ಚುನಾವಣಾ ಬಾಂಡ್ ಹಗರಣ: ನಿರ್ಮಲಾ ಸೀತಾರಾಮನ್ ಸೇರಿ ಹಲವರ ವಿರುದ್ಧದ FIRಗೆ ಹೈಕೋರ್ಟ್ ಮಧ್ಯಂತರ ತಡೆ

By Gowthami KFirst Published Sep 30, 2024, 5:38 PM IST
Highlights

ಚುನಾವಣಾ ಬಾಂಡ್ ಹಗರಣದ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಈ ಸಂಬಂಧ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22 ಕ್ಕೆ ಮುಂದೂಡಲಾಗಿದೆ.

ಬೆಂಗಳೂರು (ಸೆ.30): ಚುನಾವಣಾ ಬಾಂಡ್ ಹಗರಣದ ಸಂಬಂಧ ಬೆಂಗಳೂರಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  , ಇ.ಡಿ. ಅಧಿಕಾರಿಗಳು, ನಳಿನ್ ಕುಮಾರ್ ಕಟೀಲ್, ವಿಜಯೇಂದ್ರ, ಜೆ.ಪಿ.ನಡ್ಡಾ ಸೇರಿ ಹಲವರ  ವಿರುದ್ಧ  ದಾಖಲಾಗಿದ್ದ ಎಫ್‌ಐಆರ್‌  ಗೆ  ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ತಿಲಕನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ  ಎಫ್‌ಐಆರ್‌  ಗೆ  ಹೈಕೋರ್ಟ್‌ ಮಧ್ಯಂತರ ತಡೆ ನೀಡಿ ಮುಂದಿನ ವಿಚಾರಣೆಯನ್ನು  ಅಕ್ಟೋಬರ್.22 ಕ್ಕೆ  ಮುಂದೂಡಿದೆ.

Latest Videos

ಬೈರಾದೇವಿ ಸಿನಿಮಾ ನೋಡ್ತಿದ್ದ ಮಹಿಳೆ ಮೈಮೇಲೆ ಆವೇಶ, ರಾಧಿಕಾ ಕಾಳಿಮಾತೆ ಅವತಾರಕ್ಕೆ ಬೆರಗಾದ ಸ್ಯಾಂಡಲ್‌ವುಡ್‌!

ಜನಾಧಿಕಾರ ಸಂಘರ್ಷ ಪರಷತ್‌ನ ಆದರ್ಶ ಆರ್‌. ಐಯ್ಯರ್‌ ನೀಡಿದ ದೂರಿನ ಮೇರೆಗೆ ಶುಕ್ರವಾರ ಜನಪ್ರತಿನಿಧಿಗಳ ನ್ಯಾಯಾಲಯ ಎಫ್ಐಆರ್‌ ದಾಖಲಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿಕೆ ಮಾಡಿತ್ತು.

ಬೀಚ್ ವೇರ್‌ನಲ್ಲಿ ಸ್ಟನ್ನಿಂಗ್ ಆಗಿ ನಟ ನಾಗಚೈತನ್ಯ ಮನದರಸಿ ನಟಿ ಶೋಭಿತಾ ಧೂಳಿಪಾಲ

ಸಚಿವೆ ನಿರ್ಮಲಾ ಸೀತಾರಾಮನ್‌ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಮುಖಂಡ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿ ಮತ್ತು ಇ.ಡಿ. ಇಲಾಖೆ ವಿರುದ್ಧ ದೂರು ದಾಖಲಿಸಲಾಗಿತ್ತು. 2019ರ ಏಪ್ರಿಲ್‌ ತಿಂಗಳಿನಿಂದ 2022ರ ಆಗಸ್ಟ್‌ ತಿಂಗಳವರೆಗೆ ಉದ್ಯಮಿ ಅನಿಲ್‌ ಅಗಲ್‌ವಾಲ್‌ ಅವರ ಸಂಸ್ಥೆಯ ಕಡೆಯಿಂದ ಸುಮಾರು 230 ಕೋಟಿ ರು. ಮತ್ತು ಅರೊಬಿಂದೋ ಫಾರ್ಮಸಿ ಸಂಸ್ಥೆಯಿಂದ 49 ಕೋಟಿ ರು.ನಷ್ಟು ಚುನಾವಣಾ ಬಾಂಡ್‌ಗಳ ಮೂಲಕ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಿದೆ.

click me!