ಒಕ್ಕಲಿಗರ ಭದ್ರಕೋಟೆ ಬೆಂಗಳೂರು ಉತ್ತರದಲ್ಲಿ ಗೆಲ್ಲೋರಾರು; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕಾಂಗ್ರೆಸ್‌ನಿಂದ ಪ್ರೊಫೆಸರ್ ರಾಜೀವ್‌ಗೌಡ ಸವಾಲೊಡ್ಡಿದ್ದಾರೆ. ಇಲ್ಲಿದೆ ಮತದಾನದ ಅಪ್ಡೇಟ್ಸ್ ವಿವರ..
ಬೆಂಗಳೂರು ಉತ್ತರ (ಏ.26): ಒಕ್ಕಲಿಗರ ಭದ್ರಕೋಟೆ ಬೆಂಗಳೂರು ಉತ್ತರದಲ್ಲಿ ಗೆಲ್ಲೋರಾರು; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕಾಂಗ್ರೆಸ್‌ನಿಂದ ಪ್ರೊಫೆಸರ್ ರಾಜೀವ್‌ಗೌಡ ಸವಾಲೊಡ್ಡಿದ್ದಾರೆ. ಇಲ್ಲಿದೆ ಮತದಾನದ ಅಪ್ಡೇಟ್ಸ್ ವಿವರ..
ಬೆಂಗಳೂರಿನಲ್ಲಿ ಒಕ್ಕಲಿಗರ ಭದ್ರಕೋಟೆ ಆಗಿರುವ ಬೆಂಗಳುರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧಿಸುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಕೇಂದ್ರ ಸಚಿವೆ ಆಗಿದ್ದರು. ಆದರೆ, ಇಲ್ಲಿ ಗೋ ಬ್ಯಾಕ್ ಅಭಿಯಾನ ನಡೆದಿದ್ದರಿಂದ ಬೆಂಗಳೂರು ಉತ್ತರಕ್ಕೆ ವಲಸೆ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಎರಡು ಬಾರಿ ವಿಜೇತರಾಗಿದ್ದ ಡಿ.ವಿ. ಸದಾನಂದಗೌಡ ಬಾರಿಯೂ ಕೇಂದ್ರ ಸಚಿವರೂ ಆಗಿದ್ದರು. ಆದರೆ, ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ.
Breaking: ಮತದಾನ ಮಾಡಿ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು: ಬೆಂಗಳೂರು ಮಹಿಳೆಗೆ ಹೃದಯ ಸ್ತಂಭನ
ಇನ್ನು ಇದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಶೋಭಾ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವೆಯೂ ಆಗಿದ್ದರು. ಹೀಗಾಗಿ ಈ ಲೋಕಸಭೆ ಕ್ಷೇತ್ರ ಅವರಿಗೆ ಪರಿಚಿತವೂ ಆಗಿದೆ. ಇನ್ನು ಕಾಂಗ್ರೆಸ್‌ನಿಂದ ಪ್ರಭಲ ಪೈಪೋಟಿ ನೀಡಲು ಪ್ರೊ.ಎಂ.ವಿ. ರಾಜೀವ್‌ಗೌಡ ಕಣದಲ್ಲಿದ್ದಾರೆ. ಇವರು ಸ್ಥಳೀಯ ಒಕ್ಕಲಿಗ ಎಂದು ಪ್ರಚಾರ ಮಾಡಿದ್ದು, ಇವರ ಬೆಂಬಲಕ್ಕೆ ತೆರೆ ಮರೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕೂಡ ನಿಂತಿದ್ದಾರೆ ಎಂದು ಕೇಳಿಬಂದಿದೆ.
ನಾನು ನನಗಲ್ಲ ಮೋದಿ ಅವರಿಗೆ ಮತ ಹಾಕಿದ್ದೇನೆ: ನಾನು ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದೇನೆ. ನಾನು ಕೂಡ ಮೋದಿ ಅವ್ರಿಗೆ ಮತ ಹಾಕಿದ್ದೇನೆ. ದೇಶದ ಪ್ರಾಮಾಣಿಕ ವ್ಯಕ್ತಿ, ತನ್ನ 23 ವರ್ಷದ ಆಡಳಿತದಲ್ಲಿ ಕಪ್ಪು ಚುಕ್ಕೆ ಇಲ್ದೇ ಕೆಲಸ ಮಾಡಿದ್ದಾರೆ. 12 ವರ್ಷಗಳ ಸಿಎಂ ಆಗಿ, 10 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ. ದಿನಕ್ಕೆ 12 ಗಂಟೆಯ ಭ್ರಷ್ಟಾಚಾರ ವಿರುದ್ಧ ಕೆಲಸ ಮಾಡಿದ್ದಾರೆ. ಅವ್ರ ಜೊತೆ ಕೆಲಸ ಮಾಡೋ ಸೌಭಾಗ್ಯ ನಮಗೂ ಸಿಕ್ಕಿದೆ. ಬೆಂಗಳೂರು ಉತ್ತರದಲ್ಲಿ ವಾತಾವರಣ ತುಂಬಾ ಚೆನ್ನಾಗಿದೆ. ಬೆಳಗ್ಗೆನಿಂದ ಜನ ಕ್ಯೂನಲ್ಲಿ ನಿಂತು ಮತ ಹಾಕ್ತ ಇದ್ದಾರೆ. ಮತದಾರರಲ್ಲಿ ವಿನಂತಿ ಪ್ರಜಾಪ್ರಭುತ್ವ ಹಬ್ಬದಲ್ಲಿ ನಾವೆಲ್ಲಾ ಭಾಗಿಯಾಗಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Breaking: ಚಿತ್ರದುರ್ಗದ ಮತಗಟ್ಟೆಯಲ್ಲೇ ಸಾವನ್ನಪ್ಪಿದ ಚುನಾವಣಾ ಸಿಬ್ಬಂದಿ
ಬೆಂಗಳೂರು ಉತ್ತರದಲ್ಲಿ ಮತದಾನದ ವಿವರ:
ಒಟ್ಟು ಅಭ್ಯರ್ಥಿಗಳು : 21
ಮತದಾರರ ವಿವರ: 32,15,261
ಮಧ್ಯಾಹ್ನ 3 ಗಂಟೆವೆರೆಗೆ ಮತದಾನ ವಿವರ: ಶೇ.41.12