ಒಂದು ಕಡೆ ಕಾಂಗ್ರೆಸ್ ಸರ್ಕಾರದಲ್ಲಿ ವೀರಶೈವ ಲಿಂಗಾಯಿತರನ್ನು ಕಡೆಗಣನೆ ಮಾಡಲಾಗುತ್ತದೆ ಎನ್ನುವ ಕೂಗು ಕೇಳಿ ಬರುತ್ತಿರೋ ಬೆನ್ನಲ್ಲೇ.. ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರ್ಪಡೆಯಾದ ಆ ಮಹಿಳಾ ವೀರಶೈವ ಲಿಂಗಾಯಿತ ಶಾಸಕಿ ನಾನು ಕಾಂಗ್ರೆಸ್ ಸೇರಿಲ್ಲ.
ವರದಿ: ನರಸಿಂಹ ಮೂರ್ತಿ, ಬಳ್ಳಾರಿ
ಬಳ್ಳಾರಿ/ ವಿಜಯನಗರ (ಅ.05): ಒಂದು ಕಡೆ ಕಾಂಗ್ರೆಸ್ ಸರ್ಕಾರದಲ್ಲಿ ವೀರಶೈವ ಲಿಂಗಾಯಿತರನ್ನು ಕಡೆಗಣನೆ ಮಾಡಲಾಗುತ್ತದೆ ಎನ್ನುವ ಕೂಗು ಕೇಳಿ ಬರುತ್ತಿರೋ ಬೆನ್ನಲ್ಲೇ.. ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರ್ಪಡೆಯಾದ ಆ ಮಹಿಳಾ ವೀರಶೈವ ಲಿಂಗಾಯಿತ ಶಾಸಕಿ ನಾನು ಕಾಂಗ್ರೆಸ್ ಸೇರಿಲ್ಲ. ಕೇವಲ ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ ಎನ್ನುತ್ತಿದ್ದಾರೆ. ನಾನು ಪಕ್ಷೇತರಳು ಯಾರು ಸರ್ಕಾರ ರಚನೆ ಮಾಡಿದ್ರು ಅವರಿಗೆ ನಮ್ಮ ಬೆಂಬಲ ಇರುತ್ತದೆ ಎನ್ನುವ ಮೂಲಕ ಸರ್ಕಾರಕ್ಕೆ ಪರೋಕ್ಷ ವಾಗಿ ಶಾಕ್ ನೀಡಿದ್ದಾಳೆ. ಅಷ್ಟಕ್ಕೂ ಆ ಶಾಸಕಿ ಯಾರು..? ರಾಜ್ಯದಲ್ಲಿ ನಿಜಕ್ಕೂ ಲಿಂಗಾಯಿತ ಅಧಿಕಾರಿ ಗಳಿಗೆ ಮತ್ತು ಶಾಸಕ ಸಚಿವರಿಗೆ ಮನ್ನಣೆ ನೀಡಲಾಗ್ತಿಲ್ವಾ ಅನ್ನೋದು ನಿಜನಾ..? ಅನ್ನೋದ್ರ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.
ಕಾಂಗ್ರೆಸ್ ಟಿಕೆಟ್ ನೀಡದೆ ಇದ್ರೂ ಹಠಕ್ಕೆ ಬಿದ್ದು ಪಕ್ಷೇತರರಾಗಿ ಗೆದ್ದ ಎಂ.ಪಿ ಲತಾ: ಆ ಕುಟುಂಬ ದಶಕಕಗಳಿಂದಲೂ ರಾಜಕೀಯ ಮಾಡಿಕೊಂಡು ಬಂದಿದೆ. ಮನೆಯ ಯಜಮಾನ ವೀರಶೈವ ಲಿಂಗಾಯಿತ ಸಮಾಜದ ಮುಖಂಡ ಎಂ.ಪಿ ಪ್ರಕಾಶ ಮೂರ್ನಾಲ್ಕು ಬಾರಿ ಮಂತ್ರಿಯಾಗಿದ್ದಷ್ಟೇ ಅಲ್ಲದೇ ಒಮ್ಮೆ ಉಪಮುಖ್ಯಮಂತ್ರಿಯಾಗಿದ್ರು. ಅವರ ಮಗ ಎಂ.ಪಿ.ರವೀಂದ್ರ ಕೂಡ ಶಾಸಕರಾಗೋ ಮೂಲಕ ಸೇವೆಯನ್ನು ಸಲ್ಲಿಸಿದ್ರು.
undefined
ಇದೀಗ ಅವರಿಬ್ಬರು ಇಲ್ಲ. ಆದ್ರೇ ಮೊನ್ನೆ ನಡೆದ ಚುನಾವಣೆ ಎಂ.ಪಿ. ಪ್ರಕಾಶ ಮಗಳಾದ ಎಂ.ಪಿ. ಲತಾ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಿಲ್ಲ. ಆದ್ರೂ ಹಠ ಬಿಡದೇ ಪಕ್ಷೇತರರಾಗಿ ನಿಂತು ಸ್ಪರ್ಧೆ ಮಾಡಿದ ಲತಾ ಭರ್ಜರಿ ಗೆಲುವನ್ನು ಸಾಧಿಸಿದ್ರು. ಗೆದ್ದ ಮಾರನೇ ದಿನವೇ ಸಿದ್ದರಾಮಯ್ಯ ಬಳಿಗೆ ಹೋದ ಶಾಸಕಿ ಲತಾ ತಮ್ಮ ಬೆಂಬಲ ಕಾಂಗ್ರೆಸ್ಗೆ ಇದೆ. ಮತ್ತು ತಾವು ಮೊದಲಿಂದಲೂ ಕಾಂಗ್ರೆಸ್ನಲ್ಲಿಯೇ ಇರೋದು ಟಿಕೆಟ್ ಸಿಗದ ಹಿನ್ನೆಲೆ ಮಾತ್ರ ಪಕ್ಷೇತರರಾಗಿ ಕಣಕ್ಕಿಳಿದಿರೋದು ಎಂದೆಲ್ಲ ಹೇಳಿ ಕಾಂಗ್ರೆಸ್ ಸೇರಿಕೊಂಡರು.
