
ಚಿಕ್ಕಬಳ್ಳಾಪುರ (ಏ.26): ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸಂಜೆ 5 ಗಂಟೆ ವೇಳೆಗೆ 70.97% ಮತದಾನವಾಗಿದೆ. ಚುನಾವಣಾ ಆಯೋಗದ ಮಧ್ಯಾಹ್ನ 3 ಗಂಟೆಯ ಅಪ್‌ಡೇಟ್‌ನಲ್ಲಿ ಶೇ. 55.90ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 39.85ರಷ್ಟು ಮತದಾನವಾಗಿತ್ತು. ಬೆಳಗ್ಗೆ 11 ಗಂಟೆಯ ವೇಳೆ ಈ ಲೋಕಸಭಾ ಕ್ಷೇತ್ರದಲ್ಲಿ ಶೇ. 21.92ರಷ್ಟು ಮತದಾನವಾಗಿತ್ತು.. ಬಿಜೆಪಿಯಿಂದ ಮಾಜಿ ಸಚಿವ ಕೆ. ಸುಧಾಕರ್ ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 29 ಅಭ್ಯರ್ಥಿಗಳಿದ್ದಾರೆ. ಒಟ್ಟು 19.81 ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದು, 9.83 ಲಕ್ಷ ಪುರುಷ ಹಾಗೂ 9.97 ಲಕ್ಷ ಮಹಿಳಾ ಮತದಾರರಿದ್ದಾರೆ. 37,446 ಮಂದಿ ಹೊಸ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಈ ಬಾರಿಯೂ ಇಲ್ಲಿ ಗೆಲುವು ಕಾಣುವ ಹಂಬಲದಲ್ಲಿದ್ದಾರೆ. ಒಕ್ಕಲಿಕ, ಎಸ್‌ಸಿಎಸ್‌ಟಿ ಮತದಾರರೇ ಈ ಕ್ಷೇತ್ರದಲ್ಲಿ ನಿಣಾಯಕರಾಗಿದ್ದಾರೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಕಾರಣದಿಂದಾಗಿ ಈ ಕ್ಷೇತ್ರ ಸಖತ್ ಚರ್ಚೆಯಲ್ಲಿದೆ.
ಒಂದೇ ಕುಟುಂಬದ 50ಕ್ಕೂ ಹೆಚ್ಚು ಮಂದಿ ಮತದಾನ: ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜ್ ಬಳಿಯ ಮತಗಟ್ಟೆಯಲ್ಲಿ ಒಂದೇ ಕುಟುಂಬದ 50ಕ್ಕೂ ಹೆಚ್ಚು ಮಂದಿ ಮತದಾನ ಮಾಡಿದ್ದಾರೆ ಚಿಕ್ಕಬಳ್ಳಾಪುರ ನಗರದ ಬಾದಾಮ್ ಕುಟುಂಬದಿಂದ ಮತದಾನವಾಗಿದೆ. ಪ್ರತಿ ಚುನಾವಣೆಗೂ ಎಲ್ಲರು ಒಗ್ಗಟ್ಟಾಗಿ ಬಂದು ಮತದಾನ ಮಾಡುತ್ತಾರೆ.
ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್
ಪ್ರದೀಪ್ ಈಶ್ವರ್ ಮತದಾನ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪತ್ನಿ ಜೊತೆ ಬಂದು ಮತದಾನ ಮಾಡಿದರು. ಸ್ವಗ್ರಾಮ ಪೆರೆಸಂದ್ರ ಗ್ರಾಮದ ಬೂತ್ ನಂಬರ್ 121 ರಲ್ಲಿ ಮತ ಹಕ್ಕು ಚಲಾಯಿಸಿದರು.
LIVE: ತುಮಕೂರು 2024 Elections 11 ಗಂಟೆಯ ವೇಳೆಗೆ ಶೇ.23.32ರಷ್ಟು ಮತದಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.