ಜೆಡಿಎಸ್‌-ಬಿಜೆಪಿ ಮೈತ್ರಿಗೆ ಶಾಸಕ ಎಸ್‌.ಟಿ. ಸೋಮಶೇಖರ್ ಅಸಮಾಧಾನ: ಮೊದಲ ವಿಕೆಟ್‌ ಪತನ ಫಿಕ್ಸ್‌!

By Sathish Kumar KHFirst Published Oct 5, 2023, 1:42 PM IST
Highlights

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್‌-ಬಿಜೆಪಿ ಮೈತ್ರಿ ಬಗ್ಗೆ ಮೊದಲ ಬಾರಿಗೆ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್ ಅಸಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಅ.05): ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್‌ ಬಿಜೆಪಿ ಮೈತ್ರಿ ಬಗ್ಗೆ ಮೊದಲ ಬಾರಿಗೆ ಬಿಜೆಪಿ ಶಾಸಕರಿಂದ ಅಸಾಧಾನ ವ್ಯಕ್ತವಾಗಿತ್ತಿದೆ. ಕಳೆದ 20 ವರ್ಷಗಳಿಂದ ಅವರಿಗೆ ವಿರೋಧವಾಗಿ ಕೆಲಸ ಮಾಡುತ್ತಾ ಬಂದಿರುವ ನಮಗೆ ಮೈತ್ರಿಯಿಂದ ಅಸಮಾಧಾನ ಉಂಟಾಗಿದ್ದು, ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಎಸ್.ಟಿ. ಸೋಮಶೇಖರ್‌ ಹೇಳಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ವಯಕ್ತಿಕವಾಗಿ 20 ವರ್ಷದಿಂದ ಸೆಣಸಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ನೋಡಿದ್ದೇನೆ. ಕಾಂಗ್ರೆಸ್‌ಗೆ ಜೆಡಿಎಸ್‌ ಮೊದಲಿನಿಂದಲೂ ವಿರೋಧ ಇದೆ. ಯಾವತ್ತೂ ಕೂಡ ನಮ್ಮ ಹಾಗೂ ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ. ಮಾನಸಿಕ ಕಿರುಕುಳ ಹತ್ತಿರದಿಂದ‌ ನೋಡಿದ್ದೇನೆ. ಮೈತ್ರಿ ವಿಚಾರ ನನಗೂ ವಯಕ್ತಿಕವಾಗಿ ಅಸಮಾಧಾನ ಇದೆ. ವಯಕ್ತಿಕ ವಾಗಿ ಮೈತ್ರಿ ಬಗ್ಗೆ ವಿರೋಧ ಇದೆ. ಮಾನಸಿಕವಾಗಿ ಕಿರಿಕುಳ‌ ಇದೆ ಎಂದು ಹೇಳಿದ್ದಾರೆ.

Latest Videos

ಸಾಲು ಮರದ ತಿಮ್ಮಕ್ಕ ಆರೋಗ್ಯವಾಗಿದ್ದಾರೆ, ಊಹಾಪೋಹಗಳಿಗೆ ತೆರೆ ಎಳೆದ ದತ್ತುಪುತ್ರ ಉಮೇಶ್‌!

ಪಕ್ಷದಲ್ಲಿ ಯಾರನ್ನೂ ಕರೆದು ಮಾತನಾಡಿಲ್ಲ: ಇನ್ನು ಮೈತ್ರಿ ಅಧಿಕೃತವಾಗಿ ಘೋಷಣೆಯಾದ ಬಳಿಕ ಪಕ್ಷ ಬಿಡುವ ಬಗ್ಗೆ ನಿರ್ಧಾರ ಮಾಡ್ತೀನಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಅವರು ಇವರಿಗೆ ಮತ ಹಾಕಲಿಲ್ಲ, ಇವರು ಅವರಿಗೆ ಮತ ಹಾಕಲಿಲ್ಲ. ಯಾರೂ ಕೂಡ ಈ ಬಗ್ಗೆ ವಯಕ್ತಿಕವಾಗಿ ಮಾತನಾಡ್ತಿಲ್ಲ. ಆದ್ರೆ ಎಲ್ಲರಿಗೂ ಅಸಮಾಧಾನ ಅಂತೂ ಇದೆ. ನಮ್ಮ ಪಕ್ಷದಲ್ಲಿ ಯಾರನ್ನೂ ಕರೆದು ಚರ್ಚೆ ಮಾಡಿಲ್ಲ. ಬೆಂಬಲಿಗರು ಬಿಜೆಪಿ ಬಿಡುವ ವಿಚಾರ ನನ್ನ ಕ್ಷೇತ್ರ ಅಷ್ಟೇ ಅಲ್ಲ, ಅಶೋಕ್, ಮುನಿರತ್ನ, ದಾಸರಹಳ್ಳಿ ಕ್ಷೇತ್ರಗಳಲ್ಲಿ ಹೋಗಿದ್ದಾರೆ ಎಂದರು.