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕ್ಷಣಗಣನೆ: ಅರಮನೆಯಲ್ಲಿ ಯಾವ ದಿನ ಏನೇನು ಕಾರ್ಯಕ್ರಮ ಗೊತ್ತಾ?
ಆದ್ರೇ ಇದೀಗ ಉಲ್ಟಾ ಹೊಡೆದಿರೋ ಎಂ.ಪಿ. ಲತಾ ಅವರು ನಾನು ಕೇವಲ ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿ ಇಲ್ಲ ಎಂದಿದ್ದಾರೆ. ಇದಕ್ಕೆ ಮೂಲ ಕಾರಣ ಸರ್ಕಾರದಲ್ಲಿ ವೀರಶೈವ ಲಿಂಗಾಯಿತ ಶಾಸಕ ಸಚಿವರಷ್ಟೇ ಅಲ್ಲ ಅಧಿಕಾರಿಗಳನ್ನು ಕಡೆಗಣನೆ ಮಾಡಿರೋದು ಎನ್ನಲಾಗುತ್ತಿದೆ. ಮೊನ್ನೆ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಳಿಕ ಸಾಕಷ್ಟ್ರು ವೀರಶೈವ ಲಿಂಗಾಯಿತ ಶಾಸಕರು ಸರ್ಕಾರದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಹರಪನ ಹಳ್ಳಿ ಶಾಸಕಿಯ ಈ ಹೇಳಿಕೆ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ: ಮೂಲತಃ ಜೆಡಿಎಸ್ ನವರಾದ ಎಂಪಿ ಪ್ರಕಾಶ ರವರು ಹಡಗಲಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡನೆ ಬಳಿಕ ಹರಪನಹಳ್ಳಿಗೆ ಹೋದ್ರು. ಅನಿವಾರ್ಯಕಾರಣಗಳಿಂದ ಜೆಡಿಎಸ್ ಬಿಡೋದ್ರ ಜೊತೆ ಸಿದ್ದರಾಮಯ್ಯ ಅವರ ನಂಟು ಇರೋ ಹಿನ್ನೆಲೆ ಕಾಂಗ್ರೆಸ್ ಸೇರ್ಪಡೆಯಾಗಿ ಸ್ಪರ್ಧಿಸಿ ಸೋತ್ರ.
ಅವರ ಮರಣಾ ನಂತರ 2013ರಲ್ಲಿ ಎಂಪಿ. ಪ್ರಕಾಶ ಮಗ ಎಂ.ಪಿ. ರವೀಂದ್ರ ಗೆದ್ದು, 2018ರಲ್ಲಿ ಅವರೂ ಕೂಡ ಸೋತ್ರ. ಇದೀಗ ರವೀಂದ್ರ ಮೃತಪಟ್ಟ ಹಿನ್ನೆಲೆ 2023ರಲ್ಲಿ ಎಂ.ಪಿ. ಲತಾ ಕಾಂಗ್ರೆಸ್ ಟಿಕೆಟ್ ಕೇಳಿದ್ರು ನೀಡಿರಲಿಲ್ಲ. ಅಂದು ಕೂಡ ವೀರಶೈವ ಲಿಂಗಾಯಿರನ್ನು ಕಡೆಗಣನೆ ಮಾಡಲಾಗಿದೆ ಎನ್ನಲಾಗಿತ್ತು. ಇದೀಗ ಶಾಮನೂರು ಹೇಳಿಕೆ ಬೆನ್ನಲ್ಲೆ ಮತ್ತು ಶಾಸಕಿ ಲತಾ ಕಾಂಗ್ರೆಸ್ ಸೇರಿಲ್ಲ. ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ ಎನ್ನುವ ಈ ಹೇಳಿಕೆ ವೀರಶೈವ ಲಿಂಗಾಯಿತರನ್ನು ಕಡೆಗಣನೆ ಮಾಡಿದ್ಧಾರೆ ಎನ್ನುವದಕ್ಕೆ ಪುಷ್ಟಿ ನೀಡಿದಂತಿದೆ.
ಕೋವಿಡ್ ಸಂದರ್ಭದಲ್ಲಿ ಸ್ವಂತ ಹಣದಿಂದ ಬಡವರಿಗೆ ರೇಷನ್ ಹಂಚಿದ್ದ ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಸಾವು!
ನಿಜಕ್ಕೂ ವೀರಶೈವ ಲಿಂಗಾಯತರಿಗೆ ಮನ್ನಣೆ ನೀಡಲಾಗುತ್ತಿಲ್ಲವೇ..?: ಸರ್ಕಾರದ ವಿರುದ್ಧ ಒಬ್ಬರೋರೇ ಶಾಸಕರು ಮುನಿಸು ಹೊರ ಹಾಕುತ್ತಿರೋ ಬೆನ್ನಲ್ಲೇ ಇದೀಗ ಲಿಂಗಾಯಿತರ ಕಡೆಗಣನೆ ವಿಚಾರ ಸಣ್ಣ ಪ್ರಮಾಣದಲ್ಲಿ ದೊಡ್ಡ ಕಿಡಿಯನ್ನು ಹೊತ್ತಿಸುತ್ತಿದೆ. ಇದು ಮುಂದೆ ಯಾವ ಕಡೆ ಸಾಗುತ್ತದೆಯೋ ಕಾದು ನೋಡಬೇಕಿದೆ.