ಬಿಜೆಪಿ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ: ಸಿದ್ದರಾಮಯ್ಯ ಬಿಟ್ರು ಬ್ರಹ್ಮಾಸ್ತ್ರ

Published : Dec 16, 2020, 05:08 PM ISTUpdated : Dec 16, 2020, 05:15 PM IST
ಬಿಜೆಪಿ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ: ಸಿದ್ದರಾಮಯ್ಯ ಬಿಟ್ರು ಬ್ರಹ್ಮಾಸ್ತ್ರ

ಸಾರಾಂಶ

ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ವಿಚಾರವಾಗಿ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, (ಡಿ.16): ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ವಿಚಾರವಾಗಿ ಬಿಜೆಪಿ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ ಉಪಯೋಗಿಸಲು ಮುಂದಾಗಿದೆ.

ಬಿಜೆಪಿಯವರು ಏನು ಮಾಡ್ತಾರೋ ಅದನ್ನೇ ನಾವೂ ಮಾಡುತ್ತೇವೆ. ಅವರು ಕಾನೂನು ಹೋರಾಟ ಮಾಡಿದರೇ, ನಾವೂ ಕಾನೂನು ಹೋರಾಟಕ್ಕೆ ಸಿದ್ಧ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಹೇಳಿದ್ದಾರೆ.

ಸಭಾಪತಿ ಬರಬಾರದೆಂದು ಬಾಗಿಲು ಹಾಕಿದ್ದು ಗುಂಡಾಗಿರಿ ಅಲ್ವಾ.? ಬಿಜೆಪಿಗೆ ಸಿದ್ದು ಗುದ್ದು..!

ಬಿಜೆಪಿಯವರು ಯಾವ ಅಸ್ತ್ರ ಪ್ರಯೋಗಿಸುತ್ತಾರೋ ಕಾದು ನೋಡಿ ಅದಕ್ಕೆ ಪ್ರತ್ಯಸ್ತ್ರ ಪ್ರಯೋಗಿಸುತ್ತೇವೆ. ಪರಿಷತ್​ನಲ್ಲಿ ನಡೆದ ರಾದ್ಧಾಂತದ ಹಿನ್ನೆಲೆಯಲ್ಲಿ ಮುಂದಿನ ಹೋರಾಟ ಏನಿದ್ದರೂ ಬಿಜೆಪಿ ನಡೆ ಆಧರಿಸಿ ತೀರ್ಮಾನ ಎಂಬ ಸಂದೇಶ ಸಿದ್ದರಾಮಯ್ಯ ರವಾನಿಸಿದರು. ಆ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಹೆಜ್ಜೆ ಮುಂದಿಡುವವರೆಗೂ ಕಾದು ನೋಡುವ ತಂತ್ರಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ.

ಸದನದದೊಳಗೆ ನಡೆಯುವ ವಿದ್ಯಮಾನಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮಾಡುವಂತಿಲ್ಲ. ಬದಲಾಗಿ ಸದನದಲ್ಲಿ ಕೈಗೊಂಡ ನಿರ್ಣಯಗಳಿಗೆ ಮಾತ್ರ ಅಂತಿಮ ಮುದ್ರೆ ಒತ್ತುವ ಅಧಿಕಾರ ರಾಜ್ಯಪಾಲರಿಗೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಕಷ್ಟಸಾಧ್ಯ. ಹೀಗಾಗಿ ಬಿಜೆಪಿ ಕಾನೂನು ಹೋರಾಟದತ್ತ ಚಿಂತನೆ ನಡೆಸಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಬಳಿ ಇರುವ ವಿಧಾನಪರಿಷತ್ ಸಬಾಪತಿ ಸ್ಥಾನವನ್ನು ಇತ್ತುಕೊಳ್ಳಲು ಬಿಜೆಪಿ ನಾನಾ ಕಸರತ್ತು ನಡೆಸಿದ್ದು, ಇದು ಮುಂದೆ ಏನಾಗಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