Basavaraj Bommai: 2 ತಿಂಗ್ಳಲ್ಲಿ ಬಸವರಾಜ ಬೊಮ್ಮಾಯಿಗೆ 3 ಶಾಕ್

By Suvarna NewsFirst Published Dec 30, 2021, 12:44 PM IST
Highlights

* ನಾಯಕತ್ವ ಬದಲಾವಣೆ ಸುದ್ದಿ ಮಧ್ಯೆ ಬಸವರಾಜ ಬೊಮ್ಮಾಯಿಗೆ ಆಘಾತ
* ಸಿಎಂ ಕುರ್ಚಿ ಮೇಲೆ ಕುಳಿತಾಗಿನಿಂದ ಬೊಮ್ಮಾಯಿಗೆ ಶಾಕ್ ಮೇಲೆ ಶಾಕ್
* 2 ತಿಂಗ್ಳಲ್ಲಿ ಬಸವರಾಜ ಬೊಮ್ಮಾಯಿಗೆ 3 ಶಾಕ್

ಬೆಂಗಳೂರು, (ಡಿ.30): ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಶಾಕ್ ಮೇಲೆ ಶಾಕ್.

ಹೌದು..ಎರಡು ತಿಂಗಳಲ್ಲಿ ಬಸವರಾಜ ಬೊಮ್ಮಾಯಿಗೆ ಮೂರು ಆಘಾತಗಳಾಗಿವೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಕೂತ ಬಳಿಕ ಮೊದಲ ಪರೀಕ್ಷೆಗೆ ಇಳಿದಿದ್ದ ಬೊಮ್ಮಾಯಿ, ತವರು ಜಿಲ್ಲೆಯಲ್ಲಿರು ಬರುವ ಹಾನಗಲ್‌ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಮುಗ್ಗರಿಸಿತು. ಇದೀಗ ಮತ್ತೆರೆಡು ಬೊಮ್ಮಾಯಿಗೆ ಕಾಡಿವೆ.  ಈ ಮೂರು ಅಂಶಗಳು ಮಂದಿನ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಪಾಲಿಗೆ ದುಸ್ವಪ್ನವಾದರೂ ಅಚ್ಚರಿ ಪಡಬೇಕಿಲ್ಲ. ಏನದು ಎರಡು ತಿಂಗಳಲ್ಲಿ3 ಶಾಕಿಂಗ್ ಎನ್ನುವುದು ಈ ಕೆಳಗಿನಂತಿವೆ ನೋಡಿ

BJP Meeting: ಬಿಜೆಪಿ ಕಾರ್ಯಕಾರಣಿ ಸಭೆ ಮಾಹಿತಿ ಬಿಚ್ಚಿಟ್ಟ ಯತ್ನಾಳ್, ಬೊಮ್ಮಾಯಿ ಸೇಫ್...!

ಶಾಕಿಂಗ್ ನಂಬರ್ 1: ಹಾನಗಲ್ ಬೈ ಎಲೆಕ್ಷನ್ ಸೋಲು
ಯೆಸ್...ಮುಖ್ಯಮಂತ್ರಿ ಗಾದಿ ಏರಿದ ಬಳಿಕ ಬಸವರಾಜ ಬೊಮ್ಮಾಯಿ ಅವರಿಗೆ ತವರಿನಲ್ಲೇ ಮುಖಭಂಗವಾಗಿದೆ. ಇತ್ತೀಗೆ ನಡೆದ ಹಾನಗಲ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ ಭರ್ಜರಿ ಜಯಗಳಿಸಿದ್ದರು. ತಮ್ಮ ಶಿಗ್ಗಾಂವಿ ಕ್ಷೇತ್ರದಿಂದ ಕೆಲವೇ ಅಂತರದ ದೂರದಲ್ಲಿರುವ ಹಾನಗಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಅವರನ್ನ ಗೆಲ್ಲಿಸಿಕೊಂಡು ಬರುವಲ್ಲಿ ಬೊಮ್ಮಾಯಿ ವಿಫಲರಾಗಿದ್ದು, ಇದು ಸಿಎಂಗೆ ಮೊದಲ ಆಘಾತ ನೀಡಿದೆ. ಈ ಬೈ ಎಲೆಕ್ಷನ್‌ ಮುಗಿಯುತ್ತಿದ್ದಂತೆಯೇ ಬೊಮ್ಮಾಯಿ ಬದಲಾವಣೆ ಕೂಗು ಎದ್ದಿದೆ. ತವರು ಜಿಲ್ಲೆಯಲ್ಲೇ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರಲಾಗಲಿಲ್ಲ, ಇನ್ನೂ ಮುಂದೆ ಇವರ ನೇತೃತ್ವದ ಹೇಗೆ ಚುನಾವಣೆ ಮಾಡುವುದು ಎನ್ನುವ ಮಾತುಗಳು ಸಹ ಬಿಜೆಪಿ ವಲಯದಲ್ಲಿ ಕೇಳಿಬಂದಿದ್ದವು.