ನಾನು ಈಗಲೂ ಶೇ.100 ಬಿಜೆಪಿಯಲ್ಲಿ ಇದ್ದೀನಿ ಎಲ್ಲಿಯೂ ಹೋಗಿಲ್ಲ. ಆದ್ರೆ ಮೈತ್ರಿ ಬಳಿಕ ಯೋಚನೆ ಮಾಡಬೇಕಿದೆ. 6 ಬಾರಿ ಜೆಡಿಎಸ್‌ ಜೊತೆ ಹೊಡೆದಾಡಿಕೊಂಡು ಬಂದಿದ್ದೇವೆ. ಜೆಡಿಎಸ್ ಜೊತೆ ಮೈತ್ರಿ ವಿಚಾರ ಯಾರಿಗೂ ಆಗಲ್ಲ ಅಂತ ಕಾಂಗ್ರೆಸ್ ಸೇರ್ತಿದ್ದಾರೆ. ಜೆಡಿಎಸ್ ಅಧ್ಯಕ್ಷರು ಕೂಡ ಯಾರೂ 4 ಜನಕೂತು ಮಾತಾಡಿದ್ರೆ ಆಗುವುದಿಲ್ಲವೆಂದು ಹೇಳಿದ್ದಾರೆ. ಅದೇ ರೀತಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನನ್ನ ಬಳಿ ಕೆಲವರು ಹೇಳಿದ್ದಾರೆ ಎಂದು ತಿಳಿಸಿದರು.

ಕೆಳಮಟ್ಟದ ಕಾರ್ಯಕರ್ತರಿಗೆ ಹಿಂಸೆಯಾಗಲಿದೆ:  ಕಾಂಗ್ರೆಸ್ ಗೆ ಯಾರು ಹೋಗ್ತಾರೆ ಅನ್ನೋ ವಿಚಾರಕ್ಕೆ ಭಯ ಪಡುವ ಅವಶ್ಯಕತೆ ಏನಿಲ್ಲ. ಹೋಗಿರುವವರು ಕಾಂಗ್ರೆಸ್ ಟಿಕೆಟ್‌ಗೆ ಮತ್ತೊಂದಕ್ಕೆ ಅನುಕೂಲ ಆಗಲಿ ಅಂತ ಹೋಗಿದ್ದಾರೆ. ನಮಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣ ಆಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಆಗಿತ್ತು. ಹೊರಗಡೆ ಬಂದ ಉದ್ದೇಶ ಏನು.? ಎಂಪಿ ಚುನಾವಣೆಗೆ ಮೈತ್ರಿ ಆದ ಉದ್ದೇಶ ಏನು.? ರಾಹುಲ್ ಗಾಂಧಿ ಮತ್ತು ದೇವೇಗೌಡರ ನೇತೃತ್ವದಲ್ಲಿ ಚುನಾವಣೆ ಮಾಡಿದ್ದರು. ಮೇಲಿನ ಹಂತದವರು ನಾವು ಒಂದಾಗಬಹುದು. ಆದ್ರೆ ಕೆಳಮಟ್ಟದ ಕಾರ್ಯಕರ್ತರಿಗೆ ಹಿಂಸೆಯಾಗಿದೆ ಎಂದರು.

ಬಿಜೆಪಿ ಅವಧಿಯ ಕೇಸು ರದ್ದತಿ ಅಂಕಿ ಬಿಚ್ಚಿಡಲೆ?: ಗೃಹ ಸಚಿವ ಪರಮೇಶ್ವರ್‌ ಗರಂ

ಸಮ್ಮಿಶ್ರವಾದರೆ ಸಹಮತವಿಲ್ಲ: ನಾವು ಲೀಡರ್‌ಗಳನ್ನ, ಕಾರ್ಯಕರ್ತರನ್ನ ಎದುರಿಗೆ ಹಾಕಿಕೊಂಡು,ವಿರೋಧ ಕಟ್ಟಿಕೊಂಡು ರಾಜಕಾರಣದಲ್ಲಿ ಎಂಎಲ್‌ಎ ಆಗಲು ಆಗಲ್ಲ. ಅವರಿಗೆ ಏನು ಗೌರವ ಕೊಡಬೇಕು, ಕೊಡ್ತಿದ್ದೇವೆ. ನನಗೆ ಹೈಕಮಾಂಡ್ ಅಂದ್ರೆ ಯಡಿಯೂರಪ್ಪ ಮಾತ್ರ. ಯಡಿಯೂರಪ್ಪ ನಾನು ಹೇಳುವವರೆಗೂ ಏನೂ ಮಾಡಬೇಡಿ ಅಂತ ಹೇಳಿದ್ದಾರೆ. ಅದಕ್ಕೆ ನಾನೆಲ್ಲೂ ಒಂದು ತಿಂಗಳಿಂದ ಏನು ಮಾತನಾಡಿಲ್ಲ. ಅವರು ಏನೋ ಹೇಳಿದ್ದಾರೆ, ಹಾಗಾಗಿ ಅಲ್ಲಿಯವರೆಗೂ ಮಾತನಾಡಲ್ಲ. ಯಾವುದೂ ನಿರ್ಧಾರ ತೆಗೆದುಕೊಳ್ಳಲ್ಲ. ಪೇಪರಲ್ಲಿ ಬಂದಂಗೆ ಸಮ್ಮಿಶ್ರ ಆಗಲಿದೆ ಅಂದ್ರೆ ವಯಕ್ತಿಕವಾಗಿ ಸಹಮತ ಇಲ್ಲ ಎಂದು ಖಡಕ್‌ ಆಗಿ ಹೇಳಿದರು.

click me!