
ಉಡುಪಿ(ಮೇ.16): ಕಾರ್ಕಳದಲ್ಲಿ ಫಲಿತಾಂಶ ಬಂದರೂ ಗುರು ಶಿಷ್ಯರ ಕಾಳಗ ಮುಂದುವರಿಯುತ್ತಲೇ ಇದೆ. ಹೌದು, ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಕ್ಕೆ ಪ್ರಮೋದ್ ಮುತಾಲಿಕ್ ಸಹ ತಿರುಗೇಟು ನೀಡಿದ್ದಾರೆ. ವಿಜಯೋತ್ಸವ ಸಭೆಯಲ್ಲಿ ಮುತಾಲಿಕ್ ರನ್ನು ಸುನಿಲ್ ಕುಮಾರ್ ಡೀಲ್ ಮಾಸ್ಟರ್ ಎಂದು ಕರೆದಿದ್ದರು. ಹೀಗಾಗಿ ತನ್ನ ವಿರುದ್ಧದ ಆರೋಪಕ್ಕೆ ಪ್ರಮೋದ್ ಮುತಾಲಿಕ್ ಮಾರಿಗುಡಿಯಲ್ಲಿ ಪ್ರಮಾಣ ಮಾಡಿ ಬಂದಿದ್ದರು.
ಸುನಿಲ್ ಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನಿಡುದ ಪ್ರಮೋದ್ ಮುತಾಲಿಕ್, ನಾನು ಕೇವಲ ಆರೋಪ ಮಾಡಿಲ್ಲ ದಾಖಲೆಗಳನ್ನ ಬಹಿರಂಗಗೊಳಿಸಿದ್ದೇನೆ. ಅಭಿವೃದ್ಧಿ ಜೊತೆ ಕಮಿಷನ್ ಮತ್ತು ಕಲೆಕ್ಷನ್ ಕೂಡ ಮಾಡಿದ್ದೀರಿ. ನನ್ನನ್ನು ಡೀಲ್ ಮಾಸ್ಟರ್ ಎಂದು ಕರೆದಿದ್ದೀರಿ. ಹಣ ಗಳಿಸುವ ಉದ್ದೇಶ ಇದ್ದಿದ್ದರೆ ಧಾರವಾಡದಿಂದ ಕಾರ್ಕಳಕ್ಕೆ ಬರಬೇಕಾಗಿರಲಿಲ್ಲ. 48 ವರ್ಷ ಹೋರಾಟ ಮಾಡಬೇಕಾಗಿ ಇರಲಿಲ್ಲ. ನಾನು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಯಾವುದೇ ಉತ್ತರ ನೀಡಿಲ್ಲ. ಕಾರ್ಕಳಕ್ಕೆ ಬಂದು ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ, ಸುನಿಲ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು ಅಂತ ಕಿಡಿ ಕಾರಿದ್ದಾರೆ.
ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್ : ಸುನಿಲ್ ಕುಮಾರ್ ಆರೋಪ
ಕನ್ನಡಿ ಮುಂದೆ ನಿಂತು ಸುನಿಲ್ ಕುಮಾರ್ ಅವಲೋಕನ ಮಾಡಿಕೊಳ್ಳಬೇಕು. ಮಾಜಿ ಸಚಿವ ಈಶ್ವರಪ್ಪ ಇಂಧನ ಇಲಾಖೆ ಭ್ರಷ್ಟಾಚಾರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದರು. ಕಾರ್ಕಳದ ಅಧಿಕಾರಿಗಳು ಕೂಡ ಆರೋಪ ಮಾಡಿದ್ದರು. ಕಾರ್ಕಳದ ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡಿ ಬಂದಿದ್ದೇನೆ. ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡುವ ನೈತಿಕತೆ ನಿಮಗೆ ಇದೆಯಾ? ಅಂತ ಮುತಾಲಿಕ್ ಪ್ರಶ್ನಿಸಿದ್ದಾರೆ.
ಭ್ರಷ್ಟತೆ, ವಂಚನೆ, ಮೋಸದಿಂದ ಗೆದ್ದಿದ್ದೀರಿ ನಿಮಗೆ ಅಭಿನಂದನೆ. ಮತದಾನದಲ್ಲಿ ಸೋತಿರಬಹುದು ಹೋರಾಟ, ಹಿಂದುತ್ವ, ಸತ್ಯದಲ್ಲಿ ನಾನು ಸೋತಿಲ್ಲ. ನೀವು ನನಗೆ ಬುದ್ಧಿ ಕಲಿಸುವ ಅವಶ್ಯಕತೆ ಇಲ್ಲ ಆರ್‌ಎಸ್‌ಎಸ್ ಕಲಿಸಿದೆ. ತಾಕತ್ತಿದ್ದರೆ ನನ್ನ ಸವಾಲು ಸ್ವೀಕಾರ ಮಾಡಿ. ಮಾರಿಗುಡಿಗೆ ಹೋಗಿ ಪ್ರಮಾಣ ಮಾಡಿ, ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧ ಮಾಡಿ ಅಂತ ಬಹಿರಂಗ ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.