EVM ನಿರ್ವಹಣೆಯಲ್ಲಿ ಉತ್ತಮ ಸಾಧನೆಗೈದ ಕರ್ನಾಟಕಕ್ಕೆ ಪ್ರಶಸ್ತಿ..!

Published : Jan 24, 2020, 09:42 PM IST
EVM ನಿರ್ವಹಣೆಯಲ್ಲಿ ಉತ್ತಮ ಸಾಧನೆಗೈದ ಕರ್ನಾಟಕಕ್ಕೆ ಪ್ರಶಸ್ತಿ..!

ಸಾರಾಂಶ

ಭಾರತದಲ್ಲೂ ಇವಿಎಂ ಯಂತ್ರಗಳ ಮೇಲೆ ಅಪಸ್ವರಗಳ ನಡುವೆಯೂ  EVM ನಿರ್ವಹಣೆಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದ್ದು, ಪ್ರಶಸ್ತಿಗೆ ಆಯ್ಕೆಯಾಗಿದೆ.

ಬೆಂಗಳೂರು, [ಜ.24]: ಪ್ರತಿ ವರ್ಷದಂತೆ ಈ ವರ್ಷವು ಭಾರತ ಚುನಾವಣಾ ಆಯೋಗ 2019ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಿದೆ. 

ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಭಾರತ ಚುನಾವಣಾ ಆಯೋಗವು ಚುನಾವಣಾ ಮತ್ತು ಮತದಾರರ ಪಟ್ಟಿ ನಿರ್ವಹಣೆ ಮತ್ತು ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಹಾಗೂ ಸಂಸ್ಥೆಗಳಿಗೆ ರಾಷ್ಟ್ರೀಯ ಅತ್ಯುತ್ತಮ ಚುನಾವಣಾ ಕಾರ್ಯಗಳ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತದೆ. ಅದರಂತೆ ಭಾರತ ಚುನಾವಣಾ ಆಯೋಗವು 2019ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಿದೆ. 

ತಾಕತ್ತಿದ್ದರೆ ವೋಟಿಂಗ್ ಮೆಷೀನ್ ಹ್ಯಾಕ್ ಮಾಡಿ: ಚುನಾವಣಾ ಆಯೋಗದಿಂದ ಓಪನ್ ಚಾಲೆಂಜ್ 

ಕರ್ನಾಟಕದ ಈ ಕೆಳಗಿನ ಅಧಿಕಾರಿ ಹಾಗೂ ಸಂಸ್ಥೆಗೆ ಅತ್ಯುತ್ತಮ ಸಾಧನೆಗಾಗಿ 2019ರ ವಿಶೇಷ ಪ್ರಶಸ್ತಿ ಹಾಗೂ ಮಾಧ್ಯಮ ಪ್ರಶಸ್ತಿಯನ್ನು ಘೋಷಿಸಿದೆ.
1. ಇವಿಎಂ ನಿರ್ವಹಣೆಗಾಗಿ ವಿಶೇಷ ಪ್ರಶಸ್ತಿ : ಶ್ರೀ. ವಿ.ರಾಘವೇಂದ್ರ, ಜಂಟಿ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ
2. ಮತದಾನ ಜಾಗೃತಿಗಾಗಿ ಮಾದ್ಯಮ ಪ್ರಶಸ್ತಿ :ರೆಡ್‍ಎಫ್‍ಎಮ್, ಬೆಂಗಳೂರು

ಭಾರತ ಚುನಾವಣಾ ಆಯೋಗವು 2020ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ 2020 ರ ಜನವರಿ 25 ರಂದು ದೆಹಲಿಯ ಕಂಟೋನ್ಮೆಂಟ್‍ನಲ್ಲಿರುವ ಝೋರಾವರ್ ಸಭಾಂಗಣದ ಮಾಣಿಕ್‍ಷಾ ಸೆಂಟರ್‍ ನಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನದ ರಾಷ್ಟ್ರೀಯ ಸಮಾರಂಭದಲ್ಲಿ ಮೇಲಿನ ಅಧಿಕಾರಿ ಹಾಗೂ ಸಂಸ್ಥೆಗೆ  ರಾಷ್ಟ್ರಪತಿಗಳಿಂದ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಮೊದಲ ಬಾರಿಗೆ ಇವಿಎಂ ಬಳಸಿರುವುದು 1982ರಲ್ಲಿ. ಕೇರಳದ ಪರೂರ್ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ಇವಿಎಂ ಮತಯಂತ್ರವನ್ನು ಬಳಸಲಾಗಿತ್ತು.

ಇದಾದ ಬಳಿಕ  1999 ರ ಲೋಕಸಭಾ ಚುನಾವಣೆ ವೇಳೆ ಸೀಮಿತ ಕ್ಷೇತ್ರದಲ್ಲಿ ಇವಿಎಂ ಮತಯಂತ್ರಗಳ ಪ್ರಯೋಗ ಮಾಡಲಾಯಿತು. 2004ರ ಲೋಕಸಭಾ ಚುನಾವಣೆ ನಂತರ ನಡೆದ ಪ್ರತಿಯೊಂದು ವಿಧಾನಸಭಾ ಚುಣಾವಣೆಯಲ್ಲೂ ಇವಿಎಂ ಅನ್ನು ಜಾರಿಗೆ ತರಲಾಯಿತು.

ಕ್ವಿಟ್ ಇಂಡಿಯಾ ವರ್ಷಾಚರಣೆಯಂದು ಇವಿಎಂ ತೊಲಗಿಸಿ ಆಂದೋಲನ!

ಇವೆಲ್ಲಕ್ಕಿಂತ ಆಸಕ್ತಿದಾಯಕ ವಿಷಯವೆಂದರೆ, ವಿಶ್ವದ  195 ರಾಷ್ಟ್ರಗಳಲ್ಲಿ ಕೇವಲ 20 ದೇಶಗಳಲ್ಲಿ ಮಾತ್ರ ಇವಿಎಂ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಈ 20 ದೇಶಗಳಲ್ಲಿ 6 ದೇಶಗಳು ಎಲೆಕ್ಟ್ರಾನಿಕ್ ಮತಯಂತ್ರದ ಬಳಕೆಯ ಪ್ರಾರಂಭಿಕ ಹಂತದಲ್ಲಿದೆ. ಅಂದರೆ ಈ ದೇಶಗಳು ಚುನಾವಣೆಗೆ ಸಂಪೂರ್ಣವಾಗಿ ಇವಿಎಂ ಅನ್ನು ನೆಚ್ಚಿಕೊಂಡಿಲ್ಲ.

ಭಾರತದಲ್ಲೂ ಇವಿಎಂ ಯಂತ್ರಗಳ ಮೇಲೆ ಅಪಸ್ವರಗಳು ಕೇಳಿ ಬಂದಿದ್ಧವು. ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಹ್ಯಾಕ್ ಮಾಡಿ ಚುನಾವಣೆ ಗೆಲ್ಲಲಾಗುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.

ಆದರೆ ಇದನ್ನು ಅಲ್ಲೆಗೆಳೆದಿರುವ ಚುನಾವಣಾ ಆಯೋಗ, ಯಾವುದೇ ಪ್ರಯೋಗಕ್ಕೂ ಸಿದ್ಧ ಎಂದು ತಿಳಿಸಿತ್ತು. ಅಲ್ಲದೆ ಪ್ರಯೋಗಿಕವಾಗಿ ಇವಿಎಂ ಬಳಕೆ ಸುರಕ್ಷಿತ ಎಂಬುದನ್ನು ತೋರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