ಕಾಂಗ್ರೆಸ್ ಸರ್ಕಾರದಿಂದ ಫಲವತ್ತಾದ ಬೆಲೆ ಬಾಳುವ ಗಣಿಗಾರಿಕೆ ಭೂಮಿಯನ್ನು ಒಂದು ಎಕರೆಗೆ ಕೇವಲ 1.15 ಲಕ್ಷ ರೂ.ಗಳಂತೆ ಒಟ್ಟು 3,667 ಎಕರೆ ಭೂಮಿಯನ್ನು ಕೇವಲ 52 ಕೋಟಿ ರೂ.ಗೆ ಜಿಂದಾಲ್ ಕಂಪನಿಗೆ ಏಕಪಕ್ಷೀಯವಾಗಿ ಮಾರಾಟ ಮಾಡಿದ್ದಾರೆ.
ಮೈಸೂರು (ಆ.25): ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಫಲವತ್ತಾದ ಬೆಲೆ ಬಾಳುವ ಗಣಿಗಾರಿಕೆ ಭೂಮಿಯನ್ನು ಒಂದು ಎಕರೆಗೆ ಕೇವಲ 1.15 ಲಕ್ಷ ರೂ.ಗಳಂತೆ ಮಾರಾಟ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ 14 ಸೈಟ್‌ಗಳಿಗೆ 62 ಕೋಟಿ ರೂ. ಹಣ ಕೇಳುತ್ತಿದ್ದಾರೆ. ಆದರೆ, ಸರ್ಕಾರದ ಫಲವತ್ತಾದ 3,667 ಎಕರೆ ಗಣಿಗಾರಿಕೆ ಭೂಮಿಯನ್ನು ಕೇವಲ 52 ಕೋಟಿ ರೂ.ಗೆ ಜಿಂದಾಲ್ ಕಂಪನಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 3667 ಎಕರೆ ಗಣಿ ಭೂಮಿಯನ್ನ ಎಕರೆಗೆ 1 ಲಕ್ಷದ 15 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಆ ಭೂಮಿಯಲ್ಲಿ ಬೆಲೆ ಬಾಳುವ ಐರನ್,ಮಿನರಲ್ಸ್ ಸೇರಿದಂತೆ ಹಲವು ಖನಿಜಗಳಿವೆ. ಬೆಸ್ಟ್ ಓರಲ್ಸ್ ಸಿಗುವ 62% ಈಲ್ಡ್ ಬರುವ ಭೂಮಿಯನ್ನ ಜಿಂದಾಲ್ ಕಂಪನಿಗೆ ಏಕಪಕ್ಷಿಯವಾಗಿ ಮಾರಾಟ ಮಾಡಿದ್ದಾರೆ. ಈ ಭೂಮಿಗೆ ಯಾವುದೇ ಬೆಲೆಯನ್ನು ಕಟ್ಟೋಕೆ ಆಗೋದಿಲ್ಲ. 2017 ರಲ್ಲಿ ಭೂಮಾಪನ ಹಾಗೂ ಕಾನೂನು ಇಲಾಖೆಯ ಅನ್ವಯ ಭೂಮಿಗೆ ಇರುವ ಬೆಲೆಯನ್ನು ಆಧರಿಸಿ, ಭೂಮಿಯಲ್ಲಿರುವ ಅದಿರು ಪ್ರಮಾಣವನ್ನು ನೋಡಿ ಭೂಮಿ ಮಾರಾಟ ಮಾಡಬೇಕು ಎಂದು ವರದಿ ನೀಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿದ್ದಾರೆ ಎಂದು ಆರೋಪ ಮಾಡದರು.
