LIVE: Belagavi Elections 2024: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಹೊಸಬ ಮೃಣಾಲ್ ಹೆಬ್ಬಾಳ್ಕರ್ ಸವಾಲು

By Sathish Kumar KHFirst Published May 7, 2024, 12:05 PM IST
Highlights

ಬೆಳಗಾವಿ ಲೋಕಸಭಾ ಕ್ಷೇತ್ರವು ಪ್ರಭಾವಿ ನಾಯಕರ ಪ್ರತಿಷ್ಠೆಯ ಕಣವಾಗಿದೆ. ರಾಜಕೀಯ ಅನುಭವಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಹೊಸಬ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆಯೊಡ್ಡಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರ ಮತದಾನದ ಲೈವ್ ಅಪ್ಡೇಟ್ಸ್: ಸಂಜೆ 5 ಗಂಟೆ ವೇಳೆಗೆ ಶೇ.65.67 ಮತದಾನ

ಬೆಳಗಾವಿ (ಮೇ 07): ಈ ಲೋಕಸಭಾ  ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಸ್ಪರ್ಧೆ ಮಾಡಿರುವ ಕಾರಣ ರಾಜ್ಯದ ಗಮನ ಸೆಳೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಪಕ್ಷವು ಬೆಳಗಾವಿ ವಶಕ್ಕೆ ಪಡೆದುಕೊಳ್ಳಲು ಸಚಿವ ಲಕ್ಷ್ಮೀ ಹೆಬ್ಬಾಳ್ಳರ್ ಪುತ್ರ ಮೃಣಾಲ ಹೆಬ್ಬಾಳ್ಳರ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಕಾಂಗ್ರೆಸ್‌ -ಬಿಜೆಪಿ ನಡುವೆ ನೇರಾನೇರ ಫೈಟ್ ಏರ್ಪಟ್ಟಿದೆ. ಅಹಿಂದ ವರ್ಗದ ಮತಗಳೇ ನಿರ್ಣಾಯಕ ಆಗಿರುವುದರಿಂದ ಇಬ್ಬರೂ ಅಭ್ಯರ್ಥಿಗಳಿಗೆ ಗೆಲುವು ಕಠಿಣವಾಗಿ ಪರಿಣಮಿಸಿದೆ.

ಬೆಳಗಾವಿ, ಚಿಕ್ಕೋಡಿ ಹಾಗೂ ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿ ಹೊಂದಿರೋ ಜಿಲ್ಲೆಯಾಗಿದೆ. ವಿಧಾನಸಭೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರದಲ್ಲಿ ಮೋದಿ ಗೆಲ್ಲಿಸಬೇಕೆಂದು ಪುನಃ ಬಿಜೆಪಿಗೆ ಬಂದಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಕಣಕ್ಕಿಳಿದಿದ್ದಾರೆ. ಇನ್ನು ಯಾವುದೇ ಅನುಭವ ಇಲ್ಲದ ಮೃಣಾಲ್ ಹೆಬ್ಬಾಳ್ಕರ್ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದು, ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ, ಇಲ್ಲಿ ಸ್ಥಳೀಯ ಮತ್ತು ವಲಸಿಗ ಎಂಬ ಪೈಪೋಟಿ ನಡೆದಿದ್ದು, ಯಾರಿಗೆ ವಿಜಯಮಾಲೆ ಸಿಗಲಿದೆ ಕಾದು ನೊಡಬೇಕಿದೆ. 

India General Elections 2024 Live: ಬೆಳಗ್ಗೆ 11 ಗಂಟೆಗೆ ದೇಶದಲ್ಲಿ ಶೇ.25ರಷ್ಟು ಮತದಾನ ...

ಬೆಳಗಾವಿ ಲೋಕಸಭಾ ಕ್ಷೇತ್ರದ ವಿವರ
ಒಟ್ಟು ಅಭ್ಯರ್ಥಿಗಳು - 13
ಒಟ್ಟು ಮತದಾರರು - 19,23,788
ಪುರುಷ ಮತದಾರರು - 9,57,559
ಮಹಿಳಾ ಮತದಾರರು - 9,66,134
ಇತರೆ: 95

ಮಗು ಎತ್ತಿಕೊಂಡೇ ಚುನಾವಣಾ ಕಾರ್ಯ ನಿರ್ವಹಿಸಿದ ಪೊಲೀಸ್ ಪೇದೆ: ಲೋಕಸಭಾ ಚುನಾವಣೆ ಮತದಾನದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಮಹಿಳಾ ಪೇದೆ ಮಗುವಿನ ಜೊತೆ ಕರ್ತವ್ಯಕ್ಕೆ ಬಂದಿದ್ದಾರೆ. ಮಾಳಮಾರುತಿ ಪೋಲಿಸ್ ಠಾಣೆ ಮಹಿಳಾ ಪೇದೆ, ಬೆಳಗಾವಿ ಗಾಂಧಿನಗರದ ಮತಗಟ್ಟೆ ನಂಬರ 108 ರಲ್ಲಿ ಭದ್ರತೆಗಾಗಿ ಆಗಮಿಸಿದ್ದರು. ಸುಡು ಬಿಸಿಲಿನಲ್ಲಿ ಒಂದೂವರೆ ವರ್ಷದ ಮಗುವಿನ ಜೊತೆ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಮಗು ಬಿಸಿಲಿನ ತಾಪ ತಾಳಲಾರದೇ ಅಳುವುದನ್ನು ಸಮಾಧಾನ ಮಾಡುವುದು ನೋಡಿದರೆ ಒಂದು ಕ್ಷಣ ಮನ ಕರಗುವಂತಿತ್ತು.

ಕಾಂಗ್ರೆಸ್ ಏಜೆಂಟ್ ಮೇಲೆ ಮಾರಣಾಂತಿಕ ಹಲ್ಲೆ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಗಲಾಟೆ ಮಾಡಿಕೊಂಡಿರುವ ಘಟನೆ ಸವದತ್ತಿ ತಾಲೂಕಿನ ಭಂಡಾರಹಳ್ಳಿ ಗ್ರಾಮದ ಬೂತ್ ನಂಬರ್ 88ರಲ್ಲಿ ನಡೆದಿದೆ. ಕಾಂಗ್ರೆಸ್ ಬೂತ್ ಏಜೆಂಟ್ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ, ಈ ಘಟನೆ ಸಂಬಂಧ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿ ಕೇಸ್ ದಾಖಲು ಮಾಡಲಾಗಿದೆ.

click me!