
ಬೆಂಗಳೂರು, [ನ.02]: ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡಿದ್ದ ಪೊಲೀಸ್ ಅಧಿಕಾರಿ ಎಸ್. ಗಿರೀಶ್ ಗೆ ದೊಡ್ಡ ಪೋಸ್ಟ್ ನೀಡಲಾಗಿದೆ.
ಭ್ರಷ್ಟಾಚಾರ ಹಾಗೂ ಡಿನೋಟಿಫಿಕೇಷನ್ ಪ್ರಕರಣದಲ್ಲಿ 2011ರಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸಿದ್ದ ಗಿರೀಶ್ ಅವರನ್ನು ಇದೀಗ ಬೆಂಗಳೂರು ಪಶ್ಚಿಮ ಡಿಸಿಪಿಯಾಗಿ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಇಂದು [ಶನಿವಾರ] ಆದೇಶ ಹೊರಡಿಸಿದೆ.
ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅಳಿಯರಾಗಿರುವ ಗಿರೀಶ್, KSRP 9ನೇ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದರು. ಇದೀಗ ಅವರನ್ನು ಬೆಂಗಳೂರು ಪಶ್ಚಿಮ ಡಿಸಿಪಿಯಾಗಿ ಮಾಡಲಾಗಿದೆ. ಗಿರೀಶ್ ಗೆ ಉನ್ನತ ಹುದ್ದೆ ನೀಡಿರುವುದಕ್ಕೆ ಬಿಎಸ್ ವೈ ಆಪ್ತರಲ್ಲಿ ಅಸಮಾಧನಗಳು ವ್ಯಕ್ತವಾಗಿವೆ.
ಅನರ್ಹರ ಬೆನ್ನಿಗೆ ನಿಂತ Bsy ಸರ್ಕಾರ, ಕುಸಿಯಿತು ಚಿನ್ನದ ದರ; ಇಲ್ಲಿವೆ ನ.02ರ ಟಾಪ್ 10 ಸುದ್ದಿ!
ಸಿಎಂ ಬಿಎಸ್ ವೈ ಗೆ ಅಧಿಕಾರಿಯ ಹಿನ್ನೆಲೆ ಮುಚ್ಚಿಟ್ಟು ಉನ್ನತ ಹುದ್ದೆ ನೀಡಲಾಗಿದೆಯಾ..? ತಮ್ಮನ್ನು ಅರೆಸ್ಟ್ ಮಾಡಿದ್ದನ್ನು ಮರೆತು ಬಿಎಸ್ ವೈ ಉನ್ನತ ಹುದ್ದೆ ನೀಡಿದ್ರಾ..? ಅಥವಾ ಪ್ರಭಾವಕ್ಕೆ ಒಳಗಾಗಿ ಗಿರೀಶ್ ರನ್ನು ಪಶ್ಚಿಮ ವಲಯ ಡಿಸಿಪಿ ಮಾಡಲಾಯ್ತಾ..? ಹೀಗೆ ಹಲವು ಪ್ರಶ್ನೆಗಳ ಬಗ್ಗೆ ಯಡಿಯೂರಪ್ಪ ಆಪ್ತವಲಯದಲ್ಲಿ ಚರ್ಚೆಗಳು ಶುರುವಾಗಿದೆ.
ಒಟ್ಟಿನಲ್ಲಿ ಗಿರೀಶ್ ಅವರಿಗೆ ಉನ್ನತ ಹುದ್ದೆ ನೀಡಿ ವರ್ಗಾವಣೆ ಮಾಡಿರುವುದು ಬಿಜೆಪಿ ಪಾಳಯದೊಳಗೆ ಗಂಭೀರ ಚರ್ಚೆ ಹುಟ್ಟು ಹಾಕಿದೆ.
ಭ್ರಷ್ಟಾಚಾರ ಹಾಗೂ ಡಿನೋಟಿಫಿಕೇಷನ್ ಪ್ರಕರಣದ ಅಡಿಯಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಅಕ್ಟೋರ್ 15, 2011ರಂದು ಬಂಧಿಸಲಾಗಿತ್ತು. ಬಳಿಕ ನವೆಂಬರ್ 8, 2011ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.