
ಬೆಂಗಳೂರು (ಡಿ.22): ವಿವಾದಿತ ಮತಾಂತರ ನಿಷೇಧ ವಿಧೇಯಕ (Anti Conversion Bill) ವಿಧಾನ ಸೌಧದ ಕಲಾಪದಲ್ಲಿ ಚರ್ಚೆ ಹಿನ್ನೆಲೆ ಸುವರ್ಣ ವಿಧಾನ (Suvarna soudha) ಸೌಧದಲ್ಲಿ ಮಾಧ್ಯಮಗಳಿಗೆ (Media) ನಿರ್ಬಂಧ ಹೇರಿ ಇದೀಗ ಹಲವು ವಿರೋಧದ ಹಿನ್ನೆಲೆ ಅದನ್ನು ವಾಪಸ್ ಪಡೆಯಲಾಗಿದೆ. ಯಾವುದೇ ಕ್ಯಾಮರಾಗಳು (Camera) ಸುವರ್ಣ ವಿಧಾನಸೌಧ ಪ್ರವೇಶ ಮಾಡುವಂತಿಲ್ಲ ಎಂದು ಹೇಳಲಾಗಿತ್ತು. ಬೆಳಗಾವಿ (Belagavi) ಎಸ್ ಪಿ ಲಕ್ಷ್ಮಣ್ ನಿಂಬರಗಿ ಆದೇಶ ನೀಡಿದ್ದ ಆದೇಶವನ್ನು ಇದೀಗ ವಾಪಸ್ ಪಡೆದಿದ್ದಾರೆ.
ಎಸ್ ಪಿ ಆದೇಶ ಹಿನ್ನೆಲೆ ಮಾಧ್ಯಮಗಳನ್ನು ಹೊರಗೆ ಹಾಕಲಾಗಿತ್ತು. ವಿಧಾನಸಭಾ ಸಚಿವಾಲಯ ವಿಧಾನ ಸಭಾ (Assembly) ಲಾಂಜ್ ಮತ್ತು ವಿರೋಧ ಪಕ್ಷದ ಕೊಠಡಿಗಳ ಬಳಿ ಕ್ಯಾಮರಾ ಹಾಕಲು ನಿರ್ಬಂಧ ಹೇರಲಾಗಿತ್ತು. ಸ್ಪೀಕರ್ (Speaker) ಸೂಚನೆ ಹಿನ್ನೆಲೆಯಲ್ಲಿ ಮಾಧ್ಯಮ ನಿಷೇಧ ಮಾಡಲಾಗಿದೆ. ಯಾವುದೇ ಗೇಟ್ ನಿಂದಲೂ ಕ್ಯಾಮರಾ (Camera) ಒಳ ಪ್ರವೇಶ ಮಾಡಲು ಅವಕಾಶ ಇಲ್ಲ ಎಂದು ಬೆಳಗಾವಿ ಎಸ್ ಪಿ ಲಕ್ಷ್ಮಣ್ ನಿಂಬರಗಿ ಸೂಚನೆ ಹೊರಡಿಸಿದ್ದರು.
"
ಆದರೆ ಇದೀಗ ಈ ಆದೇಶವನ್ನು ಪತ್ತೆ ವಾಪಸ್ ಪಡೆದು ಇದೀಗ ವಿಧಾನಸಭಾ ಸಚಿವಾಲಯ ವಿಧಾನಸಭಾ ಲಾಂಜ್ ಮತ್ತು ವಿರೋಧ ಪಕ್ಷದ ಕೊಠಡಿಗಳ ಬಳಿ ಕ್ಯಾಮರಾ ಹಾಕಲು ಅವಕಾಶ ನೀಡಲಾಗಿದೆ. ಆದರೆ ಮಾಧ್ಯಮಗಳ ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿತ್ತು.
