Karnataka Politics: 'ಬಿಜೆಪಿಯ ಘಟಾನುಗಟಿ ನಾಯಕರು ಕಾಂಗ್ರೆಸ್‌ ಸೇರ್ಪಡೆ'

By Kannadaprabha News  |  First Published Dec 22, 2021, 9:13 AM IST

*   ಪಕ್ಷಾಂತರಿಗಳಿಗೆ ಜನರಿಂದ ತಕ್ಕ ಪಾಠ
*   ಬಿಜೆಪಿಯವರ ಸುಳ್ಳಿಗೆ ಮರುಳಾಗಬೇಡಿ
*   ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅಭಿವೃದ್ಧಿ ಹೊಂದಲು ಸಾಧ್ಯ 
 


ಕನಕಗಿರಿ(ಡಿ.22):  ಅಧಿಕಾರ ಅನುಭವಿಸಿ ಕಾಂಗ್ರೆಸ್ಸಿಗೆ(Congress) ದ್ರೋಹ ಬಗೆದು ಪಕ್ಷಾಂತರ ಮಾಡಿದವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ(Shivaraj Tangadagi) ಹೇಳಿದರು. ಡಿ. 27ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆ(Town Panchayat Election) ಅಂಗವಾಗಿ ಮಂಗಳವಾರ ಬ್ಲಾಕ್‌ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ವಾರ್ಡ್‌ವಾರು ಪ್ರಚಾರ(Campaign) ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಅಧಿಕಾರ ಮುಗಿದರೂ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಲಾಗಿದ್ದರೂ ಪಕ್ಷದ ಸಿದ್ಧಾಂತವನ್ನು ಗಾಳಿಗೆ ತೂರಿ ಪಕ್ಷೇತರರಾಗಿ ಸ್ಪರ್ಧಿಸಿರುವವರು ವಿಳಾಸವಿಲ್ಲದೆ ಸೋಲಲಿದ್ದಾರೆ. ಪಕ್ಷಾಂತರ ಮಾಡಿರುವವರನ್ನು ಪಕ್ಷ ಮತ್ತು ಮನಸ್ಸಿನಿಂದ ಕಿತ್ತೊಗೆಯುತ್ತೇನೆ ಎಂದರು.

Tap to resize

Latest Videos

ಜನವರಿ ಅಂತ್ಯಕ್ಕೆ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ

ಇನ್ನೂ ಬಿಜೆಪಿಯವರ(BJP) ಸುಳ್ಳಿಗೆ ಮರುಳಾಗಬೇಡಿ. ಸುಳ್ಳು ಹೇಳಿ ಮತ ಹಾಕಿಸಿಕೊಂಡು ಅಧಿಕಾರ ಪಡೆಯುವುದಷ್ಟೇ ಅವರಿಗೆ ಗೊತ್ತಿದೆ. ಇದರಿಂದ ಮತದಾರರು(Voters) ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ. ಗಂಗಾಧರಸ್ವಾಮಿ ಮಾತನಾಡಿ, ಕೆಲವರು ತಮ್ಮ ಗೆಲುವಿಗಾಗಿ ಮಾಟ-ಮಂತ್ರ(Balckmagic) ಮಾಡಿಸಿಕೊಂಡು ಪ್ರಚಾರ ಶುರು ಮಾಡಿದ್ದಾರೆ. ಮತದಾರರು ಜಾಗೃತರಾಗಿರಬೇಕು. ಸತ್ಯಕ್ಕೆ ಜಯ ಸಿಗಲಿದೆ ಎಂದರು.

ಇದಕ್ಕೂ ಮೊದಲು ಕನಕಾಚಲ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿ ವಿವಿಧ ವಾರ್ಡ್‌ಗಳಲ್ಲಿ ಸಭೆ ನಡೆಸಲಾಯಿತು. ಪ್ರಮುಖರಾದ ಅಮರೇಶ ಗೋನಾಳ, ರೆಡ್ಡಿ ಶ್ರೀನಿವಾಸ, ವೀರೇಶ ಸಮಗಂಡಿ, ರಮೇಶ ನಾಯಕ, ಸಿದ್ದಪ್ಪ ನಿರ್ಲೂಟಿ, ಎಸ್‌.ಐ. ಪಾಟೀಲ್‌, ಗುರುಸಿದ್ದಪ್ಪ ಹಾದಿಮನಿ, ಅಭ್ಯರ್ಥಿಗಳಾದ ಖಾದರಬಾಷಾ ಗುಡಿಹಿಂದಲ, ಸಿದ್ಧಾರ್ಥ ಕಲುಬಾಗಿಲಮಠ ಇದ್ದರು.

