
ಬೆಂಗಳೂರು(ಜೂ.04) ಕೊರೋನಾ ಅಟ್ಟಹಾಸ ಮುಂದುವರಿದಿದ್ದರೂ ರಾಜಕೀಯ ಸುದ್ದಿಗಳಿಗೂ ಬರ ಇಲ್ಲ. ವಿಧಾನಪರಿಷತ್ ಚುನಾವಣಾ ಅಖಾಡ. ರಂಗೇರಿದೆ.
ಪರಿಷತ್ ಸದಸ್ಯರಾಗಲು ಕಾಂಗ್ರೆಸ್ ನಲ್ಲಿ ಆರಂಭಗೊಂಡ ಟ್ರೈ ಆಂಗಲ್ ಫೈಟ್ ಶುರುವಾಗಿದೆ. ಇರುವ ಎರಡು ಸ್ಥಾನಗಳಿಗೆ ಬಾರಿ ಲಾಬಿ ಶುರುವಾಗಿದೆ. ತಮ್ಮ ಬೆಂಬಲಿಗರಿಗೆ ಸ್ಥಾನ ಕಲ್ಪಿಸಿಕೊಡಲು ಅಗ್ರ ನಾಯಕರು ಸರ್ಕಸ್ ಆರಂಭಿಸಿದ್ದಾರೆ.
ಪರಿಷತ್ ಅಧಿಸೂಚನೆ ಪ್ರಕಟಣೆ ಮಾಡುವುದಕ್ಕೂ ಮೊದಲು ನಾಯಕರಲ್ಲಿ ಫೈಟ್ ಶುರುವಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ತಮ್ಮ ಬೆಂಬಲಿಗರಿಗೆ ಸ್ಥಾನ ನೀಡಲು ಹಸರಸಾಹಸ ಮಾಡುತ್ತಿದ್ದಾರೆ.
ಸಿದ್ಧಾರ್ಥ್ ಮಗನ ಜತೆ ಡಿಕೆಶಿ ಪುತ್ರಿ ವಿವಾಹ? ಏನ್ ಕತೆ
ಐವಾನ್ ಡಿಸೋಜ, ಎಚ್ ಎಂ ರೇವಣ್ಣ, ಮಾಜಿ ಮೇಯರ್ ರಾಮಚಂದ್ರಪ್ಪ, ನಾಸೀರ್ ಹುಸೇನ್ ಪರ ಸಿದ್ದರಾಮಯ್ಯ ಲಾಬಿ ಮಾಡುತ್ತಿದ್ದರೆ, ವಿಆರ್ ಸುದರ್ಶನ್, ಭಾರತಿ ಶಂಕರ್, ರಾಣಿ ಸತೀಶ್, ಬಿ.ಎ.ಹಸನಬ್ಬ ಪರ ಡಿಕೆಶಿ ಮಾತನಾಡುತ್ತಿದ್ದಾರೆ.
ನಿವೇದಿತ್ ಆಳ್ವಾ, ಶಾಫಿವುಲ್ಲಾ, ಬೋಸರಾಜು, ವೇಣುಗೋಪಾಲ್, ನಾಗರಾಜ್ ಯಾದವ್ ಪರಮೇಶ್ವರನ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ತಮ್ಮ ಬೆಂಬಲಿಗರಿಗೆ ಕೊಡಿಸಿ, ಹೈಕಮಾಂಡ್ ಬಳಿ ಮತ್ತಷ್ಟು ಸ್ಟ್ರಾಂಗ್ ಆಗಲು ಮೂರು ನಾಯಕರು ಕಸರತ್ತು ಮಾಡುತ್ತಿದ್ದಾರೆ.
ಡಿಕೆಶಿ ಸಿದ್ದು ನಡುವೆ ನೇರಾನೇರ ಫೈಟ್ ಇದ್ದು ಶುಕ್ರವಾರ ನಡೆಯುವ ಸಭೆಯಲ್ಲಿ ಸ್ಪಷ್ಟ ಚಿತ್ರಣ ಹೊರಬಿಳುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.