ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಕರ್ನಾಟಕ ಹೈಕೋರ್ಟ್ ರಾಜ್ಯ ಚುನಾವಣೆ ಆಯೋಗಕ್ಕೆ ಮಹತ್ವದ ಸೂಚನೆ ಕೊಟ್ಟಿದೆ.
ಬೆಂಗಳೂರು, (ನ.13): ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ರಾಜ್ಯ ಉಚ್ಛ ನ್ಯಾಯಾಲಯವು ಅನುಮತಿ ನೀಡಿದ್ದು, 3 ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಅವಧಿ ಮುಗಿದ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು.
ಗ್ರಾಮ ಪಂಚಾಯತಿ ಚುನಾವಣೆ: ಕಂದಾಯ ಇಲಾಖೆಗೆ ಚುನಾವಣಾ ಆಯೋಗ ಮಹತ್ವದ ಸೂಚನೆ
ಇದನ್ನ ವಿಚಾರಣೆ ನಡೆಸಿದ ಹೈಕೋರ್ಟ್, ಎಲೆಕ್ಷನ್ ಘೋಷಣೆ ಬಗ್ಗೆ 3 ವಾರದಲ್ಲಿ ಆಯೋಗ ತೀರ್ಮಾನಿಸಬೇಕು. ಆಯೋಗ ಸರ್ಕಾರ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬಹುದು. ಚುನಾವಣೆಗೆ ಹಣಕಾಸಿನ ಅಗತ್ಯವಿದ್ದರೆ ರಾಜ್ಯಪಾಲರನ್ನು ಸಂಪರ್ಕಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ,
ಅಸಾಧಾರಣ ಸಂದರ್ಭದಲ್ಲಷ್ಟೇ ಚುನಾವಣೆ ಮುಂದೂಡಬಹುದು. ಆ ಅಸಾಧಾರಣ ಸಂದರ್ಭವನ್ನು ಆಯೋಗ ತೀರ್ಮಾನಿಸಬೇಕು. ಚುನಾವಣೆ ಮುಂದೂಡಿಕೆ ಸರ್ಕಾರ ನಿರ್ಧರಿಸುವಂತಿಲ್ಲ ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಅಶೋಕ್ ಎಸ್. ಕಿಣಗಿರವರಿದ್ದ ಪೀಠ ಸ್ಪಷ್ಟಪಡಿಸಿದೆ.