ಸತ್ಯ-ಸುಳ್ಳುಗಳ ನಡುವೆ ಈ ಚುನಾವಣೆ ನಡೆಯುತ್ತಿದೆ. ಭಾವನಾತ್ಮಕ ವಿಷಯಗಳ ಮೇಲೆ ಚುನಾವಣೆ ನಡೆಯೊಲ್ಲ, ಗ್ಯಾರಂಟಿ ಯೋಜನೆ ಮೇಲೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗ (ಮೇ.7): ಸತ್ಯ-ಸುಳ್ಳುಗಳ ನಡುವೆ ಈ ಚುನಾವಣೆ ನಡೆಯುತ್ತಿದೆ. ಭಾವನಾತ್ಮಕ ವಿಷಯಗಳ ಮೇಲೆ ಚುನಾವಣೆ ನಡೆಯೊಲ್ಲ, ಗ್ಯಾರಂಟಿ ಯೋಜನೆ ಮೇಲೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ಸೊರಬ ತಾಲೂಕಿನ ಕುಬಟೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.
ಬಹಳ ಖುಷಿ ಆಗ್ತಿದೆ. ಎಲ್ಲರೂ ಮತದಾನ ಮಾಡಬೇಕು. ಗ್ಯಾರಂಟಿ ಸ್ಕಿಮ್ ಚೆನ್ನಾಗಿ ವರ್ಕೌಟ್ ಆಗಿದೆ. ಆರೂವರೆ ಲಕ್ಷ ಮತದಾರರನ್ನು ಭೇಟಿಯಾಗಿದ್ದೇವೆ. ನಮ್ಮ ಅಭ್ಯರ್ಥಿ ಪರ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹ ಪ್ರಚಾರ ಮಾಡಿದ್ರು. ಈ ಬಾರಿ ಗೀತಾಕ್ಕ ಗೆದ್ದೇ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
undefined
LIVE: Shivamogga Elections 2024: ಶಿವಮೊಗ್ಗದಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ. 11.39ರಷ್ಟು ಮತದಾನ
ವೈಯಕ್ತಿಕ ಟೀಕೆ, ಆರೋಪ ಪ್ರತಿ ಚುನಾವಣೆಯಲ್ಲಿ ಇದ್ದೇ ಇರುತ್ತದೆ. ಆದರೆ ಅದು ಹತೋಟಿಯಲ್ಲಿದ್ದರೆ ಒಳ್ಳೆಯದು. ಈ ಬಾರಿ ನಮ್ಮ ಪರ ವಾತಾವರಣ ಇದೆ. ಜನರು ಬದಲಾವಣೆ ಬಯಸಿದ್ದಾರೆ. ಹೀಗಾಗಿ ಗೀತಾಕ್ಕೆ ಗೆಲುವು ಗ್ಯಾರಂಟಿ ಎಂದರು.
ಇನ್ನು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಇದೆ. ಈ ಪ್ರಕರಣದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ತಗೊಳ್ತದೆ. ಸಂತ್ರಸ್ತರಿಗೆ ನೂರಕ್ಕೆ ನೂರರಷ್ಟು ನ್ಯಾಯ ಕೊಡಿಸುತ್ತೇವೆ. ಸಂತ್ರಸ್ತರಿಗೆ ರಕ್ಷಣೆ ಕೊಡುತ್ತವೆ. ನ್ಯಾಯ ಗೆಲ್ಲುತ್ತದೆ ಎಂದರು.