undefined
ಸಿದ್ದರಾಮಯ್ಯ ಜೊತೆಗಿರುವಾಗ ದಲಿತ ಸಿಎಂ ಕೂಗು ಬರಲ್ಲ: ಹೆಚ್.ಸಿ. ಮಹದೇವಪ್ಪ
ಸರ್ಕಾರದಿಂದ ಮಾಡಲಾಗಿರುವ ಜನವಿರೋಧಿ ನೀತಿ ಈ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗುತ್ತದೆ. ಒಟ್ಟಾರೆ ಭೂಮಿಯ ಬೆಲೆ 52 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ. ಇವರು ತಮ್ಮ 14 ಸೈಟ್ ಗೆ 62 ಕೋಟಿ ರೂ. ಕೆಳ್ತಾರೆ, ಈ ಭೂಮಿಯನ್ನ ಒಟ್ಟಾರೆ 52 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಇದ್ಯಾವ ನ್ಯಾಯ. ಇದು ಹಲವಾರು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನ ಕ್ಯಾಬಿನೆಟ್ ಜಾಯಿಂಟ್ ಸೆಲೆಕ್ಟ್ ಕಮಿಟಿ ಮುಂದಿಡಲು ನಾನು ಹೇಳಿದ್ದೆ. ಈ ವಿಚಾರದಲ್ಲಿ ತರಾತುರಿ ಬೇಡ, ಸರ್ಕಾರದ ಆಸ್ತಿ ಜನರ ಆಸ್ತಿಯಾಗಿದೆ. ಇದನ್ನ ಜಾಯಿಂಟ್ ಸೆಲೆಕ್ಟ್ ಕಮಿಟಿ ಮುಂದಿಟ್ಟು ತಿರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಲತಂದೆಯಿಂದ ಇಬ್ಬರು ಹೆಣ್ಣುಮಕ್ಕಳ ಭೀಕರ ಕೊಲೆ!
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಸೈಟಿಗೆ ಸಂಬಂಧಿಸಿದ ಎಲ್ಲ ಫೈಲ್‌ಗಳನ್ನು ತಗೊಂಡು ಹೋಗಿದ್ದಾರೆ. ಮುಡಾಗೆ ಇಷ್ಟೋದು ಸೆಕ್ಯುರಿಟಿ ಯಾಕೆ? ಮುಡಾಗೆ ಪ್ರತಿ ತಿಂಗಳು 5 ಕೋಟಿ ರೂ. ಸಬಂಳ ಖರ್ಚು ವೆಚ್ಚಕ್ಕೆ ಬೇಕು. ಎರಡು ತಿಂಗಳಿಂದ 10 ಕೋಟಿ ರೂ. ಖರ್ಚಾಗಿದೆ. ಏನೂ ಕೆಲಸ ಮುಡಾದಿಂದ ನಡೆಯುತ್ತಿಲ್ಲ. ಸಿದ್ದರಾಮಯ್ಯ ಅವರು ಮುಡಾ ಹಗರಣಕ್ಕಾಗಿ ಒನ್ ಮ್ಯಾನ್ ಕಮಿಷನ್ ಮಾಡಿದ್ದಾರೆ. ಒನ್ ಮ್ಯಾನ್ ಕಮಿಷನ್ ಕುಮಾರಕೃಪದಿಂದ ಆಪರೇಟ್ ಆಗ್ತಾ ಇದೆ. ಒನ್ ಮ್ಯಾನ್ ಕಮಿಷನ್‌ಗಾಗಿಯೇ ಮೇಜು ಖುರ್ಚಿ ಅಂತಾ 1.5 ಕೋಟಿ ಖರ್ಚು ಆಗಿದೆ. ಇನ್ನು ಸಿದ್ದರಾಂಯ್ಯ ರೀ ಡು ವಿಚಾರದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿಬೇಕು. ಕೆಂಪಣ್ಣ ವರದಿ ಬಿಡುಗಡೆಯಾದರೆ, ಸಿದ್ದರಾಮಯ್ಯ ಪಂಚೆ ಶರ್ಟು ಎಲ್ಲ ಮಸಿ ಆಗೋದು ಗ್ಯಾರಂಟಿ ಎಂದು ವಾಗ್ದಾಳಿ ಮಾಡಿದರು.