆಡಳಿತ ಚುಕ್ಕಾಣಿಯನ್ನ ಯಾರಯ ಹಿಡಿಯಬೇಕು ಅನ್ನೋದನ್ನ  ಆರಿಸೋದಕ್ಕೆ ಇದೊಂದೇ ಮಾರ್ಗ. ನಾನು ನನ್ನ ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದ್ದೇನೆ. ಎಲ್ಲರು ಮತ ಚಲಾಯಿಸಿ ಅಂತ ನಾನು ಕೇಳಿಕೊಳ್ತಿನಿ' ಎಂದು ಹೇಳಿದರು.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್ 

ತುಮಕೂರಿನಲ್ಲಿ ಉತ್ತಮ ರೀತಿಯಲ್ಲಿ ಮತದಾನ : ಬೆಳಿಗ್ಗೆ 9 ಗಂಟೆಗೆ ಹೊತ್ತಿಗೆ ಶೇ.9.57ರಷ್ಟು ಮತದಾನ. ಗುಬ್ಬಿಯಲ್ಲಿ ಅತೀ ಹೆಚ್ಚು ಅಂದರೆ ಶೇ12.04, ತುಮಕೂರು ಗ್ರಾಮಾಂತರದಲ್ಲಿ ಅತೀ ಕಡಿಮೆ ಅಂದರೆ ಶೇ.8.57 ಮತದಾನವಾಗಿದೆ. ಚಿಕ್ಕನಾಯಕನಹಳ್ಳಿ ಶೇ8.80, ಕೊರಟಗೆರೆ ಶೇ.9.35, ಮಧುಗಿರಿ ಶೇ.8.57, ತಿಪಟೂರು ಶೇ.9.77, ತುಮಕೂರು ನಗರ ಶೇ.10.37, ತುರುವೇಕೆರೆಯಲ್ಲಿ ಶೇ.9.99ರಷ್ಟು ಮತದಾನವಾಗಿದೆ.

ಕರ್ನಾಟಕ Election 2024 Voting 11 ಗಂಟೆಯ ವೇಳೆಗೆ ರಾಜ್ಯದಲ್ಲಿ ಶೇ. 21.34ರಷ್ಟು ಮತದಾನ

click me!