Karnataka Govt Formation: ದೆಹಲಿ ತಲುಪಿದ ಡಿಕೆಶಿ, ಸೋನಿಯಾಗಾಂಧಿ ಭೇಟಿ ಡೌಟು

By Gowthami KFirst Published May 16, 2023, 12:43 PM IST
Highlights

ದೆಹಲಿ ತಲುಪಿರೋ ಸೋನಿಯಾಗಾಂಧಿಗೆ  ಡಿಕೆಶಿ ಭೇಟಿಯಾಗೋದು ಬಹುತೇಕ ಅನುಮಾನ ಎನ್ನಲಾಗಿದೆ.  

ನವದೆಹಲಿ (ಮೇ.16):  ಕರ್ನಾಟಕ ಸಿಎಂ‌ ಆಯ್ಕೆ ಕಸರತ್ತು ಹಿನ್ನೆಲೆ ಸೋನಿಯಾಗಾಂಧಿ ಅವರನ್ನು  ಡಿಕೆ ಶಿವಕುಮಾರ್ ಭೇಟಿಯಾಗೋದು ಬಹುತೇಕ ಅನುಮಾನ ಎನ್ನಲಾಗಿದೆ.  20ನೇ ತಾರೀಖಿನ ವರೆಗೆ ಸೋನಿಯಾ ದೆಹಲಿಗೆ ಬರೋದು ಅನುಮಾನ ಹೀಗಾಗಿ ಭೇಟಿ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ ಸಿಎಂ ಆಯ್ಕೆ ವಿಚಾರವನ್ನು ಹೊರಿಸಲಾಗಿದೆ. ಸೋನಿಯಾ ಭೇಟಿಗೆ ಅವಕಾಶ ಕಡಿಮೆ ಇರೋ ಹಿನ್ನೆಲೆ ಖರ್ಗೆಯವರ ಜೊತೆಗೆ ಡಿಕೆಶಿ  ಮಾತುಕತೆ ನಡೆಸಲಿದ್ದಾರೆ. 

ಕರ್ನಾಟಕ ಸಿಎಂ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಪಟ್ಟಕ್ಕಾಗಿ ಫೈಟ್ ಇದ್ದು, ಸಿದ್ದರಾಮಯ್ದಯ ನಿನ್ನೆಯೇ ದೆಹಲಿ ತಲುಪಿದ್ದಾರೆ. ಡಿಕೆ ಶಿವಕುಮಾರ್ ಇಂದು ದೆಹಲಿ ತಲುಪಿದ್ದಾರೆ, ರಾಜ್ಯದ ಸಿಎಂ ಆಯ್ಕೆ ಖರ್ಗೆಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದೆ. ಜೊತೆಗೆ ರಾಹುಲ್ ಗಾಂಧಿ ಭೇಟಿಗೆ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ದೆಹಲಿ ತಲುಪಿರೋ ಡಿಕೆಶಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಡಿಕೆ ಶಿವಕುಮಾರ್ ಗೆ ಸಹೋದರ ಡಿಕೆ ಸುರೇಶ್ ಸಾಥ್ ನೀಡಿದ್ದಾರೆ.

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಿಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ: ಲಕ್ಷ್ಮಣ ಸವದಿ

ರಾಹುಲ್-ಖರ್ಗೆ ವೈಯಕ್ತಿಕ ಮೀಟಿಂಗ್: ಇವೆಲ್ಲದರ ನಡುವೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಒನ್ ಟು ಒನ್ ಮೀಟಿಂಗ್ ಮಾಡುತ್ತಿದ್ದಾರೆ. ವೇಣುಗೋಪಾಲ ಸೇರಿ ಎಲ್ಲರನ್ನು ಹೊರಗಿಟ್ಟು ಈ ಸಭೆ ನಡೆಸಲಾಗುತ್ತಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಬರುವುದಕ್ಕೆ ಮುಂಚೆ ಈ ಸಭೆ ನಡೆಯುತ್ತಿದ್ದು, ಖರ್ಗೆ ನಿವಾಸದಲ್ಲಿ ಈ ಸಭೆ ನಡೆಯುತ್ತಿದೆ.

ಎಲ್ಲ ಕೆಲಸಕ್ಕೂ ಈ ಅಜ್ಜಯ್ಯನ ಅಪ್ಪಣೆಗೆ ಕಾಯ್ತಾರೆ ಡಿಕೆಶಿ, ಅವರ ಮಹಾತ್ಮೆ ಏನು?

ಡಿಕೆಶಿಗೆ ಸಿಎಂ ಹುದ್ದೆ ಕೊಡಬೇಕು: ಡಿಕೆ ಸುರೇಶ್ 
ಈಗಾಗಲೇ ನವದೆಹಲಿಯಲ್ಲಿರುವ ಡಿಕೆ ಸುರೇಶ್ ಅವರು ಡಿಕೆಶಿಗೆ ಸಿಎಂ ಹುದ್ದೆ ಕೊಡಬೇಕು ಅಂದು ಆಗ್ರಹಿಸಿದ್ದಾರೆ.  ಸೋನಿಯಾ ಗಾಂಧಿ ಪಕ್ಷವನ್ನ ಅಧಿಕಾರಕ್ಕೆ ತರಲು ಅಧ್ಯಕ್ಷ ಸ್ಥಾನ ಕೊಟ್ರು. ಈಗ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಶ್ರಮಕ್ಕೆ ಪ್ರತಿಫಲವನ್ನ ಕೇಳುತ್ತಿದ್ದೇನೆ. ಯಾರೂ ಹೊಣೆ ಹೊತ್ತುಕೊಳ್ಳಲು ಮುಂದಾಗದಾಗ ಡಿಕೆಶಿ ಮುಂದೆ ಬಂದರು. ಡಿಕೆಶಿ ವಿರುದ್ಧದ ಕೇಸ್ ರಾಜಕೀಯ ಪ್ರೇರಿತ. ಡಿಕೆಶಿ ಜೀವನವೇ ತೆರೆದ ಪುಸ್ತಕ. ಜನರಿಗೆ ಎಲ್ಲವೂ ಗೊತ್ತಿದೆ. ಹೈಕಮಾಂಡ್ ಸಿಎಂ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಮಾಹಿತಿ ಇಲ್ಲ. ಸಿದ್ದು ಸಿಎಂ ಆಗಿ ಆಯ್ಕೆ ಆಗಿದ್ದಾರೆ ಅನ್ನೊದು ವದಂತಿ ಎಂದಿದ್ದಾರೆ.

click me!