ಶಾಕಿಂಗ್ ನಂಬರ್ 2- ವಿಧಾನ ಪರಿಷತ್ ಎಲೆಕ್ಷನ್
25 ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್​ ಚುನಾವಣೆಯಲ್ಲಿ11 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ(BJP) ವಿಧಾನ ಪರಿಷತ್ತಿನಲ್ಲಿ ಬಹುಮತ ಪಡೆದುಕೊಂಡಿದ್ದು,.ಆಡಳಿತಾರೂಢ ಬಿಜೆಪಿಗೆ ಸಮಬಲ ಹೋರಾಟ ನೀಡಿದ ಕಾಂಗ್ರೆಸ್‌(Congress) 11ರಲ್ಲಿ ಗೆಲುವು ಸಾಧಿಸಿದೆ. ಇನ್ನು ಜೆಡಿಎಸ್(JDS) 2 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ಸರ್ಕಾರ ಇಟ್ಟುಕೊಂಡು ವಿರೋಧ ಪಕ್ಷ ಕಾಂಗ್ರೆಸ್‌ಗಿಂತ ಹೆಚ್ಚು  ಗೆಲ್ಲುವಲ್ಲಿ ವಿಫಲವಾಗಿದೆ. ಅದರಲ್ಲೂ ಬೆಳಗಾವಿಯಲ್ಲಿ ಬಿಜೆಪಿ ಸರಳವಾಗಿ ಗೆಲ್ಲಬಹುದಾಗಿತ್ತು. ಆದ್ರೆ, ತಮ್ಮದೇ ಪಕ್ಷದ ಶಾಸಕರನ್ನ ನಿರ್ಲಕ್ಷ್ಯ ಮಾಡಿದ್ದರಿಂದ ಅಲ್ಲಿ ಹಿರಿಯ ನಾಯಕ ಮಹಾಂತೇಶ್ ಕವಟಗಿಮಠ ಅವರನ್ನ ಕಳೆದುಕೊಳ್ಳಬೇಕಾಯ್ತು. ಒಂದು ವೇಳೆ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿಗೆ ಕರೆದು ನಿಮ್ಮ ಸಹೋದರನನ್ನು ಚುನಾವಣೆಗೆ ನಿಲ್ಲಿಸುವುದು ಬೇಡ. ನಿಂತರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸವುಲ್ಲಿ ಸಹ ಬೊಮ್ಮಾಯಿ ಹಿಂಜರಿದರು. ಅದು ಸಹ ಸಿಎಂಗೆ ಮುಳುವಾಯ್ತು.

ಶಾಕಿಂಗ್ ನಂಬರ್ 3- ಸ್ಥಳೀಯ ಸಂಸ್ಥೆ ಚುನಾವಣೆ ರಿಸಲ್ಟ್
ಮೇಲಿನ ಎರಡು ಶಾಕಿಂಗ್ ಅಂಶಗಳನ್ನ ನೋಡಿದ್ದಾಯ್ತು. ಇದೀಗ ಮೂರಲೇ ಶಾಕಿಂಗ್ ಅಂದ್ರೆ, ಇಂದು (ಡಿ.30) ಪ್ರಕಟಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಅದರಲ್ಲೂ ಪ್ರಮುಖವಾಗಿ ತಮ್ಮದೇ ಶಿಗ್ಗಾಂವಿ ಕ್ಷೇತ್ರಕ್ಕೆ ಒಳಪಡುವ ಬಂಕಾಪುರ ಪುರಸಭೆ ಹಾಗೂ ಗುತ್ತಲ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಹೋಗಿದ್ದು, ಬಸವರಾಜ ಬೊಮ್ಮಾಯಿ ಭಾರಿ ಮುಖಭಂಗವಾಗಿದೆ. 

ಬಂಕಾಪುರ ಪುರಸಭೆಯಲ್ಲಿ ಒಟ್ಟು23  ಸ್ಥಾನಗಳಿದ್ದು, ಈ ಪೈಕಿ ಕಾಂಗ್ರೆಸ್ -14, ಬಿಜೆಪಿ -7, ಪಕ್ಷೇತರ -2 ಸ್ಥಾನ ಪಡೆದಿದೆ. ಹಾಗೂ ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್ ‌-11, ಬಿಜೆಪಿ -6, ಪಕ್ಷೇತರ -1 ಸ್ಥಾನ ಲಭಿಸಿದೆ.

ಎಂಎಲ್ಸಿ ಚುನಾವಣೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಇದು ಅಗ್ನಿಪರೀಕ್ಷೆಯಾಗಿತ್ತು. ನಗರ ಸಂಸ್ಥೆಗಳಾದ್ದರಿಂದ ಬಿಜೆಪಿಯ ಶಕ್ತಿ ಪರೀಕ್ಷೆಯೂ ಆಗಿತ್ತು. ಆದ್ರೆ, ಬಿಜೆಪಿ ಸಿಎಂ ತವರಿಲ್ಲೇ ಶಕ್ತಿ ಕಳೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಮಂದಿನ ದಿನಗಳಲ್ಲಿ ಬಸವರಾಜ ಬೊಮ್ಮಾಯಿಗೆ ಈ ಫಲಿತಾಂಶ ಬೊಮ್ಮಾಯಿ ಪಾಲಿಗೆ ದುಸ್ವಪ್ನವಾದರೂ ಅಚ್ಚರಿ ಪಡಬೇಕಿಲ್ಲ.
 

click me!