ಮಧ್ಯಪ್ರದೇಶದಿಂದಲೇ ದಿಢೀರ್ ದೆಹಲಿಗೆ ಡಿಕೆಶಿ: ಕುತೂಹಲ ಕೆರಳಿಸಿದ ಕೆಪಿಸಿಸಿ ಹುದ್ದೆ

By Suvarna News  |  First Published Jan 24, 2020, 8:47 PM IST

ಮಧ್ಯಪ್ರದೇಶದಲ್ಲಿ ಟೆಂಪಲ್ ರನ್ ಮಾಡ್ತಿದ್ದು, ಅಮವಾಸ್ಯೆ ಪೂಜೆ ಮಾಡಿಸಿದ್ದಾರೆ. ಆದ್ರೆ ಸದ್ಯದ ವಿಚಾರ ಏನಪ್ಪ ಅಂದ್ರೆ, ಗುರುವಾರದಿಂದಲೂ ಟೆಂಪಲ್ ರನ್ ನಲ್ಲಿ ಬ್ಯೂಸಿ ಇದ್ದ ಡಿಕೆಶಿ ಇಂದು [ಶುಕ್ರವಾರ] ದಿಢೀರ್ ದೆಹಲಿ ವಿಮಾನ ಏರಿರುವುದು ಭಾರೀ ಕುತೂಹಲ ಮೂಡಿಸಿದೆ. 
 


ಬೆಂಗಳೂರು, [ಜ.24]: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಒಂದು ತಿಂಗಳಿನಿಂದ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಇಂದು [ಶುಕ್ರವಾರ] ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ನಿನ್ನೆ [ಗುರುವಾರ]  ಮಧ್ಯಪ್ರದೇಶ ಧಾತಿಯಾದ ಪೀತಾಂಬರ ಪೀಠದ ಬಾಗಲ್ಮುಖಿ ಹಾಗೂ ದೂಮವತಿ ದೇಗುಲದಲ್ಲಿ ಹೋಮ, ಪೂಜೆ ನೆರವೇರಿಸಿದರು. ಅಲ್ಲಿಂದಲೇ [ಮಧ್ಯಪ್ರದೇಶ ] ಶುಕ್ರವಾರ ನವದೆಹಲುಗೆ ವಿಮಾನ ಏರಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ. 

Latest Videos

undefined

ಮಧ್ಯ ಪ್ರದೇಶದ ಶಕ್ತಿ ದೇಗುಲದಲ್ಲಿ ಮಹಾ ಪೂಜೆ, ಹೋಮ ನಡೆಸಿದ ಡಿಕೆಶಿ

ಕಳೆದ ಒಂದೆರಡು ತಿಂಗಳಿಂದ ರಾಜ್ಯ ‘ಕೈ’ ಪಾಳಯದಲ್ಲಿ ಸಾರಥ್ಯ ಸಮರ ಸದ್ದಿಲ್ಲದೇ ಜೋರಾಗ್ತಿದೆ.  ಕೆಪಿಸಿಸಿ ಅಧ್ಯಕ್ಷಗಾದಿ ರೇಸ್ ನಲ್ಲಿ ಡಿಕೆ ಹೆಸರು ಬಲವಾಗಿ ಕೇಳಿ ಬಂದಿದ್ರೂ, ಅಧ್ಯಕ್ಷರ ಘೋಷಣೆಗೆ ಕಾಣದ ಕೈ ಕೆಲಸ ಮಾಡ್ತಿದೆ ಅನ್ನೋದು ರಾಜಕೀಯ ಪಂಡಿತರ ಮಾತು. 

ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷಗಾದಿ ವಿಳಂಬಕ್ಕೆ ಡಿಕೆ ತೀವ್ರ ತಲೆ ಕೆಡಿಸಿಕೊಂಡಿದ್ದಾರಂತೆ. ಇದಕ್ಕಾಗಿ ಹುದ್ದೆ ವಿಚಾರವಾಗಿ ಯಾವುದೇ ಅಡೆತಡೆಗಳು ಬರಬಾರದು ಅಂತ ಮಧ್ಯಪ್ರದೇಶದಲ್ಲಿ  ಡಿಕೆಶಿ ಟೆಂಪಲ್ ರನ್ ಮಾಡಿದ್ದರು.  

ಭಿನ್ನಮತ ಸ್ಫೋಟ: ಸಿದ್ದರಾಮಯ್ಯ ನಡೆಗೆ ಸಿಡಿದೆದ್ದ ಮೂಲ ಕಾಂಗ್ರೆಸ್ಸಿಗರು

ಆದ್ರೆ ಸದ್ಯದ ವಿಚಾರ ಏನಪ್ಪ ಅಂದ್ರೆ, ಟೆಂಪಲ್ ರನ್ನಲ್ಲಿ ಬ್ಯೂಸಿ ಇದ್ದ ಡಿಕೆಶಿ ಶುಕ್ರವಾರ ದಿಢೀರ್ ದೆಹಲಿಗೆ ಭೇಟಿ ಕೊಟ್ಟಿದ್ದು, ಹಲವು ಚರ್ಚೆಗಳನ್ನ ಹುಟ್ಟು ಹಾಕಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರಾಗಿದ್ದಾರೆ. ಸಿದ್ದರಾಮಯ್ಯ ಬಣ ಸಹ ಮತ್ತೊಂದು ತುದಿಯಿಂದ ತೀವ್ರ ಪೈಪೋಟಿ ನಡೆಸುತ್ತಿದೆ.

ಅದ್ಯಾಕೋ ಏನೋ ರಾಜ್ಯ ಕಾಂಗ್ರೆಸ್ ನಲ್ಲಿ ಸಾರಥ್ಯ ಸಮರ ನಿಲ್ಲೋ ಹಾಗೇ ಕಾಣುತ್ತಿಲ್ಲ. ಕೆಪಿಸಿಸಿ ಕುರ್ಚಿ ಕಾಳಗದಲ್ಲಿ ದಿನಕ್ಕೊಂದು ಟ್ವಿಸ್ಟ್ ಗಳು ಸಿಗುತ್ತಿರುವುದನ್ನು ನೋಡಿದ್ರೆ ಹೈಕಮಾಂಡ್ ಕೂಡ ಕನ್ಫ್ಯೂಸ್ ನಲ್ಲಿ ಆದಂತೆ ಕಾಣಿಸುತ್ತಿದೆ. 

ಬಣ ರಾಜಕೀಯ ಮತ್ತೆ ಮುನ್ನೆಲೆಗೆ: ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಪರಂ

ಡಿಕೆಶಿ-ಸಿದ್ದು ಕಾಳಗ
ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡುವುದಾದರೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕು ಎಂಬುದು ಸಿದ್ದರಾಮಯ್ಯ ಬಣದ ಒತ್ತಾಯವಾಗಿದೆ. ಆದರೆ ಇದಕ್ಕೆ ಡಿ.ಕೆ.ಶಿವಕುಮಾರ್ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಈ ಕಾಳಗದಿಂದ ಹೈಕಮಾಂಡ್ ಅಧ್ಯಕ್ಷ ಹೆಸರನ್ನು ಪ್ರಕಟಿಸುವುದಕ್ಕೆ ವಿಳಂಬ ಮಾಡುತ್ತಿದೆ.

ಈ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಳ್ಳಲು ಡಿಕೆ ಶಿವಕುಮಾರ್ ದೆಹಲಿಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಡಿಕೆಶಿ, ಕೆಪಿಸಿಸಿ ಪಿಕ್ಚರ್  ಕ್ಲಿಯರ್ ಮಾಡಿಕೊಂಡು ರಾಜ್ಯಕ್ಕೆ ವಾಪಸ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

click me!