ಕಾಂಗ್ರೆಸ್ಸಿಗೆ ಬರಲಿದ್ದಾರೆ ಬಿಜೆಪಿ ನಾಯಕರು

ಬಿಜೆಪಿ ದುರಾಡಳಿತಕ್ಕೆ ಮತದಾರರು ಬೇಸತ್ತಿದ್ದು ಮುಂದಿನ ದಿನಗಳಲ್ಲಿ ಬಿಜೆಪಿಯ ಘಟಾನುಗಟಿ ನಾಯಕರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಅವರು ಪಟ್ಟಣದ 14 ಹಾಗೂ 16ನೇ ವಾರ್ಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಜನರು ಸರ್ಕಾರಿ ಕಚೇರಿಗೆ ಅಲೆಯುವುದು ತಪ್ಪಿಲ್ಲ. ಕ್ಷೇತ್ರದಲ್ಲಿ ಆಡಳಿತ ವೈಫಲ್ಯದಿಂದಾಗಿ ಜನರು ಬೇಸತ್ತಿದ್ದು ನಾಲ್ಕು ವರ್ಷದಲ್ಲಿ ಶಾಸಕ ಬಸವರಾಜ ದಢೇಸೂಗುರು(Basavaraj Dadesugur) ಅವರ ಅಭಿವೃದ್ಧಿ ಶೂನ್ಯವಾಗಿದೆ ಎಂದು ದೂರಿದರು.

ಬಿಜೆಪಿ ಸರ್ಕಾರಕ್ಕೆ ಜನ ಬೇಸತ್ತು ಹಿಡಿಶಾಪ: ಶಿವರಾಜ ತಂಗಡಗಿ

ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ನ್ಯಾಯ ಸಿಗದೆ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್‌ ಸೇರಲಿದ್ದು ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ತಿಳಿಸಿದರು.

ಮುಖಂಡ ಹನುಮೇಶ ವಾಲೇಕಾರ್‌ ಸೇರಿದಂತೆ 14 ಹಾಗೂ 16ನೇ ವಾರ್ಡಿನ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್‌ ಸೇರಿದರು. ಬ್ಲಾಕ್‌ ಅಧ್ಯಕ್ಷ ಗಂಗಾಧರಸ್ವಾಮಿ ಕೆ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಮುಖಂಡರಾದ ವೀರೇಶ ಸಮಗಂಡಿ, ಶರಣಪ್ಪ ಭತ್ತದ, ರವಿ ಪಾಟೀಲ್‌, ಟಿ.ಜೆ. ರಾಮಚಂದ್ರ, ಹುಲುಗಪ್ಪ ವಾಲೇಕಾರ, ಹೊನ್ನೂರುಸಾಬ್‌ ಉಪ್ಪು ಸೇರಿದಂತೆ ಭಜಂತ್ರಿ ಹಾಗೂ ಗಂಗಾಮತ ಸಮಾಜದ ಕಾರ್ಯಕರ್ತರು ಇದ್ದರು.

ಬರೀ ಲೂಟಿ ಹೊಡೆ​ಯುವ ಬಿಜೆಪಿ ಸರ್ಕಾರ: ರಾಯರೆಡ್ಡಿ

ಬಿಜೆಪಿ ಸರ್ಕಾರಕ್ಕೆ(BJP Government) ಬಡವರ ಬಗ್ಗೆ ಕಾಳಜಿ ಇಲ್ಲ. ಕೇವಲ ಲೂಟಿ ಹೊಡೆಯುವ ಸರ್ಕಾರ ಇದಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಹೇಳಿದರು. ಬಿಜೆಪಿಯವರಿಗೆ ಜನರ ಸಮಸ್ಯೆಗಳ ಬಗ್ಗೆ ಚಿಂತೆಯಿಲ್ಲ. ಬರೀ ಹಣ ಲೂಟಿ(Loot) ಹೊಡೆಯುವ ಕಾರ್ಯದಲ್ಲೇ ಮಗ್ನರಾಗಿದ್ದಾರೆ. ಇಂತಹ ಸರ್ಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದರು.
 

click me!