ವಿಪಕ್ಷಗಳ ವಿರೋಧ : ವಿರೋಧ ಪಕ್ಷದ (Opposition Party ) ರಿಯಾಕ್ಷನ್ ಗಳು ಹೈಪ್ ಆಗೋದನ್ನು ತಡೆಯಲು ಸರ್ಕಾರ ಪ್ಲಾನ್ ಮಾಡಿ ಮಾಧ್ಯಮಗಳಿಗೆ ನಿಷೇಧ ಹೇರಿತ್ತು. ಪೊಲೀಸ್ (Police) ಅಧಿಕಾರಿಗಳಿಗೆ ಕ್ಯಾಮರಾ (Camera) ಒಳಗೆ ಬಿಡದಂತೆ ಸೂಚನೆ ನೀಡಲಾಗಿತ್ತು. ಮತಾಂತರ ನಿಷೇಧ ಕಾಯ್ದೆಯನ್ನ ಕಾನೂನಾತ್ಮವಾಗಿಯೂ ಹೋರಾಟ ಮಾಡುತ್ತೇವೆ. ಸದನದ ಒಳಗು ಮತ್ತು ಹೊರಗು ಹೋರಾಟ ಮಾಡುತ್ತೇವೆ. ವಿಧೇಯಕ ಮಂಡನೆಯನ್ನ ಮಾಧ್ಯಮದವರು ನಿನ್ನೆ ಲೈವ್ ತೋರಿಸಿದ್ದರು. ಇವತ್ತು ಚರ್ಚೆಯನ್ನ ಲೈವ್ ತೋರಿಸುತ್ತಾರೆ ಎನ್ನುವ ಕಾರಣಕ್ಕೆ ಮಾಧ್ಯಮದವರನ್ನು ಹೊರಹಾಕುವ ಪ್ರಯತ್ನ ಸರ್ಕಾರ ಮಾಡಿದೆ ಎಂದು ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಇದೀಗ ಆದೇಶವನ್ನು ವಾಪಸ್ಪಡೆಯಲಾಗಿದೆ.
ಕುಮಾರಸ್ವಾಮಿ ವಾಗ್ದಾಳಿ : ಸುವರ್ಣ ಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ (BJP) ಸರಕಾರ ನಾಡಿನ ಸಮಸ್ಯೆಗಳನ್ನು 'ವಿಷಯಾಂತರʼ ಮಾಡಲು ʼ ಮತಾಂತರʼ ಗುಮ್ಮವನ್ನು ತಂದು ನಿಲ್ಲಿಸಿದೆ. ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜ ಬಣ್ಣ ಎಲ್ಲಿ ಬಯಲಾಗುತ್ತದೋ ಎಂದು ಅಂಜಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ಸಂಶಯ ಇದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಈಗ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ʼಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನʼ ಮಾಡಲಾಗುತ್ತಿದೆ.ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆಯಷ್ಟೇ. ಅವರ ದುರುದ್ದೇಶ ಸ್ಪಷ್ಟ ಎಂದು ಹೇಳಿದ್ದರು ಮಾಜಿ ಸಿಎಂ ಎಚ್ಡಿಕೆ
ಈ ಮಧ್ಯೆ ಮಾನ್ಯ ಸ್ಪೀಕರ್ ಅವರು ಮಾಧ್ಯಮ ನಿರ್ಬಂಧದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಹಾಗಾದರೆ, ನಿರ್ಬಂಧ ಹೇರಿದವರು ಯಾರು? ಸ್ಪೀಕರ್ ಅವರಿಗೆ ಗೊತ್ತಿಲ್ಲದೆ ನಿರ್ಬಂಧದ ಸಂದೇಶ ಮಾಧ್ಯಮಗಳಿಗೆ ಕೊಟ್ಟವರು ಯಾರು? ಈ ಬಗ್ಗೆ ಜನರಿಗೆ ಸತ್ಯಾಂಶ ಗೊತ್ತಾಗಬೇಕಿದೆ ಎಂದು ಮಾಧ್ಯಮ ನಿಷೇಧ ಬಗ್ಗೆ ಟ್ವೀಟ್ ಪ್ರಹಾರ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.