ಕೆಪಿಸಿಸಿ ಅಧ್ಯಕ್ಷರಿಗೆ ಬಿಜೆಪಿ ನಾಯಕ BL ಸಂತೋಷ್ ಸನ್ಮಾನ: ಸುತ್ತೂರು ಶ್ರೀ ಸಾಕ್ಷಿ

By Suvarna News  |  First Published Jan 24, 2020, 6:26 PM IST

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇವರಿಬ್ಬರು ಬೇರೆ-ಬೇರೆ ಪಕ್ಷದ ಪ್ರಮುಖ ನಾಯಕರು. ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪಗಳನ್ನ ಮಾಡುವರು. ಆದ್ರೆ, ಇದೀಗ ಅದೇ ಸಂತೋಷ್, ದಿನೇಶ್ ಗುಂಡೂರಾವ್ ಅವರಿಗೆ ಸನ್ಮಾನ ಮಾಡಿದ ಪ್ರಸಂಗ ನಡೆದಿದೆ. 


ಮೈಸೂರು, [ಜ.24]: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ  ಸುತ್ತೂರು ಶ್ರೀಕ್ಷೇತ್ರವು ಪ್ರತಿವರ್ಷ ಏರ್ಪಡಿಸುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವದಲ್ಲಿ ಇಂದು (ಶುಕ್ರವಾರ) ಹಲವು ರಾಜಕೀಯ ನಾಯಕರು ಪಾಲ್ಗೊಂಡರು. 

ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ವಿಚಾರ ಸಂಕಿರಣವನ್ನ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಿದರು.

Latest Videos

undefined

ಟಗರುಗಳ ಸಮಾಗಮ: ಒಂದು ಗ್ರಾಮದ ವೇದಿಕೆಯಲ್ಲಿ ಈ ಅಪೂರ್ವ ಸಂಗಮ..!

ಇದೇ ವೇಳೆ ಬಿಎಸ್ ಸಂತೋಷ್ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸನ್ಮಾನ ಮಾಡಿರುವುದು ವಿಶೇಷವಾಗಿದೆ. ಹೌದು. ಇದು ಅಚ್ಚರಿ ಅನ್ನಿಸಿದರೂ ಸತ್ಯ. ಇದಕ್ಕೆ ಶ್ರೀಗಳೇ ಸಾಕ್ಷಿಯಾಗಿದ್ದಾರೆ.

ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ಸಂತೋಷ್ ಅವರು ದಿನೇಶ್ ಗುಂಡೂರಾವ್ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಸುತ್ತೂರು ಶ್ರೀಕ್ಷೇತ್ರವು ಪ್ರತಿವರ್ಷ ಏರ್ಪಡಿಸುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವದಲ್ಲಿ ಇಂದು ಪಾಲ್ಗೊಂಡೆನು.

ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದೆನು. pic.twitter.com/mEnY14CIHj

— ದಿನೇಶ್ ಗುಂಡೂರಾವ್/ Dinesh Gundu Rao (@dineshgrao)

ಮೊನ್ನೇ ಅಷ್ಟೇ ಮೈಸೂರು ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಎಚ್. ವಿಶ್ವನಾಥ್ ಒಂದೇ ವೇದಿಕೆ ಕಾಣಿಸಿಕೊಂಡಿದ್ದರು.

 ಅಷ್ಟೇ ಅಲ್ಲದೇ ವೇದಿಕೆ ಮೇಲೆ ಒಬ್ಬರಿಗೊಬ್ಬರು ಸಂತಸದಿಂದ ಸಮಯ  ಕಳೆದಿದ್ದಲ್ಲದೇ ಈಶ್ವರಪ್ಪನವರು ಸಿದ್ದರಾಮಯ್ಯನವರ ಕಾರಿನಲ್ಲಿ ತೆರಳಿರುವುದನ್ನು ಇಲ್ಲಿ ಸ್ಮರಿಸಬಹುದು.

click me!