ಶಿರಾ ಹಾಗೂ ರಾಜರಾರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತು ವಿಧಾನಪರಿಷತ್ ನಾಲ್ಕು ಸ್ಥಾನಗಳಲ್ಲಿ ಗೆದ್ದು ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಆಡಳಿತಾರೂಢ ಬಿಜೆಪಿ ಇದೀಗ ಮುಂಬರುವ ಮತ್ತೆರೆಡು ಉಪಚುನಾವಣೆಯ ಮೇಲೆ ಕಣ್ಣಿಟ್ಟಿದೆ.
ರಾಯಚೂರು, (ನ.13): ಆರ್.ಆರ್.ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಗೆದ್ದು ಬೀಗಿರುವ ಬಿಜೆಪಿ, ಇದೀಗ ಮಸ್ಕಿ ಹಾಗೂ ಬಸವಕಲ್ಯಾಣ್ ಕ್ಷೇತ್ರಗಳ ಚಿತ್ತ ನೆಟ್ಟಿದೆ.
ಹೌದು....ಶಿರಾ ಉಸ್ತುವಾರಿಗಳಾಗಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಬಸವಕಲ್ಯಾಣದತ್ತ ಪ್ರಯಾಣ ಬೆಳೆಸಿದ್ದರೆ, ರಾಜ್ಯ ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಎನ್.ರವಿ ಕುಮಾರ್ ಅವರು ಮಸ್ಕಿ ಕ್ಷೇತ್ರದ ಅಖಾಡಕ್ಕಿಳಿದಿದ್ದಾರೆ.
ಮಸ್ಕಿಗೆ ಬಂದಿಳಿದುರವ ರವಿ ಕುಮಾರ್ ಅವರನ್ನ ಬಿಜೆಪಿಯ ಸಂಭವನೀಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರು ಸ್ವಾಗತಿಸಿದರು. ಬಳಿಕ ಸುದ್ದುಗಾರರೊಂದಿಗೆ ಮಾತನಾಡಿದ ರವಿ ಕುಮಾರ್, ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೆರೆಡು ಉಪಚುನಾವಣೆಗೆ ಬಿಜೆಪಿ ಸಜ್ಜು, ಅಖಾಡಕ್ಕಿಳಿದ ಉಸ್ತುವಾರಿಗಳು..!
ಈಗಾಗಲೇ ಎರಡು ಉಪಚುನಾವಣೆಯಲ್ಲಿ ಗೆದಿದ್ದೇವೆ. ಮಸ್ಕಿ ಕ್ಷೇತ್ರ ಈ ಮೊದಲು ಬಿಜೆಪಿ ವಶದಲ್ಲಿತ್ತು. ಈ ಬಾರಿ ಕೂಡ ಗೆಲವು ನಮ್ಮದೆ. ಮಸ್ಕಿ ಕ್ಷೇತ್ರದ ಚುನಾವಣಾ ಪೂರ್ವ ತಯಾರಿ ಪರಿಶೀಲನೆ ನಡೆಸುತ್ತೇನೆ ಎಂದರು.
ಮಸ್ಕಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು, ಮುಂದೆ ಹೆಚ್ಚಿನ ಅಭಿವೃದ್ಧಿಗೊಳಿಸಲಾಗುವುದು. ಈ ಭಾಗದ ನೀರಾವರಿ ಯೋಜನೆಯಾದ 5ಎ ಕಾಲುವೆ ಮಂಜೂರಿಗಾಗಿ ಉಪಚುನಾವಣೆ ಘೋಷಣೆ ಮಾಡುವ ಮೊದಲು ಮುಖ್ಯಮಂತ್ರಿಗೆ ಮನವಿ ಮಾಡಿ ಮಂಜೂರು ಮಾಡಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.